For Quick Alerts
  ALLOW NOTIFICATIONS  
  For Daily Alerts

  ಸುವರ್ಣದಲ್ಲಿ ಚಾಲೆಂಜಿಂಗ್ ಸ್ಟಾರ್ ಲೇಟೆಸ್ಟ್ ಚಿತ್ರ

  By Rajendra
  |
  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿಂಗಾರಿ ಚಿತ್ರ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಮೂಡಿಬರುತ್ತಿದೆ. ಶನಿವಾರ (ಮಾ.30) ಸಂಜೆ 6ಕ್ಕೆ ನಿಮ್ಮ ನೆಚ್ಚಿನ ಮನರಂಜನಾ ವಾಹಿನಿ ಸುವರ್ಣ ವಾಹಿನಿಯಲ್ಲಿ ಚಿಂಗಾರಿ ಚಿತ್ರದನ್ನು ನೋಡಿ ಆನಂದಿಸಬಹುದು.

  ಚಿಂಗಾರಿ ಚಿತ್ರವು ಹಾಲಿವುಡ್ ನ 'ಟೇಕನ್' ಚಿತ್ರದ ಸ್ಫೂರ್ತಿ. ಕೊರಿಯೋಗ್ರಾಫರ್ ಹರ್ಷಾ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು.

  ಒಂದು ವೇಳೆ ನೀವು ಚಿತ್ರಮಂದಿರದಲ್ಲಿ 'ಚಿಂಗಾರಿ' ಮಿಸ್ ಮಾಡಿಕೊಂಡಿದ್ದರೆ ಸುವರ್ಣ ವಾಹಿನಿಯಲ್ಲಿ ಮಿಸ್ ಮಾಡಿಕೊಳ್ಳದೆ ನೋಡಿ ಆನಂದಿಸಿ. ಚಿತ್ರವನ್ನು ಈಗಾಗಲೆ ವೀಕ್ಷಿಸಿದ್ದರೂ ಮತ್ತೆ ನೋಡಬಹುದಾದ ಚಿತ್ರಗವಿದು. ಚಿತ್ರದಲ್ಲಿನ ಸಸ್ಪೆನ್ಸ್, ಥ್ರಿಲ್ಲಿಂಗ್ ಸನ್ನಿವೇಶಗಳು ವೀಕ್ಷಕರನ್ನು ಹಿಡಿದಿಡುತ್ತವೆ.

  ಸರಿಸುಮಾರು ರು.8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರ ಬಾಕ್ಸ್ ಆಫೀಸಲ್ಲಿ ರು.12 ಕೋಟಿ ಕಲೆಕ್ಷನ್ ಮಾಡಿತ್ತು. ಎಚ್.ಸಿ.ವೇಣು ಅವರ ಛಾಯಾಗ್ರಹಣ ಚಿತ್ರದ ಇನ್ನೊಂದು ಆಕರ್ಷಣೆ. ಸೃಜನ್ ಲೋಕೇಶ್, ಭಾವನಾ, ದೀಪಿಕಾ ಕಾಮಯ್ಯ, ಯಶಸ್ ಸೂರ್ಯ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

  ಚಿತ್ರ ಬಿಡುಗಡೆಯಾದ ಮೊದಲ ದಿನವೇ ರು.2 ಕೋಟಿ ಕಲೆಕ್ಷನ್ ಮಾಡಿತ್ತು. ಚಿತ್ರದ ಟಿವಿ ರೈಟ್ಸ್ ರು.2 ಕೋಟಿಗೆ ಮಾರಾಟವಾಗಿದೆ ನಿರ್ಮಾಪಕ ಮಹದೇವ್ ಈ ಹಿಂದೆ ತಿಳಿಸಿದ್ದರು. ಚಿತ್ರದಲ್ಲಿನ ಏಳು ಸಾಹಸ ಸನ್ನಿವೇಶಗಳು ಮೈನವಿರೇಳಿಸುತ್ತವೆ. ಚಿತ್ರದಲ್ಲಿ ಭಾವನಾ ಅವರ ಐಟಂ ಸಾಂಗ್ ಕಣ್ಮನ ಸೆಳೆಯುತ್ತದೆ. ಒಮ್ಮೆ ಚಿತ್ರ ವಿಮರ್ಶೆಯನ್ನೂ ಓದಿ. (ಒನ್ಇಂಡಿಯಾ ಕನ್ನಡ)

  English summary
  Watch Challenging Star Darshan action film 'Chingari' on Suvarna Channel, 30th March at 6 pm. he film is directed by Harsha.A V. Harikrishna is the music director of the film. Chingari was inspired by the Hollywood film Taken.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X