For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ಸೀಸನ್ 2' ಸುವರ್ಣ ಪಾಲಾಗಿದೆಯೇ?

  By ಉದಯರವಿ
  |

  ಕನ್ನಡ ಕಿರುತೆರೆ ದುನಿಯಾದಲ್ಲಿ ಸಾಕಷ್ಟು ವಾದ-ವಿವಾದ, ಚರ್ಚೆ ಹುಟ್ಟುಹಾಕಿದ್ದಂತಹ ರಿಯಾಲಿಟಿ ಶೋ 'ಬಿಗ್ ಬಾಸ್'. ಈವಿಟಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಈ ರಿಯಾಲಿಟಿ ಶೋ ಆ ವಾಹಿನಿಯ ಟಿಆರ್ ಪಿಯನ್ನು ಮೇಲಕ್ಕೆತ್ತಿದ್ದಷ್ಟೇ ಅಲ್ಲದೆ ಉಳಿದ ವಾಹಿನಿಗಳ ನಿದ್ದೆಗೆ ಬರೆ ಎಳೆದಿತ್ತು.

  ಇದೀಗ 'ಬಿಗ್ ಬಾಸ್ ಸೀಸನ್ 2'ಗೆ ವೇದಿಕೆ ಸಿದ್ಧವಾಗುತ್ತಿದೆ. ಮೂಲಗಳ ಪ್ರಕಾರ ಎರಡು ವಾಹಿನಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆಯಂತೆ. 'ಸೀಸನ್ 1' ಪ್ರಸಾರವಾಗಿದ್ದ ಈಟಿವಿ ಕನ್ನಡ ಹಾಗೂ ಸ್ಟಾರ್ ನೆಟ್ ವರ್ಕ್ಸ್ ಒಡೆತನದ ಸುವರ್ಣ ವಾಹಿನಿಯ ನಡುವೆ ಸಮರ ಶುರುವಾಗಿದೆ ಎನ್ನುತ್ತವೆ ಮೂಲಗಳು. ['ಬಿಗ್ ಬಾಸ್ ಸೀಸನ್ 2' ಸ್ಪರ್ಧಿಗಳು ಇವರೇನಾ ಸ್ವಾಮಿ?]

  ಎಂಡಮೋಲ್ ಕಂಪನಿ ಈ ಬಾರಿ ಬಿಗ್ ಬಾಸ್ 'ಸೀಸನ್ 2' ಶೋವನ್ನು ಸುವರ್ಣ ವಾಹಿನಿಗೆ ನೀಡಲು ನಿರ್ಧರಿಸಿದೆಯಂತೆ. ಈ ಬಾರಿ ಶೋ ಚೆನ್ನೈನಲ್ಲಿ ಚಿತ್ರೀಕರಿಸಲಿದ್ದಾರೆ ಎಂಬ ಸುದ್ದಿ ಇದ್ದು ಅನುಮಾನಗಳನ್ನು ಇನ್ನಷ್ಟು ಬಲಪಡಿಸುತ್ತಿವೆ. ಅಂತಿಮವಾಗಿ ಯಾರಿಗೆ ಡೀಲ್ ಸಿಗುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ.

  ಈ ಬಾರಿಯ ಬಿಗ್ ಬಾಸ್ ಸೀಸನ್ 2 ನಲ್ಲಿ ಯಾರೆಲ್ಲಾ ಸ್ಪರ್ಧಿಗಳಿರುತ್ತಾರೆ ಎಂಬ ಬಗ್ಗೆ ಈಗಾಗಲೇ ಊಹಾಪೋಹಗಳು ಶುರುವಾಗಿವೆ. ಇದರ ಜೊತೆಗೆ ಈಗ ಯಾವ ವಾಹಿನಿಯಲ್ಲಿ 'ಬಿಗ್ ಬಾಸ್' ಮೂಡಿಬರಲಿದೆ ಎಂಬುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

  ಸುವರ್ಣ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ಹಾಗೂ ಈಟಿವಿ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋಗಳ ನಡುವೆ ಸಖತ್ ಪೈಪೋಟಿ ಇತ್ತು. 2014ರಲ್ಲಿ ಈ ಎರಡೂ ರಿಯಾಲಿಟಿ ಶೋಗಳು ಇರುವುದಿಲ್ಲ ಎಂಬ ಸುದ್ದಿ ಇತ್ತು. ಇದೀಗ 'ಬಿಗ್ ಬಾಸ್' ಬಿಗ್ ಫೈಟ್ ಶುರುವಾಗಿದೆ.

  English summary
  This time which channel to air Kananda reality show 'Bigg Boss season 2'. Sources says, Endemol company, is an international television production and distribution company owned by Italian media conglomerate Mediaset, decide to give rights to Star Networks Suvarna Channel. But other sources denies the speculation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X