»   » ಅಮಿತಾಬ್ ರನ್ನು ಗುರುತಿಸಿದ ಆಲ್ಜೀಮರ್ಸ್ ರೋಗಿ

ಅಮಿತಾಬ್ ರನ್ನು ಗುರುತಿಸಿದ ಆಲ್ಜೀಮರ್ಸ್ ರೋಗಿ

Posted By:
Subscribe to Filmibeat Kannada

ಭಾರತೀಯ ಚಿತ್ರರಂಗದ ದಿಗ್ಗಜ ಅಮಿತಾಬ್ ಬಚ್ಚನ್ ಅವರ ಅವಿಸ್ಮರಣೀಯ ಘಟನೆಗಳ ಸಾಲಿಗೆ ಇನ್ನೊಂದು ಮರೆಯಲಾಗದ ಘಟನೆ ಸೇರ್ಪಡೆಯಾಗಿದೆ. ಮರೆವಿನ ಕಾಯಿಲೆ ಆಲ್ಜೀಮರ್ಸ್ ನಿಂದ ಬಳಲುತ್ತಿರುವ ನೂರು ವರ್ಷದ ವಯೋವೃದ್ಧರೊಬ್ಬರು ಅಮಿತಾಬ್ ರನ್ನು ಗುರುತಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

'ಕೌನ್ ಬನೇಗಾ ಕರೋಡ್ ಪತಿ' ಗೇಮ್ ಶೋನಲ್ಲಿ ಅವರಿಗೆ ಈ ಅಚ್ಚರಿ ಕಾದಿತ್ತು. ಅಕ್ಟೋಬರ್ 11ಕ್ಕೆ ಅಮಿತಾಬ್ ಬಚ್ಚನ್ ಅವರು ತಮ್ಮ ಜೀವನದಲ್ಲಿ ಹೊಸ ವಸಂತವನ್ನು ಬರಮಾಡಿಕೊಳ್ಳುತ್ತಿದ್ದಾರೆ. ಎಪ್ಪತ್ತೊಂದನೇ ವರ್ಷಕ್ಕೆ ಅಡಿಯಿಡುತ್ತಿರುವ ಈ ಸಂದರ್ಭದಲ್ಲಿ ಈ 100ರ ಚಿರ ಅಭಿಮಾನಿಗೆ ಅಮಿತಾಬ್ ಬಿಟ್ಟರೆ ಇನ್ನೇನು ನೆನಪಿಲ್ಲ.

Amitabh with fan

ಈ ಅಭಿಮಾನಿ ಹೆಸರು ಬರ್ನಾಂಡಿನಿ ಡಿ'ಸೋಜಾ, ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟ! ಆಲ್ಜೀಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ಇವರಿಗೆ ನೆನಪಿನ ಶಕ್ತಿ ಇಲ್ಲ. ಆದರೆ ಒಂದೇ ಒಂದು ಹೆಸರು ಮಾತ್ರ ಅವರ ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿದೆ. ಅದೇ ಅಮಿತಾಬ್ ಹೆಸರು.

ಇವರ ಇನ್ನೊಂದು ಸಮಸ್ಯೆ ಎಂದರೆ ಊಟ ಮಾಡುವುದನ್ನೂ ಮರೆತಿರುತ್ತಾರೆ. ಆದರೆ ಅಮಿತಾಬ್ ಫೋಟೋ ನೋಡಿದರೆ ಊಟವೂ ನೆನಪಾಗುತ್ತದೆ. ಅಮಿತಾಬ್ ರನ್ನು ಕೆಬಿಸಿ ಸೆಟ್ಸ್ ನಲ್ಲಿ ಭೇಟಿ ಮಾಡಿದ ಬಳಿಕ ಡಿ'ಸೋಜಾ ಕಣ್ಣಲ್ಲಿ ಕಂಬನಿ ಧಾರಾಕಾರವಾಗಿ ಹರಿಯಿತು.

ಬಳಿಕ ಅಮಿತಾಬ್ ಜೊತೆ ಹೆಜ್ಜೆ ಹಾಕಿ ಖುಷಿಪಟ್ಟರು. ಅಮಿತಾಬ್ ಬಚ್ಚನ್ ಅವರಿಗೂ ಮಾತೇ ಹೊರಡದಷ್ಟು ಸಂತಸವಾಗಿತ್ತು. ಒಬ್ಬ ನಟನಿಗೆ ಇದಕ್ಕಿಂತಲೂ ಇನ್ನೇನು ಬೇಕು. ಇದೆಲ್ಲವನ್ನೂ ವೀಕ್ಷಿಸಿದ ಪ್ರೇಕ್ಷಕರು ಸೆಟ್ಸ್ ನಲ್ಲೇ ಕಣ್ಣೀರಾದರು. ಅಮಿತಾಬ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನೂ ಹೇಳಿದರು. ಈ ವಿಶೇಷ ಸಂಚಿಕೆ ಇದೇ ಶುಕ್ರವಾರ (ಅ.11) ಸೋನಿ ಎಂಟರ್ ಟೈನ್ ಮೆಂಟ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. (ಐಎಎನ್ಎಸ್)

English summary
Amitabh Bachchan had a unique birthday celebration on the sets of game show Kaun Banega Crorepati (KBC). The actor met a 100-year-old fan of his, who is suffering from Alzheimer's disease and the only thing she remembers is the megastar's name.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada