»   » ಬಿಗ್ ಬಾಸ್ ನಲ್ಲಿ ಇಬ್ಬರ ನಡುವೆ ಅಸಲಿ ಪೈಪೋಟಿ

ಬಿಗ್ ಬಾಸ್ ನಲ್ಲಿ ಇಬ್ಬರ ನಡುವೆ ಅಸಲಿ ಪೈಪೋಟಿ

Posted By:
Subscribe to Filmibeat Kannada

ಇದ್ದದ್ದನ್ನು ಇದ್ದಂಗೆ ತೋರಿಸುತ್ತಿರುವ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ 'ಬಿಗ್ ಬಾಸ್' ಶೋಗೆ ತೆರೆಬೀಳಲು ಇನ್ನು ಎರಡೇ ಎರಡು ದಿನ ಬಾಕಿ ಇದೆ. ಮೊದಲ ಸೀಸನ್ ನಲ್ಲಿ ಗೆಲುವು ಯಾರಿಗೆ ಎಂಬ ಬಗ್ಗೆ ತೀವ್ರ ಕುತೂಹಲ ನೆಲೆಸಿದೆ.

ಕಣದಲ್ಲಿ ನಾಲ್ಕು ಮಂದಿ ಉಳಿದಿದ್ದಾರೆ. ವಿಜಯ್ ರಾಘವೇಂದ್ರ, ಅರುಣ್ ಸಾಗರ್, ನರೇಂದ್ರ ಬಾಬು ಶರ್ಮಾ ಹಾಗೂ ನಿಕಿತಾ. ಮೂಲಗಳ ಪ್ರಕಾರ ಅಸಲಿ ಪೈಪೋಟಿ ಇರುವುದು ಅರುಣ್ ಸಾಗರ್ ಹಾಗೂ ವಿಜಯ್ ರಾಘವೇಂದ್ರ ನಡುವೆ ಎನ್ನಲಾಗಿದೆ.

Vijay Raghavendra

ಇವರಿಬ್ಬರಲ್ಲೇ ಒಬ್ಬರಿಗೆ ಗೆಲುವು ಗ್ಯಾರಂಟಿ ಎನ್ನುತ್ತವೆ ಮೂಲಗಳು. ಇವರಿಬ್ಬರೂ ಮೊದಲಿನಿಂದಲೂ ಯಾವುದೇ ವಿವಾದಕ್ಕೆ ಸಿಕ್ಕಿಹಾಕಿಕೊಳ್ಳದೆ ಜಾಣ್ಮೆಯಿಂದ ಆಟವನ್ನು ಆಡುತ್ತಿದ್ದು, ಎಲ್ಲಾ ಟಾಸ್ಕ್ ಗಳಲ್ಲೂ ಭಾಗವಹಿಸುತ್ತಾ ಬಂದಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ.

ಇನ್ನು ನಿಕಿತಾ ಹಾಗೂ ನರೇಂದ್ರ ಬಾಬು ಶರ್ಮಾ ಕೆಲವು ವಿಚಾರಗಳಲ್ಲಿ ಸೋತಿದ್ದಾರೆ. ನಿಕಿತಾ ಅವರಿಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂಬ ದೊಡ್ಡ ಅಪವಾದ ಇದೆ. ಈ ಅಪವಾದಕ್ಕೆ ತಕ್ಕಂತೆ ಅವರು ನಡೆದುಕೊಂಡಿದ್ದಾರೆ. ಇನ್ನು ಬ್ರಹ್ಮಾಂಡ ಶರ್ಮಾ ಅವರು ಮನೆಯಲ್ಲಿ ಬಹುತೇಕ ಸಮಯವನ್ನು ನಿದ್ದೆಯಲ್ಲೇ ಕಳೆದಿದ್ದಾರೆ.

ಕೆಲವೊಂದು ಟಾಸ್ಕ್ ಗಳಲ್ಲಿ ಬ್ರಹ್ಮಾಂಡ ಶರ್ಮಾ ಭಾಗವಹಿಸದೇ ಇರುವುದು. ಮೂರು ತಿಂಗಳ ಕಾಲ ಅಪ್ಪಟ ಕನ್ನಡಿಗರ ಜೊತೆಗೆ ಹಾಗೂ ಕನ್ನಡ ವಾತಾವರಣದಲ್ಲಿ ಇದ್ದರೂ ನಿಕಿತಾ ಕನ್ನಡ ಕಲಿಯದೆ ಇರುವುದು ನಿಜಕ್ಕೂ ಬೇಸರದ ಸಂಗತಿ. ಪರಭಾಷೆಯವರಿಗೆ ಕನ್ನಡ ಕಲಿಯುವುದು ಅಷ್ಟು ಕಷ್ಟವೆ? (ಒನ್ಇಂಡಿಯಾ ಕನ್ನಡ)

English summary
Who will win the first season of ETV Kannada reality show Bigg Boss? Arun Sagar, Vijay Raghavendra, Nikita Tukral and Narendra Babu Sharma have entered finals. Sources say, Vijay Raghavendra and Arun Sagar locked in keen contest to emerge winners, it would be anybodys game!
Please Wait while comments are loading...