For Quick Alerts
  ALLOW NOTIFICATIONS  
  For Daily Alerts

  ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಬಂದ ಸ್ಪರ್ಧಿ ಇವರೇ

  |

  ಬಿಗ್ ಬಾಸ್ ಕನ್ನಡ ಸೀಸನ್-7 ರೋಚಕ ಘಟ್ಟತಲುಪಿದೆ. ಇನ್ನೇನು ಬಿಗ್ ಬಾಸ್ ಫಿನಾಲೆಗೆ ನಾಲ್ಕು ವಾರಗಳು ಮಾತ್ರ ಬಾಕಿಯುಳಿದಿದೆ. ಬಿಗ್ ಬಾಸ್ ಸೀಸನ್-7 ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎನ್ನುವ ಲೆಕ್ಕಾಚಾರ ಈಗಾಗಲೆ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರು ಮೊದಲ ಸ್ಥಾನ ಪಡೆಯುತ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 9 ಸ್ಪರ್ಧಿಗಳಿದ್ದಾರೆ.

  ಆದರೆ ಇಂದು ಬಿಗ್ ಮನೆಯಿಂದ ಒಬ್ಬ ಸದಸ್ಯರು ಹೊರಬರುತ್ತಾರೆ. ಈ ವಾರ ಮನೆಯಿಂದ ಹೊರಬರಲು ಆರು ಜನ ನಾಮಿನೇಟ್ ಆಗಿದ್ದರು. ಚಂದನ್ ಆಚಾರ್, ದೀಪಿಕಾ ದಾಸ್, ಭೂಮಿ ಶೆಟ್ಟಿ, ಹರೀಶ್ ರಾಜ್, ಚಂದನಾ ಮತ್ತು ಕಿಶನ್ ಈ ಆರು ಸ್ಪರ್ಧಿಗಳಲ್ಲಿ ತಿಳಿದಿರುವ ಮಾಹಿತಿ ಪ್ರಕಾರ ಚಂದನಾ ಅನಂತಕೃಷ್ಣ ಮನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

  ಕುರಿ ಪ್ರತಾಪ್ ಬೆನ್ನಿಗೆ ನಿಂತಿದ್ದಾರೆ ದರ್ಶನ್ ಅಭಿಮಾನಿಗಳು.!ಕುರಿ ಪ್ರತಾಪ್ ಬೆನ್ನಿಗೆ ನಿಂತಿದ್ದಾರೆ ದರ್ಶನ್ ಅಭಿಮಾನಿಗಳು.!

  84 ದಿನಗಳ ಕಾಲ ಬಿಗ್ ಮನೆಯಲ್ಲಿದ್ದು ಅಭಿಮಾನಿಗಳನ್ನು ರಂಜಿಸಿದ್ದ ಚಂದನಾ ಈಗ ಬಿಗ್ ಮನೆಯ ಆಟ ಮುಗಿಸಿ ಮನೆಯಿಂದ ಹೊರಬಂದಿದ್ದಾರಂತೆ. ಬಿಗ್ ಬಾಸ್ ಪ್ರಾರಂಭವಾದ ಮೊದಲ ದಿನದಿಂದನೂ ಚಂದನಾ ಸ್ಟ್ರಾಂಗ್ ಸ್ಪರ್ಧಿಯಾಗಿ ಗಮನ ಸೆಳೆದಿದ್ದಾರೆ. ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ಜೊತೆ ಚಂದನಾ ಉತ್ತಮ ಸ್ನೇಹ ಹೊಂದಿದ್ದರು. ಇದೆ ಸ್ನೇಹ ಚಂದನಾ ಅವರನ್ನು 84 ದಿನಗಳ ಕಾಲ ಮನೆಯಲ್ಲಿ ಇರುವಂತೆ ಮಾಡಿದೆ ಅಂದರು ತಪ್ಪಾಗಲ್ಲ.

  ಅಕ್ಬೋಬರ್ 13ಕ್ಕೆ ಬಿಗ್ ಬಾಸ್ ಸೀಸನ್-7 ಪ್ರಾರಂಭವಾಗಿದ್ದು, 12 ವಾರಗಳನ್ನು ಯಶಸ್ವಿಯಾಗಿ ಪೂರೈಸಿದೆ. ಒಟ್ಟು 20 ಸ್ಪರ್ಧಿಗಳಲ್ಲಿ ಈಗ 8 ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಮುಂದಿನ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಹೋಗುವ ಸಾಧ್ಯತೆ ಇದೆ.

  English summary
  Chandana Ananthakrishna out from Bigg Boss Kannada season-7.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X