»   » 'ಮಜಾ ಟಾಕೀಸ್'ನಲ್ಲಿ 'ಭುವನ್-ಸಂಜನಾ ಮದುವೆ': ಫಸ್ಟ್ ಲುಕ್ ರಿಲೀಸ್!

'ಮಜಾ ಟಾಕೀಸ್'ನಲ್ಲಿ 'ಭುವನ್-ಸಂಜನಾ ಮದುವೆ': ಫಸ್ಟ್ ಲುಕ್ ರಿಲೀಸ್!

By: BK
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ಮೂಲಕ ಬಾರಿ ಸುದ್ದಿಯಾಗಿರುವ ಭುವನ್ ಮತ್ತು ಸಂಜನಾ ಜೋಡಿ, ಇದೀಗ ಮಜಾ ಟಾಕೀಸ್ ನಲ್ಲಿ ಮತ್ತೆ ಒಂದಾಗಿದೆ.

'ಬಿಗ್ ಬಾಸ್' ಮನೆಯ ಪ್ರಣಯ ಪಕ್ಷಿಗಳೆಂದೇ ಗುರುತಿಸಿಕೊಂಡಿರುವ ಇವರಿಬ್ಬರು ಈಗ ಎಲ್ಲೋದ್ರೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಕಲರ್ಸ್ ಕನ್ನಡದಲ್ಲಿ ಮೂಡಿ ಬರುವ 'ಮಜಾ ಟಾಕೀಸ್'.[ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ !]

Bigg Boss Sanjana And Bhuvan Marriage in Maja Talkies

'ಬಿಗ್ ಬಾಸ್' ಮನೆಯಿಂದ ಹೊರಬಂದ ಮೇಲೆ 'ಐಸ್ ಪಾರ್ಲರ್'ವೊಂದರಲ್ಲಿ ಸಂಜನಾ-ಭುವನ್ ಭೇಟಿಯಾಗಿದ್ದರು. ಇನ್ನೂ 'ಬಿಗ್ ಬಾಸ್ ಕನ್ನಡ 4' ಗ್ರ್ಯಾಂಡ್ ಫಿನಾಲೆಯಲ್ಲೂ ಒಟ್ಟಾಗಿ ಇಬ್ಬರು ಫರ್ಫಾಮೆನ್ಸ್ ನೀಡಿದ್ದರು.['ಐಟಂ ಹುಡುಗಿ'ಯಾದ 'ಬಿಗ್ ಬಾಸ್' ಸಂಜನಾ!]

ಅದಾದ ಬಳಿಕ ಈಗ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಭುವನ್-ಸಂಜನಾ ಮತ್ತೆ ಒಟ್ಟಾಗಿ ಪ್ರತ್ಯಕ್ಷವಾಗಿದ್ದಾರೆ. ವಿಶೇಷ ಅಂದ್ರೆ, 'ಮಜಾ ಟಾಕೀಸ್'ನಲ್ಲಿ ಇವರಿಬ್ಬರು ಮದುವೆಯಾಗುತ್ತಿರುವ ಹಾಗೂ ಅಕ್ಷತೆ ಹಾಕುವ ರೀತಿಯಲ್ಲಿ ಟಾಸ್ಕ್ ನೀಡಲಾಗಿದೆ ಎನ್ನಲಾಗುತ್ತಿದೆ.['ಬಿಗ್ ಬಾಸ್'ನಿಂದ ಹೊರಬಂದ ಮೇಲೆ ಸಂಜನಾ-ಭುವನ್ ಮೊದಲ ಭೇಟಿ!]

ಅಂದ್ಹಾಗೆ, ಈ ವಾರದ 'ಮಜಾ ಟಾಕೀಸ್'ನಲ್ಲಿ ಬಿಗ್ ಬಾಸ್ ಸ್ವರ್ಧಿಗಳು ಭಾಗಿಯಾಗಿದ್ದು, ಬಿಗ್ ಬಾಸ್ ವಿನ್ನರ್ ಪ್ರಥಮ್, ರನ್ನರ್ ಕೀರ್ತಿ, ಸೇರಿದಂತೆ ರೇಖಾ, ಕಾವ್ಯ, ನಿರ್ದೇಶಕ ಓಂ ಪ್ರಕಾಶ್ ರಾವ್, ಸಂಜನಾ, ಭುವನ್ ಮತ್ತು ಇತರರು ಪಾಲ್ಗೊಂಡಿದ್ದಾರೆ. ಈಗಾಗಲೇ ರೆಕಾರ್ಡಿಂಗ್ ಮುಗಿಸಿರುವ ಈ ಎಪಿಸೋಡ್ ಈ ವಾರಂತ್ಯಕ್ಕೆ ಪ್ರಸಾರವಾಲಿದೆ.

English summary
After Finishing Bigg Boss Kannada 4, Actor Bhuvan Ponnanna And Actress Sanjana Participate to Maja Talkies together.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada