For Quick Alerts
  ALLOW NOTIFICATIONS  
  For Daily Alerts

  Bigg Boss: ತಮಿಳು ಬಿಗ್‌ಬಾಸ್ ಗೆದ್ದ ಸ್ಪರ್ಧಿಗೆ ಸಿಕ್ಕ ಹಣವೆಷ್ಟು? ಬಹುಮಾನ ಏನು?

  By ಫಿಲ್ಮಿಬೀಟ್ ಡೆಸ್ಕ್
  |

  ಕನ್ನಡ ಬಿಗ್‌ಬಾಸ್ ಸೀಸನ್ 9 ಮುಗಿದ ಕೆಲವೇ ದಿನಗಳ ಬಳಿಕ ಇದೀಗ ತಮಿಳು ಬಿಗ್‌ಬಾಸ್ ಸೀಸನ್ 06 ಮುಗಿದಿದ್ದು 21 ಮಂದಿ ಸ್ಪರ್ಧಿಗಳ ಪೈಕಿ ಅಜೀಮ್ ವಿಜೇತರಾಗಿ ಹೊರಹೊಮ್ಮಿದ್ದಾರೆ.

  ನೂರು ದಿನಗಳ ಕಾಲ ನಡೆದ ಶೋನ ಫಿನಾಲೆಯು ಸುಮಾರು ಐದು ಗಂಟೆಗಳ ಕಾಲ ನಡೆದಿದ್ದು, ವಿಕ್ರಮನ್, ಶಿವಿನ್ ಹಾಗೂ ಅಜೀಮ್ ಫೈನಲಿಸ್ಟ್‌ಗಳಾಗಿದ್ದರು. ವಿಕ್ರಮನ್, ಶಿವಿನ್ ಅವರನ್ನು ಹಿಂದಿಕ್ಕಿ ಅಜೀಮ್ ಬಿಗ್‌ಬಾಸ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ.

  ತಮಿಳು ಬಿಗ್‌ಬಾಸ್ ವಿಜೇತರಿಗೂ ಉತ್ತಮ ಮೊತ್ತದ ಬಹುಮಾನವೇ ದೊರೆತಿದೆ. ಅಜೀಮ್‌ಗೆ 34 ಲಕ್ಷ ರುಪಾಯಿ ನಗದು ಹಾಗೂ ಒಂದು ಹೊಸ ಮಾರುತಿ ಸ್ವಿಫ್ಟ್ ಕಾರನ್ನು ಉಡುಗೊರೆಯನ್ನಾಗಿ ನೀಡಲಾಗಿದೆ.

  ಬಹುಮಾನದ ಒಟ್ಟು ಮೊತ್ತ 50 ಲಕ್ಷವಾಗಿತ್ತು. ಆದರೆ ಟಾಸ್ಕ್‌ನಲ್ಲಿ ಮೂರು ಲಕ್ಷ ಹಣವನ್ನು ಸ್ಪರ್ಧಿಗಳು ಪೋಲು ಮಾಡಿದರು. ಉಳಿದ ಹಣದಲ್ಲಿ ಸ್ಪರ್ಧಿ ಅಮುಧವನನ್ 13 ಲಕ್ಷ ಪಡೆದುಕೊಂಡು ಬಿಗ್‌ಬಾಸ್ ಮನೆಯಿಂದ ಹೊರಗೆ ನಡೆದರು. ಉಳಿದ 34 ಲಕ್ಷ ಹಣವನ್ನು ಬಿಗ್‌ಬಾಸ್ ಗೆದ್ದ ಅಜೀಮ್‌ಗೆ ನೀಡಲಾಯಿತು.

  ತಮಿಳು ಬಿಗ್‌ಬಾಸ್‌ಗೆ ಹೋಲಿಸಿದರೆ ಕನ್ನಡ ಬಿಗ್‌ಬಾಸ್‌ನಲ್ಲಿ ದೊಡ್ಡ ಮೊತ್ತವನ್ನೇ ನೀಡಲಾಗಿದೆ. ಕನ್ನಡ ಬಿಗ್‌ಬಾಸ್ ಗೆದ್ದ ರೂಪೇಶ್ ಶೆಟ್ಟಿಗೆ 60 ಲಕ್ಷ ಹಣ ನೀಡಲಾಗಿದೆ. ಅಷ್ಟು ಮಾತ್ರವೇ ಅಲ್ಲದೆ, ಕೊನೆಯ ವಾರದ ವರೆಗೆ ಬಂದ ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಹಾಗೂ ರಾಕೇಶ್ ಅಡಿಗಗೂ ನಗದು ಬಹುಮಾನಗಳನ್ನು ನೀಡಲಾಗಿದೆ.

  English summary
  Tamil Bigg Boss season 06: How much prize money did winner Azeem received. Bigg Boss Tamil ended recently.
  Monday, January 23, 2023, 18:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X