Just In
Don't Miss!
- News
ಬೆಳಗಾವಿ ಜಿಲ್ಲೆಯ 13 ಕೇಂದ್ರಗಳಲ್ಲಿ ಕೊರೊನಾ ವ್ಯಾಕ್ಸಿನೇಷನ್
- Automobiles
ಸ್ಯಾಮ್ಸಂಗ್ ಕಂಪನಿಯ ಡಿಜಿಟಲ್ ಫೀಚರ್'ನೊಂದಿಗೆ ಮತ್ತಷ್ಟು ಸ್ಮಾರ್ಟ್ ಆಗಲಿವೆ ಈ ಕಂಪನಿಯ ಕಾರುಗಳು
- Sports
ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ನಿಧನ
- Lifestyle
ದಾಂಪತಿ ಹೀಗೆ ವರ್ತಿಸಿದರೆ ಆ ಸಂಬಂಧ ಪ್ರಬುದ್ಧವಾಗಿರುತ್ತೆ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರ್ಗಿ ಮಾತಿನಿಂದ ಜಾನಕಿ ಮೇಲೆ ಸಿಟ್ಟಾದ ಮುದ್ದು ತಂಗಿ ಚಂಚಲ
ಕನ್ನಡ ಕಿರುತೆರೆ ಲೋಕದ ಖ್ಯಾತ ಧಾರಾವಾಹಿ ಮಗಳು ಜಾನಕಿ 250 ಸಂಚಿಕೆಯನ್ನು ಯಶಸ್ವಿಯಾಗಿ ಮುಗಿಸಿ ಮುನ್ನುಗ್ಗುತ್ತಿದೆ. ಸಾಕಷ್ಟು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಾ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸುತ್ತಿದೆ ಮಗಳು ಜಾನಕಿ.
ಸದ್ಯ ಜಾನಕಿ ಧಾರಾವಾಹಿಯಲ್ಲಿ ದುವೆ ವಿಚಾರ ಸದ್ದು ಮಾಡುತ್ತಿದೆ. ಬಾರ್ಗಿ ಮತ್ತು ಚಿರಂತನ್ ಇಬ್ಬರು ಸೇರಿ ಚಂಚಲಳಿಗೆ ಮೋಸ ಮಾಡುತ್ತಿದ್ದಾರೆ. ತಂಗಿ ಬಾಳು ಹಾಳಗಬಾರದು ಎಂದು ಒದ್ದಾಡುತ್ತಿರುವ ಜಾನಕಿಯನ್ನೆ ಕೆಟ್ಟವಳನ್ನಾಗಿ ಮಾಡುತ್ತಿದ್ದಾರೆ ಭಾರ್ಗಿ ಮತ್ತು ಚಿರಂತನ್.
ಜಾನಕಿ ವಿರುದ್ಧವೇ ದ್ವೇಷ ಬೆಳೆಸಿಕೊಳ್ಳುತ್ತಾಳಾ ಮುದ್ದು ತಂಗಿ ಚಂಚಲ
ಭಾರ್ಗಿ ಮತ್ತು ಚಿರಂತನ್ ನಿಂದ ಚಂಚಲ ಕೂಡ ಜಾನಕಿ ವಿರುದ್ಧ ಸಿಟ್ಟಾಗಿದ್ದಾಳೆ. ಅಲ್ಲದೆ ಅನುಮಾನ ಭಗೆಹರಿಸಿಕೊಳ್ಳಲು ನೇರವಾಗಿ ಜಾನಕಿ ಮನೆಗೆ ಹೋಗಿದ್ದಾಳೆ ಚಂಚಲ.ಜಾನಕಿಗೆ ನೋವಾಗುವ ಹಾಗೆ ಮಾತನಾಡಿ, ಬೇಕು ಅಂತನೆ ಇದನ್ನೆಲ್ಲ ಮಾಡುತ್ತಿದ್ದೀಯಾ ಎನ್ನುವ ಹಾಗೆ ಹೇಳಿ ಜಾನಕಿಯನ್ನು ಮತ್ತಷ್ಟು ನೋವಿಸಿದ್ದಾಳೆ ಚಂಚಲ. ಮುಂದೆ ಓದಿ..

ಸುಳ್ಳು ಆರೋಪ ಎಂದು ಹೇಳಿದ ಚಿರಂತನ್
ಚಿರಂತನ್ ವಿರುದ್ಧ ಕೇಳಿ ಬರುತ್ತಿದ್ದ ಕ್ರಿಮಿನಲ್ ಕೇಸ್ ಬಗ್ಗೆ ಚಂಚಲ ವಿಚಾರಿಸಿದಾಗ ಇದೆಲ್ಲ ಸುಳ್ಳು ಸ್ನೇಹೇತನ ವಿರುದ್ಧ ಹಾಕಿದ ಕೇಸ್ ಎಂದು ಚಂಚಲಳಿಗೆ ಯಾಮಾರಿಸಿದ್ದಾನೆ ಚಿರಂತನ್. ಪೊಲೀಸ್ ಅವರು ನನ್ನ ಮೇಲು ಎಫ್ ಐ ಆರ್ ಆಕಿದ್ರು. ಆದ್ರೆ ಆರೋಪ ಸುಳ್ಳು ಎಂದು ಸಾಭೀತಾಗಿದೆ. ಸುಮ್ಮನೆ ಕ್ರಿಮಿನಲ್ ಮಾಡಿ ಬಿಟ್ಟೆ ಎಂದು ಹೇಳಿ, ಚಂಚಲಳನ್ನು ನಂಬಿಸಿದ್ದಾನೆ ಚಿರಂತನ್.

ಸಿ ಎಸ್ ಪಿ ವಿರುದ್ಧ ರೊಚ್ಚಿಗೆದ್ದ ಚಿರಂತನ್
ಭಾರ್ಗಿ ಕಂಡ್ರೆ ಸಿ ಎಸ್ ಪಿಗೆ ಆಗುವುದಿಲ್ಲ. ಹಾಗಾಗಿ ಇಂತಹ ವಿಚಾರಗಳನ್ನು ಎಳೆದು ಸುಮ್ಮನೆ ಮನೆ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ಸಿ ಎಸ್ ಪಿ ವಿರುದ್ಧ ಮಾತನಾಡುತ್ತ ಜಾನಕಿಯನ್ನು ನಿಂದಿಸುತ್ತಿದ್ದಾನೆ ಚಿರಂತನ್. ಆದ್ರೆ ಚಂಚಲಗೆ ಚಿರಂತನ್ ಮತ್ತು ಭಾರ್ಗಿ ನಡೆಸುತ್ತಿರುವ ಸಂಚು ಗೊತ್ತಾಗದೆ ಜಾನಕಿ ಮತ್ತು ಸಿ ಎಸ್ ಪಿ ವಿರುದ್ಧ ತಪ್ಪು ತಿಳಿದುಕೊಂಡಿದ್ದಾಳೆ. ಚಿರಂತನ್ ಮೇಲೆಯೆ ತಪ್ಪು ತಿಳಿದುಕೊಂಡಿದ್ದಾಗಿ ಕ್ಷಮೆ ಕೇಳಿದ್ದಾಳೆ ಚಂಚಲ.
ಚಿರಂತನ್ ಮತ್ತು ಚಂಚಲ ಮದುವೆ ನಿಲ್ಲಿಸುತ್ತಾಳಾ ಜಾನಕಿ?

ಜಾನಕಿ ಬಳಿ ಬಂದ ಚಂಚಲ
ಜಾನಕಿ ಬಗ್ಗೆಯೆ ತಪ್ಪು ತಿಳಿದುಕೊಂಡ ಚಂಚಲ. ಚಿರಂತನ್ ಜೊತೆ ಮದುವೆ ಆಗುವುದು ನಿನಗೆ ಇಷ್ಟವಿಲ್ಲದೆ ಹೀಗೆ ಮಾಡುತ್ತಿದ್ದೀಯಾ ಎಂದು ಜಾನಕಿ ಜೊತೆ ಸ್ವಲ್ಪ ಕಾರವಾಗಿ ಮಾತನಾಡಿದ್ದಾಳೆ ಚಂಚಲ. ಅಷ್ಟೆಯಲ್ಲ ಅಫ್ಪನಿಗಿಂತ ಸಿ ಎಸ್ ಪಿ ಯೆ ಹೆಚ್ಚಾಗಿ ಹೋದ್ರ ಎಂದು ಜಾನಕಿಗೆ ಪ್ರಶ್ನೆ ಮಾಡುತ್ತಿದ್ದಾಳೆ. ಚಿರಂತನ್ ತಪ್ಪಿಲ್ಲ ಅಂದ ಮೇಲೆ ಅವರ ವಿರುದ್ಧ ಸುಳ್ಳು ಹೇಳ ಬಾರದು ಎಂದು ಚಂಚಲ ಜಾನಕಿಗೆ ನೋವಾಗುವ ಹಾಗೆ ಮಾತನಾಡಿದ್ದಾಳೆ.
ಸಿ ಎಸ್ ಪಿ ಸಿಡಿಸಿದ ಹೊಸ ಬಾಂಬ್ ಗೆ ಶಾಕ್ ಆದ ಜಾನಕಿ

ಜಾನಕಿ ಮೇಲೆಯೆ ರೇಗಿದ ಭಾರ್ಗಿ
ಚಂಚಲ ಮದುವೆ ನಿಲ್ಲಿಸಲು ಬೇಕು ಅಂತನೆ ಮಾಡಿದ ಪ್ಲಾನ್ ಎಂದು ಜಾನಕಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಭಾರ್ಗಿ. ನಿನ್ನ ಮದುವೆ ಒಬ್ಬ ಮೋಸಗಾರನ ಜೊತೆ ನಡೆಯಿತು ಎಂದು, ಚಂಚಲಗೆ ಒಳ್ಳೆಯ ಗಂಡ ಸಿಗುತ್ತಿದ್ದಾರೆ ಎಂದು ಹೊಟ್ಟೆಕಿಚ್ಚಿನಿಂದ ತಂಗಿಯ ಜೀವನ ಹಾಳು ಮಾಡುತ್ತಿದ್ದೀಯಾ ಎಂದು ಭಾರ್ಗಿ ನೇರವಾಗಿಯೆ ಜಾನಕಿಗೆ ಹೇಳಿದ್ದಾರೆ. ಸಿ ಎಸ್ ಪಿ ಜೊತೆ ಸೇರಿಕೊಂಡು ಮನೆಯ ನೆಮ್ಮದಿ ಹಾಳು ಮಾಡಬೇಡ ಎಂದು ಜಾನಕಿ ಬಳಿ ಕೇಳಿಕೊಂಡಿದ್ದಾರೆ ಭಾರ್ಗಿ.