For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್: ಐದನೇ ವಾರ ಮನೆಯಿಂದ ಹೊರಬಿದ್ದವರು ಯಾರು?

  |

  ಬಿಗ್‌ಬಾಸ್ ಕನ್ನಡ ಸೀಸನ್‌ 9 ರ ಐದನೇ ವಾರ ಪೂರ್ಣಗೊಂಡಿದೆ. ಭಾನುವಾರ ಸಂಜೆ ಎಪಿಸೋಡ್‌ನಲ್ಲಿ ವಾರದ ಪಂಚಾಯಿತಿ ನಡೆಸಿದ ಕಿಚ್ಚ ಸುದೀಪ್ ಎಲ್ಲರನ್ನೂ ಚೆನ್ನಾಗಿ ನಗಿಸಿದ್ದಾರೆ. ಕೆಲವರಿಗೆ ಬುದ್ಧಿವಾದ ಹೇಳಿದ್ದಾರೆ. ಸರಿ-ತಪ್ಪು ವಿಶ್ಲೇಷಿಸಿದ್ದಾರೆ.

  ಪ್ರತಿ ವಾರವೂ ಒಬ್ಬೊಬ್ಬರು ಮನೆಯಿಂದ ಹೊರಗೆ ಹೋಗಬೇಕಾಗಿರುವುದು ವಾಡಿಕೆ. ಅಂತೆಯೇ ಈ ವಾರ ನಟಿ ನೇಹಾ ಗೌಡ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.

  ಗೊಂಬೆ ಎಂದೇ ಖ್ಯಾತಿಯಾಗಿರುವ ನೇಹಾ ಗೌಡ ಮನೆಯ ಉಳಿದ ಸದಸ್ಯರಿಗೆ ಹೋಲಿಸಿದರೆ ಕಡಿಮೆ ಸಕ್ರಿಯರಾಗಿದ್ದರು. ಹಾಗಾಗಿ ಅವರ ಎಲಿಮಿನೇಶನ್ ಆಗಿದೆ.

  ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ಆರ್ಯವರ್ಧನ್, ಪ್ರಶಾಂತ್ ಸಂಬರ್ಗಿ, ನೇಹಾ ಗೌಡ, ಅಮೂಲ್ಯ, ಕಾವ್ಯಶ್ರೀ ಗೌಡ, ಆರ್ಯವರ್ಧನ್ ಅವರುಗಳು ಈ ವಾರ ನಾಮಿನೇಟ್ ಆಗಿದ್ದರು. ಶನಿವಾರದ ಸಂಚಿಕೆಯಲ್ಲಿ ಕಾವ್ಯಶ್ರೀ ಗೌಡ, ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಸೇಫ್ ಆಗಿದ್ದರು. ಭಾನುವಾರದ ಸಂಚಿಕೆಯಲ್ಲಿ ನೇಹಾ ಗೌಡ ಎಲಿಮಿನೇಶನ್ ಆಗಿ ಉಳಿದ ಸದಸ್ಯರು ಸೇಫ್ ಆದರು.

  ನೇಹಾ ಗೌಡ ಚೆನ್ನಾಗಿಯೇ ಆಡುತ್ತಿದ್ದರು, ಆದರೆ ಮನೆಯಲ್ಲಿ ಇತರ ಸ್ಪರ್ಧಿಗಳಿಗೆ ಹೋಲಿಸಿದರೆ ನೇಹಾ ಗೌಡ ವೀಕ್ ಎಂದು ಪ್ರೇಕ್ಷಕರಿಗೆ ಅನಿಸಿರಬಹುದು.

  Bigg Boss Season 09 Kannada: Neha Gowda Got Eliminated From The House

  ಪ್ರತಿವಾರವೂ, ಆಯಾ ವಾರ ಯಾರು ಚೆನ್ನಾಗಿ ಆಡಿರುತ್ತಾರೆಯೊ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುವುದು ಸಾಮಾನ್ಯ. ಆದರೆ ಈ ವಾರ ಯಾರಿಗೂ ಕಿಚ್ಚನ ಚಪ್ಪಾಳೆ ಸಿಗಲಿಲ್ಲ. ಈ ವಾರ ಚಪ್ಪಾಳೆಗೆ ಅರ್ಹವಾಗಿ ಯಾರೂ ಆಡಲಿಲ್ಲ ಎಂದರು ಸುದೀಪ್.

  ಈವರೆಗೆ ಬಿಗ್‌ಬಾಸ್ ಮನೆಯಿಂದ ಐದು ಮಂದಿ ಹೊರಗೆ ಹೋಗಿದ್ದಾರೆ. ಐಶ್ವರ್ಯಾ ಪಿಸೆ, ಮಯೂರಿ, ನವಾಜ್, ದರ್ಶ್ ಚಂದಪ್ಪ ಅವರುಗಳು ಎಲಿಮಿನೇಟ್ ಆಗಿದ್ದಾರೆ. ಮನೆಯಲ್ಲಿ ಅರುಣ್ ಸಾಗರ್, ಪ್ರಶಾಂತ್ ಸಂಬರ್ಗಿ, ದೀಪಿಕಾ ದಾಸ್, ಅನುಪಮಾ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ಆರ್ಯವರ್ಧನ್, ರೂಪೇಶ್ ಶೆಟ್ಟಿ, ಕಾವ್ಯಶ್ರೀ, ವಿನೋದ್ ಗೊಬ್ರಗಾಲ, ಸಾನ್ಯಾ ಐಯ್ಯರ್, ಅಮೂಲ್ಯ, ದಿವ್ಯಾ ಉರುಡುಗ ಉಳಿದಿದ್ದಾರೆ.

  English summary
  Bigg Boss season 9 Kannada: Neha Gowda got eliminated from the house. 13 members were in the house now.
  Monday, October 31, 2022, 7:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X