For Quick Alerts
  ALLOW NOTIFICATIONS  
  For Daily Alerts

  ಅಂತೂ ಇಂತೂ ನಟಿ ಚಂದ್ರಿಕಾ ಆಟದಿಂದ ಔಟ್

  By Rajendra
  |
  <ul id="pagination-digg"><li class="next"><a href="/tv/not-doing-bigg-boss-show-only-for-money-sudeep-074923.html">Next »</a></li></ul>

  ಈ ವಾರ ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಮೂವರು ನಾಮಿನೇಟ್ ಆಗಿದ್ದರು. ಚಂದ್ರಿಕಾ, ಅರುಣ್ ಸಾಗರ್ ಹಾಗೂ ವಿಜಯ್ ರಾಘವೇಂದ್ರ. ಮೂವರಲ್ಲಿ ಯಾರು ಮನೆಗೆ ಹೋಗಲಿದ್ದಾರೆ ಎಂಬ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿತ್ತು. ಕಡೆಗೂ ಚಂದ್ರಿಕಾ ಅವರು ಆಟದಿಂದ ಔಟ್ ಆಗಿದ್ದಾರೆ.

  ಈಗ ನಿಕಿತಾಗೆ ಸ್ಪರ್ಧಿಯೇ ಇಲ್ಲದಂತಾಗಿದೆ. ಮನೆಯಲ್ಲಿ ಉಳಿದಿರುವ ಏಕೈಕ ನಾರಿಮಣಿ ಎಂದರೆ ನಿಕಿತಾ. ಇನ್ನು ನರೇಂದ್ರ ಬಾಬು ಶರ್ಮಾ, ಅರುಣ್ ಸಾಗರ್ ಹಾಗೂ ವಿಜಯ್ ರಾಘವೇಂದ್ರ ಅವರು ಮನೆಯಲ್ಲಿ ಉಳಿದುಕೊಂಡಿದ್ದಾರೆ.

  ಚಂದ್ರಿಕಾ ಅವರಿಗೆ ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರದ ಪ್ರಕಾರ ಅರುಣ್ ಸಾಗರ್ ಫೈನಲ್ ತಲುಪಿದ್ದಾರೆ. ಇನ್ನೇನಿದ್ದರೂ ನೇರ ಹಣಾಹಣಿ ಇರುವುದು ನಿಕಿತಾ, ವಿಜಯ್ ಹಾಗೂ ನರೇಂದ್ರ ಬಾಬು ಶರ್ಮಾ ಅವರ ನಡುವೆ.

  ಕಳೆದ 82 ದಿನಗಳಲ್ಲಿ ಚಂದ್ರಿಕಾ ಅವರು ಬಿಗ್ ಬಾಸ್ ಶೋ ಮೂಲಕ ಕಿರುತೆರೆ ವಾಹಿನಿ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅವರನ್ನು ಹತ್ತಿರದಿಂದ ನೋಡಿದಂತಾಗಿದೆ. ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತಾಗಿದೆ.

  ಸಣ್ಣಪುಟ್ಟ ವಿಷಯಕ್ಕೂ ತಮ್ಮ ಮಗು ಮೇಲೆ ಆಣೆ ಮಾಡುತ್ತಿದ್ದ ಚಂದ್ರಿಕಾ ತಾವು ತುಂಬಾ ಜಗಳಗಂಟಿ ಎಂಬುದೂ ಈ ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಗೊತ್ತಾಯಿತು. ಅವರ ಈ ಸ್ವಭಾವ ಬಹಳಷ್ಟು ಮಂದಿಗೆ ಬೇಸರವನ್ನೂ ತರೆಸಿದ್ದು ಸುಳ್ಳಲ್ಲ.

  <ul id="pagination-digg"><li class="next"><a href="/tv/not-doing-bigg-boss-show-only-for-money-sudeep-074923.html">Next »</a></li></ul>
  English summary
  After giving a lot of competition actress Chandrika finally evicted from Bigg Boss Kannada reality show. In the weekend episode Chandrika shares her bitter incident with Sudeep. He also clarifies he is no doing Bigg Boss programme not only for money. Here is the 'Vaarada Kathe Kichchana Jothe' highlights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X