»   » ಚಂದನ್ ಶೆಟ್ಟಿ ಹಾಡಿದ 'ಗೊಂಬೆ' ಹಾಡಿನ ಟ್ರೆಂಡ್ ನೋಡಿ.!

ಚಂದನ್ ಶೆಟ್ಟಿ ಹಾಡಿದ 'ಗೊಂಬೆ' ಹಾಡಿನ ಟ್ರೆಂಡ್ ನೋಡಿ.!

Posted By:
Subscribe to Filmibeat Kannada

Rap ಸಿಂಗರ್ ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಯಲ್ಲಿ ತಮ್ಮ Rap ಮ್ಯೂಸಿಕ್ ಮೂಲಕ ಸಖತ್ ಮನರಂಜನೆ ನೀಡುತ್ತಿದ್ದಾರೆ. ತಮ್ಮದೇ ಆಲ್ಬಂ ಹಾಡುಗಳು ಮತ್ತು ಕನ್ನಡ ಸಿನಿಮಾ ಹಾಡುಗಳ ಮೂಲಕ 'ಬಿಗ್ ಬಾಸ್' ವೀಕ್ಷಕರಿಗೆ ಖುಷಿ ನೀಡುತ್ತಿದ್ದಾರೆ.

ಈ ಮಧ್ಯೆ 'ಬಿಗ್ ಬಾಸ್' ಸ್ಪರ್ಧಿ ನಿವೇದಿತಾ ಗೌಡ ಅವರ ಬಗ್ಗೆ ಚಂದನ್ ಶೆಟ್ಟಿ ಬಿಗ್ ಮನೆಯಲ್ಲಿ 'ಗೊಂಬೆ' ಹಾಡೊಂದು ಹಾಡಿದ್ದರು. ಈ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅದೃಷ್ಟವಶಾತ್ ಕ್ಯಾಪ್ಟನ್ ಆದ ಚಂದನ್ ಶೆಟ್ಟಿ: ಈ ವಾರ ಕೂಡ ಸೇಫ್.!

Chandan shetty Gombe Song getting Viral

ಅಂದ್ಹಾಗೆ, ಈ ಹಾಡಿಗೆ ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿದ್ದು, ಯ್ಯೂಟ್ಯೂಬ್ ನಲ್ಲಿ ಈ ಹಾಡನ್ನ ಟ್ರೆಂಡ್ ಮಾಡುತ್ತಿದ್ದಾರೆ. ಯುವಕನೊಬ್ಬ ಚಂದನ್ ಶೆಟ್ಟಿ ಹಾಡಿದ 'ಗೊಂಬೆ....ಗೊಂಬೆ' ಹಾಡನ್ನ ವೀಣೆಯಲ್ಲಿ ನುಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಈ ವಿಡಿಯೋ ಈಗ ಯ್ಯೂಟ್ಯೂಬ್ ನಲ್ಲಿ ಹರಿದಾಡುತ್ತಿದ್ದು ಜನರ ಮೆಚ್ಚುಗೆ ಗಳಿಸಿಕೊಂಡಿದೆ. ಇನ್ನು ಬಹುತೇಕ ಯುವಕರ ಬಾಯಲ್ಲಿ ಗೊಂಬೆ ಹಾಡು ಗುನುಗುತ್ತಿದೆ. ಬಹುಶಃ ಚಂದನ್ ಶೆಟ್ಟಿ 'ಬಿಗ್' ಮನೆಯಿಂದ ಹೊರಬಂದ ಮೇಲೆ ಈ ಗೊಂಬೆ ಹಾಡಿನ ಚಿತ್ರೀಕರಣ ಮಾಡಿದ್ರು ಮಾಡಬಹುದು.

ಶ್ರುತಿ ಪ್ರಕಾಶ್ ಕಂಡ್ರೆ ಚಂದನ್ ಶೆಟ್ಟಿಗೆ ಇಷ್ಟ.! ಆದ್ರೆ, ಶ್ರುತಿಗೆ ಯಾರಂದ್ರೆ ಇಷ್ಟ.?

ವೀಣೆಯಲ್ಲಿ 'ಗೊಂಬೆ.....ಗೊಂಬೆ' ನುಡಿಸಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
Rap Singer Chandan Shetty's Gombe song getting viral in social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X