For Quick Alerts
  ALLOW NOTIFICATIONS  
  For Daily Alerts

  ಚೈತ್ರ ಕೋಟೂರುಗೆ ಸಿಕ್ತು ರವಿ ಬೆಳಗೆರೆಯಿಂದ 'ಬಿಗ್' ಆಫರ್.! ಏನು ಅಂತ ಗೊತ್ತಾ.?

  |
  Bigg Boss Kannada 7 : ಚೈತ್ರಗೆ ಸಿಕ್ತು ರವಿ ಬೆಳಗೆರೆ ಕಡೆಯಿಂದ ದೊಡ್ಡ ಆಫರ್ | FILMIBEAT KANNADA

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ನಟಿ ಮತ್ತು ಬರಹಗಾರ್ತಿ ಚೈತ್ರ ಕೋಟೂರು ಯಾರಿಗ್ತಾನೆ ಗೊತ್ತಿಲ್ಲ ಹೇಳಿ.? ಹಾಗ್ನೋಡಿದ್ರೆ, ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಗದ್ದಲ-ಗಲಾಟೆಗಳಿಂದ ಹೆಚ್ಚು ಸೌಂಡ್ ಮಾಡಿದವರು ಚಂದನ್ ಆಚಾರ್ ಮತ್ತು ಇದೇ ಚೈತ್ರ ಕೋಟೂರು.

  'ಬಿಗ್ ಬಾಸ್' ಶೋನಲ್ಲಿ ಒಮ್ಮೆ ಔಟ್ ಆಗಿ, ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು, ಮತ್ತೆ ಎಲಿಮಿನೇಟ್ ಆದ ಚೈತ್ರ ಕೋಟೂರು ಇದೀಗ ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

  ನಿರ್ದೇಶಕ ಯೋಗರಾಜ್ ಭಟ್ ಬಳಿ ಅಸಿಸ್ಟೆಂಟ್ ಆಗಿದ್ದ ಚೈತ್ರ ಕೋಟೂರು, 'ಸೂಜಿದಾರ' ಎಂಬ ಸಿನಿಮಾದಲ್ಲೂ ಅಭಿನಯಿಸಿದ್ದರು. ಈಗ ಇದೇ ಚೈತ್ರ ಕೋಟೂರುಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ದೊಡ್ಡ ಆಫರ್ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಮೊದಲ ವಾರವೇ ಹೊರ ಬಂದಿದ್ದ ರವಿ ಬೆಳಗೆರೆ

  ಮೊದಲ ವಾರವೇ ಹೊರ ಬಂದಿದ್ದ ರವಿ ಬೆಳಗೆರೆ

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ರವಿ ಬೆಳಗೆರೆ ಮೊದಲ ವಾರವೇ ಹೊರಗೆ ಬಂದರು. 'ಬಿಗ್ ಬಾಸ್' ಮನೆಯೊಳಗೆ ರವಿ ಬೆಳಗೆರೆ ಜೊತೆಗೆ ಚೈತ್ರ ಕೋಟೂರು ಸೇರಿದಂತೆ ಇತರೆ ಸ್ಪರ್ಧಿಗಳು ಉತ್ತಮ ಒಡನಾಟ ಹೊಂದಿದ್ದರು.

  ಸುದೀಪ್ ಅರಿವಿಗೆ ಬಂತು ಚೈತ್ರ ಕೋಟೂರು ಗೇಮ್ ಪ್ಲಾನ್.!ಸುದೀಪ್ ಅರಿವಿಗೆ ಬಂತು ಚೈತ್ರ ಕೋಟೂರು ಗೇಮ್ ಪ್ಲಾನ್.!

  ರವಿ ಬೆಳಗೆರೆಯನ್ನು ಭೇಟಿ ಮಾಡಿದ ಚೈತ್ರ ಕೋಟೂರು.!

  ರವಿ ಬೆಳಗೆರೆಯನ್ನು ಭೇಟಿ ಮಾಡಿದ ಚೈತ್ರ ಕೋಟೂರು.!

  'ಬಿಗ್ ಬಾಸ್' ಮನೆಯಿಂದ ಎರಡನೇ ಬಾರಿ ಎಲಿಮಿನೇಟ್ ಆದ್ಮೇಲೆ, ಹಿರಿಯ ಪತ್ರಕರ್ತ ರವಿ ಬೆಳಗೆರೆಯವರನ್ನ ಚೈತ್ರ ಕೋಟೂರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಸೆಲ್ಫಿಯನ್ನು ತೆಗೆದುಕೊಂಡು ಖುಷಿ ಪಟ್ಟಿದ್ದಾರೆ.

  ಚೈತ್ರಾ ಕೋಟೂರ್ 'ಬಿಗ್ ಬಾಸ್' ಬರೋಕೆ ಆ 'ವಿವಾದ' ಕಾರಣವಾಯ್ತಾ?ಚೈತ್ರಾ ಕೋಟೂರ್ 'ಬಿಗ್ ಬಾಸ್' ಬರೋಕೆ ಆ 'ವಿವಾದ' ಕಾರಣವಾಯ್ತಾ?

  ಆಫರ್ ಕೊಟ್ಟ ರವಿ ಬೆಳಗೆರೆ

  ಆಫರ್ ಕೊಟ್ಟ ರವಿ ಬೆಳಗೆರೆ

  ನಟನೆ ಜೊತೆಗೆ ಬರಹಗಾರ್ತಿ ಕೂಡ ಆಗಿರುವ ಚೈತ್ರ ಕೋಟೂರುಗೆ ರವಿ ಬೆಳಗೆರೆ ಒಂದು ಆಫರ್ ನೀಡಿದ್ದಾರೆ. ಅದೇನಪ್ಪಾ ಅಂದ್ರೆ, ರವಿ ಬೆಳಗೆರೆ ಬರೆದಿರುವ ಒಂದು ಕೃತಿಯನ್ನು ಸಿನಿಮಾ ಅಥವಾ ಸೀರಿಯಲ್ ಮಾಡುವ ಪ್ಲಾನ್ ನಡೆಯುತ್ತಿದೆ. ಈ ಪ್ರಾಜೆಕ್ಟ್ ನಲ್ಲಿ ಭಾಗಿಯಾಗುವಂತೆ ಚೈತ್ರ ಕೋಟೂರುಗೆ ರವಿ ಬೆಳಗೆರೆ ಬುಲಾವ್ ನೀಡಿದ್ದಾರೆ.

  ನಿಮಗೆ ಗೊತ್ತಾ.. ಚೈತ್ರ ಕೋಟೂರುಗೆ ಈಗಾಗಲೇ ಮದುವೆ ಆಗಿದ್ಯಂತೆ.!ನಿಮಗೆ ಗೊತ್ತಾ.. ಚೈತ್ರ ಕೋಟೂರುಗೆ ಈಗಾಗಲೇ ಮದುವೆ ಆಗಿದ್ಯಂತೆ.!

  ಒಪ್ಪಿಗೆ ಕೊಟ್ಟಿದ್ದಾರಂತೆ ಚೈತ್ರ ಕೋಟೂರು

  ಒಪ್ಪಿಗೆ ಕೊಟ್ಟಿದ್ದಾರಂತೆ ಚೈತ್ರ ಕೋಟೂರು

  ರವಿ ಬೆಳಗೆರೆಯವರ ಯಾವ ಕೃತಿ ಸಿನಿಮಾ ಅಥವಾ ಸೀರಿಯಲ್ ಆಗುತ್ತಿದೆ.? ಎಂಬುದರ ವಿವರ ಇನ್ನೂ ಲಭ್ಯವಾಗಿಲ್ಲ. ಆದ್ರೆ, ಆ ಆಫರ್ ಗೆ ಚೈತ್ರ ಕೋಟೂರು ಒಪ್ಪಿಗೆ ಸೂಚಿಸಿದ್ದಾರಂತೆ. ಅಂದ್ಹಾಗೆ, 'ಬಿಗ್ ಬಾಸ್' ಮನೆಯಿಂದ ಹೊರಗೆ ಬರುವ ಮುನ್ನ ನಟ ಜೈಜಗದೀಶ್ ರವರ ಬಗ್ಗೆ ಪುಸ್ತಕ ಬರೆಯುವುದಾಗಿ ರವಿ ಬೆಳಗೆರೆ ಘೋಷಿಸಿದ್ದರು.

  English summary
  Bigg Boss Kannada 7 Contestant Chaitra Kotur gets an offer from Ravi Belagere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X