For Quick Alerts
  ALLOW NOTIFICATIONS  
  For Daily Alerts

  ಕೋಗಿಲೆಯ ಹುಡುಕಿ ಉತ್ತರ ಕರ್ನಾಟಕಕ್ಕೆ ಹೋದ ಚಂದನ್ ಶೆಟ್ಟಿ

  By Naveen
  |

  ಬಿಗ್ ಬಾಸ್ ಕಾರ್ಯಕ್ರಮ ಗೆದ್ದ ಮೇಲೆ ಚಂದನ್ ಕಿರುತೆರೆಯಲ್ಲಿ ಸಖತ್ ಬಿಜಿ ಇದ್ದಾರೆ. 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮ ನಂತರ ಚಂದನ್ ಈಗ ಮತ್ತೊಂದು ಹೊಸ ಕಾರ್ಯಕ್ರಮ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

  ಕಲರ್ಸ್ ಸೂಪರ್ ವಾಹಿನಿಯ 'ಕನ್ನಡ ಕೋಗಿಲೆ' ಎಂಬ ಕಾರ್ಯಕ್ರಮ ಚಂದನ್ ಶೆಟ್ಟಿ ಸಾರಥ್ಯದಲ್ಲಿ ನಡೆಯಲಿದೆ. ಇದೊಂದು ಹೊಸ ಸಿಂಗಿಂಗ್ ರಿಯಾಲಿಟಿ ಶೋ ಆಗಿದೆ. ಈ ಕಾರ್ಯಕ್ರಮದ ಆಡಿಷನ್ ಸದ್ಯ ನಡೆಯುತ್ತಿದೆ. ಮೇ 20 ಹುಬ್ಬಳ್ಳಿಯಲ್ಲಿ ಆಡಿಷನ್ ನಡೆದಿದ್ದು, ಇಂದು ಬೆಳಗಾವಿಯಲ್ಲಿ ನಡೆಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಹಾಡುವ ಕೋಗಿಲೆಯನ್ನು ಹುಡುಕಿ ಚಂದನ್ ಸಂಚಾರ ಮಾಡುತ್ತಿದ್ದಾರೆ.

  ಜೂನ್ ತಿಂಗಳು 'ಸೂಪರ್' ತಿಂಗಳು! ಜೂನ್ ತಿಂಗಳು 'ಸೂಪರ್' ತಿಂಗಳು!

  6 ರಿಂದ 60 ವರ್ಷದ ಒಳಗಿನ ಯಾರು ಬೇಕಾದರೂ ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಇನ್ನು ಜೂನ್ ತಿಂಗಳಿನಲ್ಲಿ ಈ ಕಾರ್ಯಕ್ರಮ ಶುರು ಆಗಲಿದೆ. 'ಜೂನ್ ತಿಂಗಳು ಸೂಪರ್ ತಿಂಗಳು' ಎಂಬ ಟ್ಯಾಗ್ ಲೈನ್ ನಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಕಲರ್ಸ್ ಸೂಪರ್ ವಾಹಿನಿ ಪರಿಚಯ ಮಾಡುತ್ತಿದೆ. ಆ ಕಾರ್ಯಕ್ರಮಗಳ ಜೊತೆಗೆ 'ಪಾ ಪಾ ಪಾಂಡು'ಧಾರಾವಾಹಿ ಸಹ ಮತ್ತೆ ಪ್ರಸಾರ ಆಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.

  English summary
  Kannada rapper Chandan Shetty in Uttara Karnataka for Colors Super channel's new show 'Kannada Kogile' audition

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X