»   » 'ಡಿ ಬಾಸ್' ಸ್ನೇಹದ ಬಗ್ಗೆ ಗುಣಗಾನ ಮಾಡಿದ ಬುಲೆಟ್ ಪ್ರಕಾಶ್

'ಡಿ ಬಾಸ್' ಸ್ನೇಹದ ಬಗ್ಗೆ ಗುಣಗಾನ ಮಾಡಿದ ಬುಲೆಟ್ ಪ್ರಕಾಶ್

Posted By:
Subscribe to Filmibeat Kannada

ನಟ ಚಾಲೆಂಜಿಂಗ್ ಸ್ಟಾರ್ ಅವರ ಆಪ್ತ ಗೆಳೆಯರ ಪೈಕಿ ಬುಲೆಟ್ ಪ್ರಕಾಶ್ ಕೂಡ ಒಬ್ಬರು. ಬುಲೆಟ್ ಪ್ರಕಾಶ್ ಅವರು ನಟ ದರ್ಶನ್ ಗೆಳೆಯರ ಬಳಗದ ಖಾಯಂ ಸದಸ್ಯ. ಜೊತೆಗೆ ತೆರೆ ಮೇಲೆ ಕೂಡ ದರ್ಶನ್ ಮತ್ತು ಬುಲೆಟ್ ಇಬ್ಬರ ಜುಗಲ್ ಬಂದಿ ಹಲವು ಚಿತ್ರಗಳಲ್ಲಿ ಮೋಡಿ ಮಾಡಿದೆ.

ದರ್ಶನ್ ಮತ್ತು ಸುದೀಪ್ ಜೊತೆಗಿನ ಜಗಳದ ಬಗ್ಗೆ ಬುಲೆಟ್ ಹೀಗೆ ಹೇಳಿದರು!

ಅದೇನೆ ಇದ್ದರು, ದರ್ಶನ್ ಮತ್ತು ಬುಲೆಟ್ ಪ್ರಕಾಶ್ ನಡುವೆ ಈಗ ಸಣ್ಣ ಬಿರುಕು ಮೂಡಿದೆ ಎಂಬ ಸುದ್ದಿ ಕೆಲ ತಿಂಗಳಿನಿಂದ ಹರಿದಾಡಿತ್ತು. ದರ್ಶನ್ ಸಹೋದರ ದಿನಕರ್ ತೂಗುದೀಪ್ ಜೊತೆ ಕಿರಿಕ್ ಆದ ನಂತರ ಬುಲೆಟ್ ಹಾಗೂ ದರ್ಶನ್ ನಡುವೆ ಏನು ಸರಿಯಿಲ್ಲ ಎನ್ನುವ ಮಾತು ಜೋರಾಗಿತ್ತು.

ರಾತ್ರಿ 'ಬಾಂಬ್' ಸಿಡಿಸಿ ಬೆಳಗ್ಗೆ 'ಉಲ್ಟಾ' ಹೊಡೆದ ಬುಲೆಟ್ ಪ್ರಕಾಶ್

ಆದ್ರೆ, ಈ ರೀತಿಯ ಎಲ್ಲ ಗಾಸಿಪ್ ಗಳಿಗೆ ಈಗ ನಟ ಬುಲೆಟ್ ಪ್ರಕಾಶ್ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಮೂಲಕ ಉತ್ತರ ಕೊಟ್ಟಿದ್ದಾರೆ. ಮುಂದೆ ಓದಿ...

ದರ್ಶನ್ ಬಗ್ಗೆ ಮಾತು

'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ಅತಿಥಿ ಆಗಿದ್ದ ಬುಲೆಟ್ ಪ್ರಕಾಶ್ ನಟ ದರ್ಶನ್ ಮತ್ತು ತಮ್ಮಿಬ್ಬರ ಸ್ನೇಹದ ಅನುಭವವನ್ನ ನಿರೂಪಕ ಅಕುಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಬುಲೆಟ್ ಪ್ರಕಾಶ್ ಮಾತು

ಅಕುಲ್ ಪ್ರಶ್ನೆಗೆ ಉತ್ತರಿಸಿದ ಬುಲೆಟ್ ಪ್ರಕಾಶ್ ''ಮೊದಲು ದರ್ಶನ್ ಸಿನಿಮಾಗಳಿಗೆ ನನಗೆ ನಟಿಸುವ ಅವಕಾಶ ಸಿಕ್ಕಿತ್ತು. ಶುರುವಿನಲ್ಲಿಯೇ ನಾನು ಮತ್ತು ದರ್ಶನ್ ತುಂಬಾ ಹತ್ತಿರ ಆದ್ವಿ'' ಅಂತ ಹೇಳಿದ್ದಾರೆ.

ನನ್ನ ಮತ್ತು ದರ್ಶನ್ ಸ್ನೇಹ

''ಮೊದಲು ಹೋಗಿ.. ಬನ್ನಿ.. ಫ್ರೆಂಡ್ಸ್ ನಿಂದ ಶುರುವಾಗಿ ನಂತರ ಬಾರೋ.. ಹೋಗೋ.. ಅಂತ ಹೇಳುವ ಗೆಳೆಯರಾದ್ವಿ.. ಹಾಗೆ ನಮ್ಮ ಗೆಳೆತನ ಶುರುವಾಯಿತು.'' - ಬುಲೆಟ್ ಪ್ರಕಾಶ್, ಹಾಸ್ಯ ನಟ

41 ಸಿನಿಮಾದಲ್ಲಿ ನಟಿಸಿದ್ದೇನೆ

''ಅಂತಹ ಸ್ನೇಹದಿಂದ ನಾನು ದರ್ಶನ್ ಜೊತೆ ಅಷ್ಟು ಸಿನಿಮಾಗಳನ್ನು ಮಾಡುವುದಕ್ಕೆ ನನಗೆ ಸಹಾಯ ಆಯ್ತು. ದರ್ಶನ್ ಜೊತೆ ನಾನು 41 ಸಿನಿಮಾ ನಟಿಸಿದ್ದೇನೆ. ಅವರ 50 ಚಿತ್ರಗಳ ಪೈಕಿ ನಾನು 41 ರಲ್ಲಿ ಅಭಿನಯಿಸಿದ್ದೇನೆ'' - ಬುಲೆಟ್ ಪ್ರಕಾಶ್, ಹಾಸ್ಯ ನಟ

ಯಾವುದೇ ಮುನಿಸು ಇಲ್ಲ

ಇದೇ ಕಾರ್ಯಕ್ರಮದಲ್ಲಿ ಅಕುಲ್ ''ನಿಮ್ಮ ಮತ್ತು ದರ್ಶನ್ ನಡುವೆ ಜಗಳ ಆಯ್ತು ಅಂತ ಮಾತಿದೆ ಅದು ನಿಜವೇ'' ಎಂದು ಬುಲೆಟ್ ಪ್ರಕಾಶ್ ಅವರಿಗೆ ನೇರವಾಗಿ ಪ್ರಶ್ನೆ ಕೇಳಿದರು. ಆಗ ಬುಲೆಟ್ ಪ್ರಕಾಶ್ ಕೂಡ ''ಯಾವ ಜಗಳ.. ಏನು ಜಗಳ.. ನಾನು ಎಲ್ಲಿಯೂ ದರ್ಶನ್ ಅವರ ಹೆಸರು ಹೇಳಿಯೇ ಇಲ್ಲ'' ಎಂದು ನೇರವಾಗಿ ಉತ್ತರಿಸಿದ್ದಾರೆ.

English summary
Bullet Prakashin spoke about Darshan and and his friendship in Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada