For Quick Alerts
  ALLOW NOTIFICATIONS  
  For Daily Alerts

  ಬ್ರೇಕಿಂಗ್ ನ್ಯೂಸ್: ಬಿಗ್ ಬಾಸ್ ಶೋ ಮತ್ತೆ ಆರಂಭ

  By * ಜೇಮ್ಸ್ ಮಾರ್ಟಿನ್
  |

  ಸ್ವರ್ಗ ನರಕ ಕಲ್ಪನೆ ಹೊರ ತಂದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಮತ್ತೊಮ್ಮೆ ಕಲರ್ಸ್ ವಾಹಿನಿಯಲ್ಲೇ ಪ್ರಸಾರವಾಗಲಿದೆ. ಬಿಗ್ ಬಾಸ್ 8 ರ ಸರಣಿಯನ್ನು ಮತ್ತೊಮ್ಮೆ ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆ ಎಂದು ಕಲರ್ಸ್ ವಾಹಿನಿ ಟ್ವೀಟ್ ಮಾಡಿ ಅಧಿಕೃತವಾಗಿ ಹೇಳಿಕೆ ನೀಡಿದೆ.

  ಕಾಲ ಇದ್ದಂತೆ ಇರಲ್ಲ. ಕ್ಷಣ ಕ್ಷಣ ಬದಲಾಗುತ್ತಿರುತ್ತದೆ. ಸ್ವರ್ಗ ನರಕಗಳಂತೆ ಜೀವನ ಕೂಡಾ ಬದಲಾಗುತ್ತದೆ ಎಂದು ಹೇಳುತ್ತಾ ಎಲ್ಲರ ಮನ ಗೆದ್ದಿದ್ದ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರು ಮುಂದಿನ ಬಿಗ್ ಬಾಸ್ ಸರಣಿಯಲ್ಲಿ ಕಾಣಿಸಿಕೊಳ್ಳುವುದು ಅಸಾಧ್ಯ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ.

  ಬಿಗ್ ಬಾಸ್ ಸೀಸನ್ 6 ರಲ್ಲಿ 'ಅಲಗ್ ಛೆ' ಎಂದು ವಿಭಿನ್ನವಾಗಿ ಕಾರ್ಯಕ್ರಮ ನಡೆಸಿಕೊಟ್ಟ ಸಲ್ಮಾನ್ ಸೀಸನ್ 7ನಲ್ಲಿ ಡಬ್ಬಲ್ ಧಮಾಕ ಮೂಲಕ ಎಲ್ಲರನ್ನು ರಂಜಿಸಿದ್ದರು. ಸ್ವರ್ಗ ಹಾಗೂ ನರಕ ಮಾದರಿ ಮನೆ ಸೃಷ್ಟಿಯಾಗಿ ಸ್ಪರ್ಧಿಗಳು ತಿಣುಕಾಡಿದ್ದು ಪ್ರೇಕ್ಷಕರಿಗೆ ರಂಜನೀಯವಾಗಿತ್ತು.[ಬಿಗ್ ಬಾಸ್ 7 ಟೀಸರ್]

  ಕೃಷ್ಣಮೃಗ ಬೇಟೆ ಪ್ರಕರಣ, ಗುದ್ದೋಡು ಪ್ರಕರಣ, ಸಾಲು ಸಾಲು ಚಿತ್ರಗಳ ಬಿಡುಗಡೆ, ಶೂಟಿಂಗ್ ನಡುವೆ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ನನ್ನಿಂದ ಸಾಧ್ಯವಿಲ್ಲ ಎಂದು ಸಲ್ಲೂ ನೇರವಾಗಿ ಹೇಳಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಜೊತೆಗೆ ಕಲರ್ಸ್ ವಾಹಿನಿ ಬದಲಿಗೆ ಲೈಫ್ ಓಕೆ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರವಾಗಲಿದೆ ಎಂಬ ಸುದ್ದಿಯೂ ಇತ್ತು. ಆದ್ರೆ, ಎಲ್ಲಕ್ಕೂ ಒಂದೇ ಟ್ವೀಟ್ ನಲ್ಲಿ ಕಲರ್ಸ್ ವಾಹಿನಿ ಉತ್ತರ ನೀಡಿದೆ.

  ಬಿಗ್ ಬಾಸ್ 7 ಸ್ಪರ್ಧಿಗಳು ಏನು ಮಾಡುತ್ತಿದ್ದಾರೆ

  ಬಿಗ್ ಬಾಸ್ 7 ಸ್ಪರ್ಧಿಗಳು ಏನು ಮಾಡುತ್ತಿದ್ದಾರೆ

  ಬಿಗ್ ಬಾಸ್ ಪ್ರಶಸ್ತಿ ಗೆದ್ದ ಮೊದಲ ಮಹಿಳಾ ಸ್ಪರ್ಧಿ ಗೌಹರ್ ತನ್ನ ಗೆಳಯ ಕುಶಾಲ್ ಜತೆ ಗೋವಾದಲ್ಲಿ ಸುತ್ತಾಡಿ ಕೊನೆಗೆ ಎಂಗೇಜ್ ಆದರು. ತನಿಶಾ ಹಾಗೂ ಅರ್ಮಾನ್ ಕೂಡಾ ಎಂಗೇಜ್ ಆಗಿದ್ದಾರೆ. ಸಂಗ್ರಾಮ್ ಸಿಂಗ್ ತನ್ನ ಗೆಳತಿ ಪಾಯಲ್ ರೋಹ್ಟಗಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  ಬಿಗ್ ಬಾಸ್ 8 ರ ನಿರೂಪಕನ ಕುತೂಹಲ

  ಬಿಗ್ ಬಾಸ್ 8 ರ ನಿರೂಪಕನ ಕುತೂಹಲ

  ಬಿಗ್ ಬಾಸ್ 8 ರ ನಿರೂಪಣೆ ಯಾರು ಮಾಡಬಹುದು ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಆದರೆ, ಅಮಿತಾಬ್ ಬಚ್ಚನ್, ಸುನಿಲ್ (ಗುತ್ತಿ), ಶಾರುಖ್ ಖಾನ್, ರಣಬೀರ್ ಕಪೂರ್, ರಣವೀರ್ ಕಪೂರ್, ಐಶ್ವರ್ಯಾ ರೈ, ಅಜಯ್ ದೇವಗನ್ ಸೇರಿದಂತೆ ಹಲವರ ಹೆಸರು ಕಾಣಿಸಿಕೊಂಡಿತ್ತು. [ವಿವರ ಇಲ್ಲಿ ಓದಿ]

  ಬಿಗ್ ಬಾಸ್ 7 ಸಲ್ಮಾನ್ ಗೆ ಕಿರಿಕಿರಿ ಉಂಟು ಮಾಡಿತ್ತು.

  ಬಿಗ್ ಬಾಸ್ 7 ಸಲ್ಮಾನ್ ಗೆ ಕಿರಿಕಿರಿ ಉಂಟು ಮಾಡಿತ್ತು.

  ಬಿಗ್ ಬಾಸ್ 7 ಸಲ್ಮಾನ್ ಗೆ ಕಿರಿಕಿರಿ ಉಂಟು ಮಾಡಿತ್ತು. ಸಲ್ಮಾನ್ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿತ್ತು. ಅರ್ಮಾನ್ ಹಾಗೂ ತನೀಶಾ ಪರ ಸಲ್ಲೂ ನಿರ್ಣಯ ಕೈಗೊಳ್ಳುತ್ತಾ ಸ್ವಜನಪಕ್ಷಪಾತ ಮಾಡುತ್ತಿದ್ದಾರೆ ಎಂಬ ಗುರುತರ ಆರೋಪ ಕೇಳಿ ಸಲ್ಲೂ ಕೆರಳಿದ್ದ.

  ಸ್ವರ್ಗ ನರಕ ಕಲ್ಪನೆ ಹೊರ ತಂದ ಕಲರ್ಸ್ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಕೋರ್ಟ್ ಮೆಟ್ಟಿಲೇರಿತ್ತು. ಹಲವಾರು ಕೇಸುಗಳನ್ನು ಕೊರಳಿಗೆ ಸುತ್ತಿಕೊಂಡಿರುವ ನಿರೂಪಕ ಸಲ್ಮಾನ್ ಖಾನ್ ಅವರ ಮೇಲೆ ಹೊಸದಾಗಿ ದೂರು ದಾಖಲಾಗಿತ್ತು. ಮುಸ್ಲಿಂ ಭಾವನೆಗಳಿಗೆ ಸಲ್ಮಾನ್ ಖಾನ್ ಅವರು ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ದೂರು ಸಲ್ಮಾನ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.

  ಕಲರ್ಸ್ ವಾಹಿನಿಯಿಂದ ಟ್ವೀಟ್

  ಕಲರ್ಸ್ ವಾಹಿನಿ ಟ್ವೀಟ್ ಮಾಡಿದ ಸಲ್ಮಾನ್ ಹೆಸರು ಕನ್ ಫರ್ಮ್ ಮಾಡಿದೆ.

  ಗೌಹರ್ ಖಾನ್ ವಿಜೇತೆಯಾಗಿದ್ದರು

  ಗೌಹರ್ ಖಾನ್ ವಿಜೇತೆಯಾಗಿದ್ದರು

  ಕಾಮ್ಯಾ ಪಂಜಾಬಿ, ಗೌಹರ್ ಖಾನ್, ಹವೆಲ್ ಕೀಚ್, ಸಂಗ್ರಾಮ್ ಸಿಂಗ್, ಅರ್ಮಾನ್, ಅಪೂರ್ವ ಅಗ್ನಿಹೋತ್ರಿ, ಶಿಲ್ಪಾ ಅಗ್ನಿ ಹೋತ್ರಿ, ಎಲ್ಲಿ ಅವ್ರಾಮ್, ವಿಜೆ ಆಂಡಿ, ಪ್ರತ್ಯೂಷಾ ಬ್ಯಾನರ್ಜಿ, ರಾಜತ್ ರವೈಲ್, ಅನಿತಾ ಅದವ್, ತನಿಶಾ, ಕುಶಾಲ್ ತಂಡನ್, ರತನ್ ರಜಪುತ್ ಈ ಬಾರಿಯ ಸ್ಪರ್ಧಿಗಳಾಗಿದ್ದರು. ಈ ಪೈಕಿ ಗೌಹರ್ ಖಾನ್ ವಿಜೇತೆಯಾಗಿದ್ದರು

  English summary
  Colors TV confirms that it is going to be Salman Khan who will be hosting the controversial reality show Bigg Boss seaosn 8.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X