Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರೂಪೇಶ್ ಶೆಟ್ಟಿ ಬಿಗ್‌ಬಾಸ್ ಗೆಲುವಿನ ಹಿಂದಿದೆ ದೈವದ ಶಕ್ತಿ!?
ಬಿಗ್‌ಬಾಸ್ ಸೀಸನ್ 09 ರ ವಿಜೇತರಾಗಿ ರೂಪೇಶ್ ಶೆಟ್ಟಿ ಗೆಲುವು ಸಾಧಿಸಿದ್ದಾರೆ ಪ್ರತಿಬಾರಿಯಂತೆ ಬಿಗ್ ಬಾಸ್ ಟ್ರೋಫಿ ಗೆಲ್ಲಲು ರೂಪೇಶ್ ಶೆಟ್ಟಿಗೆ ಅರ್ಹತೆ ಇರಲಿಲ್ಲ ಎಂದು ಕೆಲವರು ಹೇಳಿದ್ದಾರೆ. ರೂಪೇಶ್ ಶೆಟ್ಟಿ ಬದಲು ರಾಕೇಶ್ ಅಡಿಗ ಅಥವಾ ರೂಪೇಶ್ ರಾಜಣ್ಣ ಗೆಲ್ಲಬೇಕಿತ್ತು ಎಂದು ಹೇಳುತ್ತಿದ್ದಾರೆ. ಇದೆಲ್ಲದರ ಮಧ್ಯದಲ್ಲಿ ರೂಪೇಶ್ ಶೆಟ್ಟಿ ಬಿಗ್ ಬಾಸ್‌ನಲ್ಲಿ ವಿನ್ನರ್ ಆಗಿದ್ದಾರೆ.
ರೂಪೇಶ್ ಶೆಟ್ಟಿ ಅವರು ಒಟಿಟಿನಲ್ಲಿ ಇದ್ದ ರೀತಿ ಟಿವಿ ಪರದೆಯ ಮೇಲೆ ಕಾಣಲಿಲ್ಲ. ಬಿಗ್ ಬಾಸ್ ಟ್ರೋಫಿ ಗೆಲ್ಲಲು ಸಾಕಷ್ಟು ಏರಿಳಿತಗಳನ್ನು ಕಂಡರು. ರೂಪೇಶ್ ಶೆಟ್ಟಿ ಹಲವಾರು ನೆಗೆಟಿವ್ ಟೀಕೆಗಳನ್ನು ಕೇಳಿದರು. ಇದೆಲ್ಲವನ್ನೂ ಮೀರಿ ರೂಪೇಶ್ ಶೆಟ್ಟಿ ಗೆಲುವು ಸಾಧಿಸಿದ್ದಾರೆ.
ರೂಪೇಶ್ ಶೆಟ್ಟಿ ಗೆಲ್ಲಲು ಮಾಡಿದ ಪ್ರಾರ್ಥನೆ ಮಾತ್ರ ಯಾರಿಗೂ ಗೊತ್ತಿಲ್ಲ. ಇಷ್ಟು ದಿನ ರೂಪೇಶ್ ಶೆಟ್ಟಿ ಕರಾವಳಿ ಭಾಗದವರಿಗೆ ಮಾತ್ರ ಗೊತ್ತಿದ್ದರು. ಈಗ ಬಿಗ್ ಬಾಸ್ ವಿನ್ನರ್ ಆಗಿ ಕರ್ನಾಟಕದ ತುಂಬೆಲ್ಲ ಮನೆಮಾತನಾದರು.
ಈ ಬಾರಿಯ ಬಿಗ್ ಬಾಸ್ ಮಾತ್ರ ಬೇರೆ ಸೀಸನ್‌ಗಳಿಗಿಂತ ಭಿನ್ನವಾಗಿತ್ತು. ಈ ಬಾರಿ ಯಾರು ಗೆಲ್ಲುತ್ತಾರೆ ಎಂದು ಕೊನೆಯವರೆಗೂ ಗೊತ್ತಿರಲಿಲ್ಲ ಫಿನಾಲೆಯವರೆಗೂ ಸಹ ಯಾರಿಗೂ ಗೊತ್ತಿರಲಿಲ್ಲ. ಕೊನೆಯ ನಾಲ್ಕು ಮಂದಿಯು ಸಹ ಟಫ್ ಕಾಂಪಿಟೇಟರ್ ಆಗಿದ್ದರು. ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಅವರ ಮಧ್ಯೆ ರೂಪೇಶ್ ಶೆಟ್ಟಿ ಒಳ್ಳೆಯ ಸ್ಫರ್ದಿಯಾಗಿದ್ದರು. ಈ ನಾಲ್ಕು ಜನರ ಮಧ್ಯೆ ಟ್ರೋಫಿ ಗೆಲ್ಲೋದು ಸಾಮಾನ್ಯವಾಗಿರಲಿಲ್ಲ.

ಸಾನಿಯಾ-ರೂಪೇಶ್ ನಡುವೆ ಸ್ನೇಹ
ಸೀಸನ್ 9 ರಲ್ಲಿ ರೂಪೇಶ್ ಶೆಟ್ಟಿ ಇದ್ದಾಗ ಸಾನಿಯಾ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ಮಧ್ಯೆ ಒಳ್ಳೆಯ ಸ್ನೇಹವಿತ್ತು. ಸಾನಿಯಾ ಹೊರಗೆ ಹೋದ ಮೇಲೆ ರೂಪೇಶ್ ಶೆಟ್ಟಿ ಮಂಕಾಗಿದ್ದರು. ನಂತರ ಸುದೀಪ್ ಮತ್ತೆ ಕಿವಿ ಹಿಂಡುವ ಕೆಲಸವನ್ನು ಮಾಡಿದರು. ಮಾನಸಿಕವಾಗಿ ರೂಪೇಶ್ ಶೆಟ್ಟಿ ಕುಗ್ಗಿ ಹೋಗಿದ್ದರು. ಎರಡು ವಾರ ರೂಪೇಶ್ ಶೆಟ್ಟಿ ಒಳ್ಳೆಯ ಫಾರ್ಮಮೆನ್ಸ್ ತೋರಲಿಲ್ಲ. ಇದೇ ರೀತಿ ಆಗಿದ್ದರೆ ರೂಪೇಶ್ ರಾಜಣ್ಣನೋ, ರಾಕೇಶ್ ಅಡಿಗನೋ ಗೆಲ್ಲಬೇಕಿತ್ತು. ಇದು ಅವರ ಅಭಿಮಾನಿಗಳಲ್ಲಿ ಸಹ ಭಯವನ್ನು ತಂದಿತ್ತು. ರೂಪೇಶ್ ಶೆಟ್ಟಿ ಆಗಾಗ ಮೌನಕ್ಕೆ ಶರಣಾಗುತ್ತಿದ್ದರು, ಕುಗ್ಗಿದ ಸಂದರ್ಭದಲ್ಲಿ ನಂತರ ಪುಟಿದೇಳುತ್ತಿದ್ದರು.

ರೂಪೇಶ್ ಶೆಟ್ಟಿ ಗೆಲ್ಲಲು ಕೊರಗಜ್ಜನ ಆಶೀರ್ವಾದ ಕಾರಣ
ರೂಪೇಶ್ ಶೆಟ್ಟಿ ಸಾನಿಯಾ ಜೊತೆಯಲ್ಲಿ ಕೊರಜ್ಜನ ಬಗ್ಗೆ ಹೇಳಿಕೊಂಡಿದ್ದರು. ನಾನು ನೀನು ಕೊರಗಜ್ಜನ ಕ್ಷೇತ್ರಕ್ಕೆ ಜೊತೆಯಾಗಿ ಹೋಗೋಣ ಎಂದು ಹೇಳಿದರು. ಅವರ ಆಶೀರ್ವಾದ ಪಡೆಯೋಣ ಎಂದು ಹೇಳಿದ್ದರು. ಈ ಬಗ್ಗೆ ಬಿಗ್ ಬಾಸ್‌ನಿಂದ ಹೊರಬಂದ ಮೇಲೆ ಸಾನಿಯಾ ಸಹ ಟಿವಿಯಲ್ಲಿ ನಡೆದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ನಾನು ರೂಪೇಶ್ ಶೆಟ್ಟಿ ಕೊರಗಜ್ಜನ ಸನ್ನಿಧಾನಕ್ಕೆ ಹೋಗುತ್ತೇವೆ ಎಂದು ಸಾನಿಯಾ ಹೇಳಿದರು. ಈಗ ಕಾಂತಾರ ಸಿನಿಮಾ ಬಂದ ನಂತರ ದೈವಗಳನ್ನು ನಂಬುವುದು ಹೆಚ್ಚಾಗಿದೆ. ಶಿವರಾಜ್ ಕುಮಾರ್ ಅವರು ಸಹ ಕೊರಗಜ್ಜನ ಸನ್ನಿಧಾನಕ್ಕೆ ಹೋಗಿದ್ದರು. ಬೇರೆ ಬೇರೆ ಸೆಲೆಬ್ರಿಟಿಗಳು ಸಹ ಕೊರಗಜ್ಜನ ಕ್ಷೇತ್ರಕ್ಕೆ ಹೋಗಿದ್ದಾರೆ.

ಕೊರಗಜ್ಜನಿಗೆ ಹರಕೆ ಹೊತ್ತಿದ್ದ ರೂಪೇಶ್ ಶೆಟ್ಟಿ
ಇದೇ ರೀತಿಯಲ್ಲಿ ರೂಪೇಶ್ ಶೆಟ್ಟಿ ಮನಸಿನಲ್ಲಿ ಒಂದು ಪ್ರಾರ್ಥನೆಯನ್ನು ಮಾಡುತ್ತಾರೆ. ಅದೇನು ಎಂದರೆ ನಾನು ಬಿಗ್ ಬಾಸ್ ಟ್ರೋಫಿಯನ್ನು ಗೆದ್ದುಕೊಂಡು ಕೊರಗಜ್ಜನ ಕ್ಷೇತ್ರಕ್ಕೆ ಹೋಗುತ್ತೇನೆ ಎಂದು ಮನಸಿನಲ್ಲೇ ಸಂಕಲ್ಪ ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ರೂಪೇಶ್ ಶೆಟ್ಟಿ ಕೊರಗಜ್ಜನನ್ನು ಬಹಳ ಭಕ್ತಿಯಿಂದ ಕಾಣುತ್ತಾರೆ. ಕರಾವಳಿ ಭಾಗದಲ್ಲಿ ಕೊರಗಜ್ಜನ ಮೇಲೆ ಅಪಾರವಾದ ಭಕ್ತಿ ಹಾಗೂ ನಂಬಿಕೆ ಇದೆ.ಕೊರಗಜ್ಜ ಬೇಡಿಕೊಂಡಿದ್ದನ್ನು ಕೊಡುತ್ತಾರೆ ಎಂದು ದೈವವನ್ನು ಅಪಾರವಾಗಿ ನಂಬುತ್ತಾರೆ. ಕೊರಗಜ್ಜ ಸಹ ನನ್ನ ಭಕ್ತರು ನಂಬಿದಾಗ ಕೈ ಬಿಡುವುದಿಲ್ಲ. ಇದೀಗ ರೂಪೇಶ್ ಶೆಟ್ಟಿ ಪ್ರಾರ್ಥನೆ ಫಲಿಸಿ ಬಿಗ್ ಬಾಸ್ ಟ್ರೋಫಿ ರೂಪೇಶ್ ಕೈ ಸೇರಿದೆ. ಮತ್ತೊಮ್ಮೆ ಕೊರಗಜ್ಜನ ಪವಾಡ ಸಾಬೀತಾಗಿದೆ. ಕೊರಗಜ್ಜ ತಾನು ನಂಬಿದ ರೂಪೇಶ್ ಶೆಟ್ಟಿ ಅವರ ಕೈಯನ್ನು ಬಿಡದೇ ಗೆಲುವಿನ ದಡವನ್ನು ಸೇರಿಸಿದ್ದಾರೆ. ಇದೇ ರೀತಿ ಮುಂದೆಯೂ ಸಹ ಒಳ್ಳೆಯದು ಮಾಡಲಿ ಎಂಬುದೇ ನಮ್ಮ ಆಶಯವಾಗಿದೆ.