For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಮನೆಯಲ್ಲಿ ಪ್ರೇಮಕತೆ ಆರಂಭ: ಯಾರು 'ಬ್ರೋ ಗೌಡ'ನ ಪ್ರೇಯಸಿ?

  |

  ಬಿಗ್‌ಬಾಸ್ ಮನೆಗೆ ಪ್ರೇಮಕತೆಗಳು ಹೊಸತಲ್ಲ. ಈ ಬಾರಿಯ ಬಿಗ್‌ಬಾಸ್‌ನಲ್ಲೂ ಪ್ರೇಮಕತೆಯೊಂದು ಉದಯಿಸುತ್ತಿದೆ.

  ಶಮಂತ್ ಅಲಿಯಾಸ್ ಬ್ರೋ ಗೌಡ ಗೆ ಬಿಗ್‌ಬಾಸ್ ಮನೆಯಲ್ಲಿ ಒಬ್ಬರ ಮೇಲೆ ಪ್ರೀತಿಯಾಗಿದೆ, ಅದೂ ಗಂಭೀರ ಪ್ರೀತಿಯಂತೆ.

  ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಸೋಶಿಯಲ್ ಮೀಡಿಯಾ ಸ್ಟಾರ್ 'ಬ್ರೋ ಗೌಡ'

  ಬಿಗ್‌ಬಾಸ್ ನ ಎರಡನೇ ದಿನ ಮನೆಯಲ್ಲಿ ಸಾಕಷ್ಟು ಚಟುವಟಿಕೆಗಳು ನಡೆದವು. ನಾಮಿನೇಷನ್ ಚಟುವಟಿಕೆ ಸಹ ನಡೆಯಿತು, ಎಲ್ಲವೂ ಮುಗಿದು ಮನೆಯ ಸದಸ್ಯರೆಲ್ಲರೂ ನಿದ್ದೆಗೆ ಜಾರಿದಾಗ ಬಿಗ್‌ಬಾಸ್ ಮನೆಯ ನಾಯಕ ಬ್ರೋ ಗೌಡ, ನೇರವಾಗಿ ನಾಮಿನೇಷನ್ ಆಗಿರುವ ನಿರ್ಮಲಾ ಹಾಗೂ ಗೀತಾ ಭಟ್ ಮಾತನಾಡುತ್ತಾ ಇದ್ದರು.

  ಬ್ರೋ ಗೌಡ ಅವರು ಇಂದು ಮನೆಯ ನಾಯಕರಾಗಿ ಆಯ್ಕೆ ಆದ ಕಾರಣ ನಿರ್ಮಲಾ ಅವರು ಧನ್ಯವಾದ ಅರ್ಪಿಸುತ್ತಿದ್ದರು ಆಗ ಮೆಲು ದನಿಯಲ್ಲಿ ಮಾತನಾಡಿದ ಬ್ರೋ ಗೌಡ, 'ಎಲ್ಲರೂ ನನ್ನನ್ನು 'ಬ್ರೋ' (ಸಹೋದರ) ಎನ್ನಲಿ ಆದರೆ ಒಬ್ಬರು ಮಾತ್ರ ಹಾಗೆ ಎನ್ನುವುದು ಬೇಡ' ಎಂದರು ಬ್ರೋ ಗೌಡ.

  ಯಾರು ಎಂದು ಕುತೂಹಲದಿಂದ ಗೀತಾ ಹಾಗೂ ನಿರ್ಮಲಾ ಕೇಳಿದಾಗ. 'ಒಳಗೆ ಒಬ್ಬರು ಇದ್ದಾರೆ, ಆಕೆ ಯಾರಾಗಿರಬಹುದು ಎಂಬುದನ್ನು ನೀವೇ ಗೆಸ್ ಮಾಡಿ ಬೆಳಿಗ್ಗಿನ ಉಪಹಾರ ಮುಗಿದ ನಂತರ ನನಗೆ ಉತ್ತರ ನೀಡಿ' ಎಂದರು ಬ್ರೋ ಗೌಡ.

  'ನಿಮ್ಮದೇನು ಒನ್‌ಸೈಡೆಡ್ ಲೌ ಅಥವಾ ಟೂ ಸೈಡೆಡ್ ಹಾ?' ಎಂದು ಕುತೂಹಲದಿಂದ ಪ್ರಶ್ನಿಸಿದ ಗೀತಾ ಗೆ, 'ಅದು ನನಗೂ ಗೊತ್ತಿಲ್ಲ, ನಾನೂ ಉತ್ತರಕ್ಕೆ ಕಾಯುತ್ತಿದ್ದೇನೆ' ಎಂದರು ಬ್ರೋ ಗೌಡ.

  'ಮನೆಯಲ್ಲಿ ಇರುವುದೇ ಮೂವರು ಸುಂದರ ಹೆಣ್ಣುಮಕ್ಕಳು, ಧನುಶ್ರಿ, ದಿವ್ಯಾ ಸುರೇಶ್ ಹಾಗೂ ದಿವ್ಯಾ ಉಡುಗಡ, ಇವರು ಮೂವರಲ್ಲಿ ಯಾರು?' ಎಂದರು ನಿರ್ಮಲಾ. ಇದಕ್ಕೆ ಉತ್ತರಿಸಿದ ಬ್ರೋ ಗೌಡ, 'ದಿವ್ಯ ಉಡುಗಡ ನನ್ನನ್ನು ಮೊದಲ ದಿನವೇ ಅಣ್ಣ ಅಂದಳು' ಎಂದರು. 'ಹಾಗಿದ್ದರೆ ದಿವ್ಯಾ ಸುರೇಶ್' ಆಗಿರಬಹುದು ಎಂದರು ಗೀತಾ ಭಟ್.

  ಗೀತಾ ಭಟ್ ಅನ್ನು ಕನ್ಫ್ಯೂಸ್ ಮಾಡುವಂತೆ ಮಾತನಾಡಿದ ಬ್ರೋ ಗೌಡ, 'ಯಾರೋ ಎಂದು ಏಕೆ ಎಂದುಕೊಳ್ಳುತ್ತೀರಿ, ನೀವೆ ಆಗಿದ್ದರೂ ಆಗಿರಬಹುದು, ನೀವೂ ಸಹ ನನ್ನೊಂದಿಗೆ ಆತ್ಮೀಯವಾಗಿಯೇ ನಡೆದುಕೊಂಡಿದ್ದೀರಿ' ಎಂದರು ಬ್ರೋ ಗೌಡ. ಆದರೆ ಬ್ರೋ ಗೌಡನ ಮಾತನ್ನು ಗೀತಾ ಭಟ್ ಒಪ್ಪಲಿಲ್ಲ. ಅದು ಸಕಾರಣವೂ ಆಗಿದೆ. ಬ್ರೋ ಗೌಡ ಪ್ರೀತಿಸುತ್ತಿರುವುದು ಗೀತಾ ಭಟ್ ಅನ್ನು ಅಲ್ಲ ಬದಲಿಗೆ ಇನ್ಯಾರನ್ನೋ ಎಂಬುದು ಅವರ ಮಾತಿನಿಂದಲೇ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

  ಆದರೆ ಈಗ ವೀಕ್ಷಕರ ಅನುಮಾನ, 'ಬ್ರೋ ಗೌಡ ಪ್ರೀತಿಸುತ್ತಿರುವ ಆ ಚೆಲುವೆ ಯಾರು? ಇವರದ್ದು ಸಿಂಗಲ್ ಸೈಡೆಡ್ ಪ್ರೇಮವಾ ಅಥವಾ ಬಿಗ್‌ಬಾಸ್ ಮನೆಗೆ ಬರುವ ಮುನ್ನವೇ ಇವರಿಬ್ಬರೂ ಪ್ರೇಮದಲ್ಲಿದ್ದರಾ ಎಂಬುದು.

  English summary
  Shamanth aka Bro Gowda is in love witha a girl in Bigg Boss. He told Geetha Bhatt and Nirmala to find out who is that girl by watching his actions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X