For Quick Alerts
  ALLOW NOTIFICATIONS  
  For Daily Alerts

  ರಕ್ಷಾ ಬಳಿಕ ಬಿಗ್ ಮನೆಗೆ 3ನೇ ವೈಲ್ಡ್ ಕಾರ್ಡ್ ಎಂಟ್ರಿ: ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ

  |
  Bigg Boss Kannada 7 : Nobody expected Chaitra to be the 3rd wild card entry | FILMIBEAT KANNADA

  ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿ ದಿನದಿಂದ ದಿನಕ್ಕೆ ಅಚ್ಚರಿ, ಸರ್ಪ್ರೈಸ್ ಗಳನ್ನು ಕೊಡ್ತಿದೆ. ಈ ಸೀಸನ್ ನ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆರ್ ಜೆ ಪೃಥ್ವಿ ಬಂದಿದ್ದರು. ಬಹುಶಃ ಇನ್ನೊಂದು ವೈಲ್ಡ್ ಕಾರ್ಡ್ ಎಂಟ್ರಿ ಇರಲ್ಲ ಎಂದುಕೊಂಡಿದ್ದವರಿಗೆ ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿ ರಕ್ಷಾ ಸೋಮಶೇಖರ್ ಅಚ್ಚರಿ ನೀಡಿದರು.

  ಇಬ್ಬರು ಸರ್ಪ್ರೈಸ್ ಆಗಿ ಬಂದಮೇಲೆ ಮೂರನೇ ವೈಲ್ಡ್ ಕಾರ್ಡ್ ಬಗ್ಗೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದ್ರೆ, ಬಿಗ್ ಬಾಸ್ ಎಲ್ಲರ ಲೆಕ್ಕಾಚಾರವನ್ನ ಉಲ್ಟಾಮಾಡಿ ಮೂರನೇ ವೈಲ್ಡ್ ಕಾರ್ಡ್ ಎಂಟ್ರಿ ಮಾಡಿಸಿದ್ದಾರೆ.

  ಮೂರನೇ ವೈಲ್ಡ್ ಕಾರ್ಡ್ ಸ್ಪರ್ಧಿ ಇವರೇ ಆಗಬಹುದು ಎಂದೂ ಯಾರೂ ಗೆಸ್ ಮಾಡಿರಲಿಲ್ಲ. ಅಷ್ಟಕ್ಕೂ, ಯಾರು ಆ ಸ್ಪರ್ಧಿ? ಮುಂದೆ ಓದಿ.....

  ಮತ್ತೆ ಬಂದ ಚೈತ್ರಾ ಕೋಟೂರ್

  ಮತ್ತೆ ಬಂದ ಚೈತ್ರಾ ಕೋಟೂರ್

  ಬಿಗ್ ಬಾಸ್ ನಾಲ್ಕನೇ ವಾರ ಮನೆಯಿಂದ ಹೊರಬಂದಿದ್ದ ಬರಹಗಾರ್ತಿ ಚೈತ್ರಾ ಕೋಟೂರ್ ಮತ್ತೆ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಈ ಮೂಲಕ ಬಿಗ್ ಬಾಸ್ ವೀಕ್ಷಕರಿಗೆ ಹಾಗೂ ಬಿಗ್ ಬಾಸ್ ಸದಸ್ಯರಿಗೆ ಬಹುದೊಡ್ಡ ಅಚ್ಚರಿ ನೀಡಿದ್ದಾರೆ. ಚೈತ್ರಾ ರೀ-ಎಂಟ್ರಿಯನ್ನ ಸ್ವತಃ ಮನೆಯಲ್ಲಿರುವವರೇ ಅರಗಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ.

  ಹುಟ್ಟುಹಬ್ಬದಂದು ಕಣ್ಣೀರು ಹಾಕುತ್ತಾ 'ಬಿಗ್ ಬಾಸ್' ಮನೆಯಿಂದ ಆಚೆ ಬಂದ ಚೈತ್ರ ಕೋಟೂರುಹುಟ್ಟುಹಬ್ಬದಂದು ಕಣ್ಣೀರು ಹಾಕುತ್ತಾ 'ಬಿಗ್ ಬಾಸ್' ಮನೆಯಿಂದ ಆಚೆ ಬಂದ ಚೈತ್ರ ಕೋಟೂರು

  ಜಾದೂಗಾರ ಮಾಡಿದ ಮೋಡಿ

  ಜಾದೂಗಾರ ಮಾಡಿದ ಮೋಡಿ

  ಜಾದೂಗಾರ ಕುದ್ರೋಳಿ ಗಣೇಶ್ ಅವರು ನಿನ್ನೆ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ಮನೆ ಸದಸ್ಯರ ಮುಂದೆ ಮ್ಯಾಜಿಕ್ ಮಾಡಿ ಮೋಡಿ ಮಾಡಿದರು. ಡೈನಿಂಗ್ ಏರಿತಾ, ಲಿವಿಂಗ್ ಏರಿಯಾ, ಬೆಡ್ ರೂಂ ಏರಿಯಾದಲ್ಲಿ ಮ್ಯಾಜಿಕ್ ಮಾಡಿದ್ದ ಕುದ್ರೋಳಿ, ನಂತರ ಗಾರ್ಡನ್ ಏರಿಯಾ ಬಳಿ ಬಂದರು. ಸರ್ಪ್ರೈಸ್ ಎಂದು ಹೇಳಿ ಚೈತ್ರಾ ಅವರನ್ನು ಸ್ವಾಗತಿಸಿದರು.

  ಚೈತ್ರಾ ಕೋಟೂರ್ ಪ್ರಕಾರ 'ಈ ಸ್ಪರ್ಧಿ' ಬಿಗ್ ಬಾಸ್ ಗೆಲ್ಲಬಹುದಂತೆ!ಚೈತ್ರಾ ಕೋಟೂರ್ ಪ್ರಕಾರ 'ಈ ಸ್ಪರ್ಧಿ' ಬಿಗ್ ಬಾಸ್ ಗೆಲ್ಲಬಹುದಂತೆ!

  ನಂಬುತ್ತಿಲ್ಲ ಕೆಲವರು

  ನಂಬುತ್ತಿಲ್ಲ ಕೆಲವರು

  ಚೈತ್ರಾ ಕೋಟೂರ್ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿಲ್ಲ. ಈ ಬಗ್ಗೆ ಇತರೆ ಸ್ಪರ್ಧಿಗಳಿಗೆ ನಂಬಿಕೆಯೂ ಇಲ್ಲ. ಅವರು ಸ್ಪರ್ಧಿ ಎಂದು ಯಾರೂ ನಂಬುತ್ತಿಲ್ಲ. ಚೈತ್ರಾ ಕೋಟೂರ್ ಬರ್ತಾರೆ ಎಂದೂ ಯಾರೂ ಊಹಿಸಿಕೊಂಡಿರಲಿಲ್ಲ.

  ಚೈತ್ರಾ ಕೋಟೂರ್ 'ಬಿಗ್ ಬಾಸ್' ಬರೋಕೆ ಆ 'ವಿವಾದ' ಕಾರಣವಾಯ್ತಾ?ಚೈತ್ರಾ ಕೋಟೂರ್ 'ಬಿಗ್ ಬಾಸ್' ಬರೋಕೆ ಆ 'ವಿವಾದ' ಕಾರಣವಾಯ್ತಾ?

  ಮುಂದಿದೆ ಮಾರಿಹಬ್ಬ!

  ಮುಂದಿದೆ ಮಾರಿಹಬ್ಬ!

  ಚೈತ್ರಾ ಕೋಟೂರ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದು ಮತ್ತು ಮನೆಯೊಳಗೆ ಹೋಗಿರುವುದು ದೊಡ್ಮನೆಯ ಲೆಕ್ಕಾಚಾರ ಉಲ್ಟಾಪಲ್ಟಾ ಆಗಬಹುದು. ಮೊದಲೇ ಚೈತ್ರಾ ಅವರನ್ನು ಕಂಡರೆ ಇತರೆ ಸ್ಪರ್ಧಿಗಳಿಗೆ ಅಷ್ಟಕಷ್ಟೆ. ಚೈತ್ರಾ ಅವರ ಬಗ್ಗೆ ಯಾರು ಏನು ಮಾತನಾಡಿಕೊಂಡಿದ್ದಾರೆ ಎನ್ನುವುದರ ಬಗ್ಗೆ ತಿಳಿದುಕೊಂಡಿರುವ ಚೈತ್ರಾ ಮುಂದೆ ಏನು ಮಾಡ್ತಾರೋ? ಕಾದುನೋಡಬೇಕಿದೆ.

  English summary
  Bigg boss kannada 7 eliminated contestant Chaitra Kottoor is again back to bigg boss with wild card entry

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X