»   » ಚಂದನ್ ಶೆಟ್ಟಿ ರಾಪ್ ಹಾಡುಗಳ ಹಿಂದೆ ಇದ್ದಾರೆ ಈ ಕಾಣದ ವ್ಯಕ್ತಿ

ಚಂದನ್ ಶೆಟ್ಟಿ ರಾಪ್ ಹಾಡುಗಳ ಹಿಂದೆ ಇದ್ದಾರೆ ಈ ಕಾಣದ ವ್ಯಕ್ತಿ

Posted By:
Subscribe to Filmibeat Kannada
ಚಂದನ್ ಶೆಟ್ಟಿ ತಾನು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ವ್ಯಕ್ತಿಗೆ ಹೇಳಿದ್ರು ಥ್ಯಾಂಕ್ಸ್ | Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಇರುವ ಚಂದನ್ ಶೆಟ್ಟಿ ರಾಪ್ ಹಾಡುಗಳು ಸಿಕ್ಕಾಪಟ್ಟೆ ಫೇಮಸ್. ಇದುವರೆಗೆ ಮಾಡಿರುವುದು ನಾಲ್ಕೈದು ಹಾಡುಗಳಾದರೂ ಕೂಡ ಚಂದನ್ ರಾಪ್ ಹಾಡುಗಳಿಗೆ ದೊಡ್ಡ ಜನಪ್ರಿಯತೆ ಇದೆ. ಆದರೆ ಅವರ ಇಂತಹ ಸೂಪರ್ ಹಿಟ್ ಹಾಡುಗಳ ಹಿಂದೆ ಒಬ್ಬ ಕಾಣದ ವ್ಯಕ್ತಿಯ ಸಹಾಯ ಇದೆ.

ನಿನ್ನೆ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ 'ಸಿಂಪಲ್ಲಾಗ್ ಒಂದ್ ಥ್ಯಾಂಕ್ಸ್ ಹೇಳಿ' ಎಂಬ ಸಿಂಪಲ್ ಟಾಸ್ಕ್ ಅನ್ನು ಮನೆಯ ಸದಸ್ಯರಿಗೆ ನೀಡಲಾಗಿತ್ತು. ಅದೇ ರೀತಿ ಮನೆಯ ಎಲ್ಲರೂ ಕೂಡ ತಮ್ಮ ಕುಟುಂಬದ ಸದಸ್ಯರನ್ನು ಬಿಟ್ಟು ತಮಗೆ ಸಹಾಯ ಮಾಡಿದ ಬೇರೆ ಬೇರೆ ವ್ಯಕ್ತಿಗಳಿಗೆ ಧನ್ಯವಾದ ಹೇಳಿದರು. ಈ ವೇಳೆ ಚಂದನ್ ಶೆಟ್ಟಿ ದಿನೇಶ್.ವಿ ಎಂಬುವವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಇಷ್ಟು ದಿನ ಚಂದನ್ ಶೆಟ್ಟಿ ಮಾಡಿದ್ದೆಲ್ಲ ಬರೀ 'ಡವ್'.!

Chandan Shetty expressed his gratitude towards the man who helped him in his bad times.

ಹಿಂದೆ ಚಂದನ್ ಶೆಟ್ಟಿ ಅವರಿಗೆ ಅವರ ''ಹಾಳಾಗೋದೆ...'' ಹಾಡನ್ನು ಶೂಟಿಂಗ್ ಮಾಡುವುದಕ್ಕೆ ದುಡ್ಡು ಇರಲಿಲ್ಲವಂತೆ. ಈ ವೇಳೆ ಒಮ್ಮೆ ಚಂದನ್ ಸ್ಟೂಡಿಯೊಗೆ ಭೇಟಿ ನೀಡಿ ಹಾಡು ಕೇಳಿದ ದಿನೇಶ್ ಇಷ್ಟ ಪಟ್ಟು ನಾನೇ ಈ ಹಾಡನ್ನು ಪ್ರೋಡ್ಯೂಸ್ ಮಾಡುತ್ತೇನೆ ಅಂತ ಹೇಳಿದರಂತೆ. ಆ ಹಾಡು ಹಿಟ್ ಆದ ನಂತರ ಅವರ 'ಮೂರೇ ಮೂರು ಪೆಗ್..' ಹಾಡನ್ನು ಕೂಡ ಅವರೇ ನಿರ್ಮಾಣ ಮಾಡಿದ್ದಾರೆ. ಸೋ, 'ಬಿಗ್ ಬಾಸ್' ಮನೆಯಲ್ಲಿ ತಮ್ಮ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದ ದಿನೇಶ್ ಅವರಿಗೆ ಧನ್ಯವಾದ ಹೇಳಿ ಚಂದನ್ ಹಳೆಯ ಘಟನೆಯನ್ನು ನೆನಪು ಮಾಡಿಕೊಂಡರು.

English summary
Bigg Boss Kannada 5 contestant Chandan Shetty expressed his gratitude towards the man who helped him in his bad times.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X