»   » ಕಲರ್ಸ್ ಕನ್ನಡದಲ್ಲಿ 'ಕಿರಿಕ್ ಪಾರ್ಟಿ' ನೋಡುವ ಸೂಪರ್ ಚಾನ್ಸ್

ಕಲರ್ಸ್ ಕನ್ನಡದಲ್ಲಿ 'ಕಿರಿಕ್ ಪಾರ್ಟಿ' ನೋಡುವ ಸೂಪರ್ ಚಾನ್ಸ್

Posted By:
Subscribe to Filmibeat Kannada

ಈ ವರ್ಷದ ಸೂಪರ್ ಬ್ಲ್ಯಾಕ್ ಬಸ್ಟರ್ ಸಿನಿಮಾ "ಕಿರಿಕ್ ಪಾರ್ಟಿ" ಚಿತ್ರವನ್ನ ನೋಡದೆ ಇರೋರಿಗೆ, ಈಗಾಗಲೇ ನೋಡಿ ಮತ್ತೊಮ್ಮೆ ನೋಡಬೇಕು ಎಂದುಕೊಂಡವರಿಗೆ ಸೂಪರ್ ಅವಕಾಶ ಸಿಕ್ಕಿದೆ.

ಕಿರುತೆರೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ "ಕಿರಿಕ್ ಪಾರ್ಟಿ" ಸಿನಿಮಾ ಪ್ರಸಾರವಾಗುತ್ತಿದೆ. ಅದು ಒಂದು ಬಾರಿಯಲ್ಲ, ಎರಡು ಸಲ ಬ್ಯಾಕ್ ಟು ಬ್ಯಾಕ್ ಪ್ರಸಾರವಾಗುತ್ತಿದೆ.

Blockbuster movie Kirik Party will air in Colors Kannada

200 ದಿನಗಳನ್ನ ಪೂರೈಸಿ ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಕಿರಿಕ್ ಪಾರ್ಟಿ ಇದೇ ಶನಿವಾರ ಮತ್ತು ಭಾನುವಾರ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿದೆ. ಅಗಸ್ಟ್ 19 ರ ಶನಿವಾರ ರಾತ್ರಿ 8 ಗಂಟೆಗೆ ಮತ್ತು ಅಗಸ್ಟ್ 20 ರ ಭಾನುವಾರ ಸಂಜೆ 4 ಗಂಟೆಗೆ ಎರಡು ಬಾರಿ ಪ್ರಸಾರವಾಗಲಿದೆ.

ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಸಾಕಷ್ಟು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದೆ.

English summary
The most successful movie of the year Kirik Party will air in Colors Kannada back to back August 19th and August 20th 2017
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada