Just In
Don't Miss!
- News
ಬೈಕ್ ಹತ್ತುವ ಮುನ್ನ ಈ ಭಯಾನಕ ಅಪಘಾತ ದೃಶ್ಯ ನೋಡಿ !
- Automobiles
ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕ್
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್ 7'ನಲ್ಲಿ ಇರ್ತಾರೆ ಈ ಕ್ಯೂಟ್ ನಿರೂಪಕಿ

'ಬಿಗ್ ಬಾಸ್ ಸೀಸನ್ 7' ಕ್ಷಣಗಣನೆ ಆರಂಭವಾಗುತ್ತಿದೆ. ಈಗಾಗಲೇ ಎರಡು ಸ್ಪರ್ಧಿಗಳ ಹೆಸರನ್ನು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ. ಇದೀಗ ಕನ್ನಡದ ಒಬ್ಬ ನಿರೂಪಕಿ ಕಾರ್ಯಕ್ರಮದಲ್ಲಿ ಸ್ಥಾನ ಪಡೆದಿದ್ದಾರೆ.
ಚೈತ್ರ ವಾಸುದೇವನ್ 'ಬಿಗ್ ಬಾಸ್ ಸೀಸನ್ 7' ಸ್ಪರ್ಧಿ ಆಗಲಿದ್ದಾರೆ. ಕಾರ್ಯಕ್ರಮದ 14ನೇ ಸ್ಪರ್ಧಿ ಇವರಾಗುತ್ತಾರೆ ಎನ್ನುವ ಸುದ್ದಿ ಬಂದಿದೆ. ಈ ಕ್ಷಣಕ್ಕೆ ಕಲರ್ಸ್ ಕನ್ನಡ ವಾಹಿನಿ ಚೈತ್ರ ವಾಸುದೇವನ್ ಹೆಸರನ್ನು ಬಹಿರಂಗ ಪಡಿಸಿಲ್ಲ.
'ಬಿಗ್ ಬಾಸ್' ಮೊದಲ ಸ್ಪರ್ಧಿ ಹೆಸರನ್ನು ಬಹಿರಂಗ ಪಡಿಸಿದ ಕಲರ್ಸ್ ವಾಹಿನಿ
ಚೈತ್ರ ವಾಸುದೇವನ್ ಈಗಾಗಲೇ ಅನೇಕ ವಾಹಿನಿಗಳ ಮನರಂಜನೆ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಸದ್ಯ, 'ಕಲರ್ಸ್ ಕನ್ನಡ ಸಿನಿಮಾ' ವಾಹಿನಿಯ 'ಒಂದು ಸಿನಿಮಾ ಕತೆ' ಕಾರ್ಯಕ್ರಮವನ್ನು ಚೈತ್ರ ವಾಸುದೇವನ್ ನಿರೂಪಣೆ ಮಾಡುತ್ತಿದ್ದಾರೆ.
ಜೀ ಕನ್ನಡ, ಕಲರ್ಸ್ ವಾಹಿನಿ, ಉದಯ ಟಿವಿ ವಾಹಿನಿಗಳಲ್ಲಿ ಚೈತ್ರ ವಾಸುದೇವನ್ ಕೆಲಸ ಮಾಡಿದ್ದಾರೆ. ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇದೀಗ ಈ ನಿರೂಪಕಿಗೆ ಬಿಗ್ ಬಾಸ್ ಅವಕಾಶ ಸಿಕ್ಕಿದೆ.
'ಬಿಗ್ ಬಾಸ್' ಮನೆಗೆ ಬಂದ ರವಿ ಬೆಳಗೆರೆ: ಸಿಗರೇಟ್ ಗಾಗಿ ಬೇಡಿಕೆ
ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಅನುಪಮ ಭಟ್, ಅನುಶ್ರೀ, ರೆಹಮಾನ್, ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ ಬಿಗ್ ಬಾಸ್ ಗೆ ಹೋಗಿ ಬಂದ ಪ್ರಮುಖ ನಿರೂಪಕ ಹಾಗೂ ನಿರೂಪಕಿಯರಾಗಿದ್ದಾರೆ.