For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಹಿಂಬಾಗಿಲ ಮೂಲಕ ಚಂದ್ರಿಕಾ ರೀ ಎಂಟ್ರಿ

  By Rajendra
  |
  <ul id="pagination-digg"><li class="next"><a href="/tv/brahmanda-shocks-chandrika-entry-bigg-boss-075009.html">Next »</a></li></ul>

  ಕಳೆದ ಶುಕ್ರವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದ ನಟಿ ಚಂದ್ರಿಕಾ ಪುನಃ ಮನೆಗೆ ಆಗಮಿಸಿದ್ದಾರೆ. ಅವರು ಮನೆಯಲ್ಲಿ ಎಷ್ಟು ದಿನ ಉಳಿಯಲಿದ್ದಾರೆ ಎಂಬ ಗುಟ್ಟನ್ನು ಬಿಗ್ ಬಾಸ್ ಬಿಟ್ಟುಕೊಟ್ಟಿಲ್ಲ. ಇಷ್ಟಕ್ಕೂ ಅವರು ಮನೆಗೆ ಪುನಃ ಬಂದಿದ್ದೇಕೆ ಎಂಬ ಪ್ರಶ್ನೆ ಮನೆಯ ಇತರೆ ಸದಸ್ಯರನ್ನೂ ಕಾಡುತ್ತಿದೆ.

  ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಈಗ ಪುನಃ ಅವರು ಮನೆಗೆ ಬಂದಿರುವುದು ಬ್ರಹ್ಮಾಂಡ ಗುರುಗಳು ಸೇರಿದಂತೆ ನಿಕಿತಾ, ವಿಜಯ್ ರಾಘವೇಂದ್ರ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸದ್ಯಕ್ಕೆ ಅವರ ತಲೆಯನ್ನು ಕೊರೆಯುತ್ತಿರುವ ಪ್ರಶ್ನೆ ಇದೇ ಆಗಿದೆ.

  ಮನೆಯಲ್ಲಿ ಫೈನಲ್ ಹಂತದವರೆಗೂ ಚಂದ್ರಿಕಾ ಇರುತ್ತಾರಾ? ಅಥವಾ ಈ ವಾರ ಮತ್ತೆ ಹೊರಹೋಗುತ್ತಾರಾ ಎಂಬ ಬಗ್ಗೆಯೂ ಸುಳಿವಿಲ್ಲ. ಅಷ್ಟರ ಮಟ್ಟಿಗೆ ಬಿಗ್ ಬಾಸ್ ಗುಟ್ಟನ್ನು ಹಿಡಿದಿಟ್ಟುಕೊಂಡಿದ್ದಾರೆ. ಚಂದ್ರಿಕಾ ಅವರು ಮನೆಯಿಂದ ಹೊರಹೋದ ಬಳಿಕ ನಿಕಿತಾ ನೆಮ್ಮದಿಯದ ನಿಟ್ಟುಸಿರು ಬಿಟ್ಟಿದ್ದರು.

  ಈಗ ದಿಢೀರ್ ಎಂದು ಚಂದ್ರಿಕಾ ಆಗಮಿಸಿರುವುದು ನಿಖಿತಾ ಪಾಲಿಗಂತೂ ನುಂಗಲಾರದ ತುತ್ತಾಗಿದೆ. ಅವರ ಪುನರ್ ಆಗಮದಿಂದ ಶಾಕ್ ಆಗಿರುವ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ, ನಿಕಿತಾ ಹಾಗೂ ವಿಜಯ್ ರಾಘವೇಂದ್ರ ಅವರು ಮೌನಕ್ಕೆ ಶರಣಾಗಿದ್ದಾರೆ.

  <ul id="pagination-digg"><li class="next"><a href="/tv/brahmanda-shocks-chandrika-entry-bigg-boss-075009.html">Next »</a></li></ul>
  English summary
  Bigg Boss Kannada reality shows day 84th and 85th highlights. After evicted from house actress Chandrika re-enters the house. The inmates of the house Nikita, Vijay Raghavendra and Brahmanda Sharma shocked and all are speechless.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X