»   » ಬಿಗ್ ಬಾಸ್ ಗೆ ಬುಲೆಟ್ ಪ್ರಕಾಶ್ ವೈಲ್ಡ್ ಕಾರ್ಡ್ ಎಂಟ್ರಿ

ಬಿಗ್ ಬಾಸ್ ಗೆ ಬುಲೆಟ್ ಪ್ರಕಾಶ್ ವೈಲ್ಡ್ ಕಾರ್ಡ್ ಎಂಟ್ರಿ

By: ಉದಯರವಿ
Subscribe to Filmibeat Kannada

ಸುವರ್ಣ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಮನೆಗೆ ಹೊಸ ಸದಸ್ಯರೊಬ್ಬರು ಎಂಟ್ರಿ ಕೊಡುತ್ತಿದ್ದಾರೆ. ಸ್ಯಾಂಡಲ್ ವುಡ್ ಹಾಸ್ಯನಟ ಬುಲೆಟ್ ಪ್ರಕಾಶ್ ಈ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಿದ್ದಾರೆ ಎನ್ನುತ್ತವೆ ಮೂಲಗಳು.

ಆರಂಭದಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಬುಲೆಟ್ ಪ್ರಕಾಶ್ ಹೆಸರು ಕೇಳಿಬಂದಿತ್ತು. ಆದರೆ ಕೊನೆ ಕ್ಷಣದಲ್ಲಾದ ಬದಲಾವಣೆಗಳ ಬಳಿಕ ಅವರ ಹೆಸರು ಪಟ್ಟಿಯಿಂದ ಕೈತಪ್ಪಿತ್ತು. ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶ ಪಡೆಯುತ್ತಿದ್ದಾರೆ. [ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳು]

Bullet Prakash

ಮನೆಯಲ್ಲಿ ಎಲ್ಲವೂ ಸೀರಿಯಸ್ ಅಭ್ಯರ್ಥಿಗಳೇ ಇದ್ದೂ ಕಾಮಿಡಿಗೆ ಜಾಗವಿಲ್ಲದಂತಾಗಿದೆ. ಮನೆಯಲ್ಲಿ ಇದ್ದ ಏಕೈಕ ಕಾಮಿಡಿ ಪೀಸ್ ಎಂದರೆ ಲಯ ಕೋಕಿಲ. ಅವರು ಮನೆಯಲ್ಲಿ ಇದ್ದಷ್ಟು ದಿನವೂ ವಾಹಿನಿ ಬಯಸಿದಷ್ಟು ಕಾಮಿಡಿ ಅವರಿಂದ ಹೊರಹೊಮ್ಮಲಿಲ್ಲ.

ಬಹುಶಃ ಅವರ ಸ್ಥಾನವನ್ನು ಬಿಗ್ ಬಾಸ್ ಮನೆಯಲ್ಲಿ ಬುಲೆಟ್ ಪ್ರಕಾಶ್ ತುಂಬಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೆ ಮಠ ಗುರುಪ್ರಸಾದ್, ಹರ್ಷಿಕಾ ಪೂಣಚ್ಚ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿದ್ದಾರೆ. ಇದೀಗ ಮೂರನೇ ಅಭ್ಯರ್ಥಿಯಾಗಿ ಬುಲೆಟ್ ಪ್ರಕಾಶ್ ಬರುತ್ತಿದ್ದಾರೆ.

English summary
Suvarna Channel reality show Bigg Boss audiences with surprise twists and turns. Following this trend, after 11 contestants and one wild card entry, BBK2 will see another addition to the house. This weekend, Sandalwood comedy actor Bullet Prakash will enter the show as wild card contestant. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada