»   »  80ರ ದಶಕದಲ್ಲೇ ಬಣ್ಣ ಹಚ್ಚಿದ್ದರು ಸಿಎಂ ಸಿದ್ದರಾಮಯ್ಯ, ಯಾವುದು ಆ ಚಿತ್ರ?

80ರ ದಶಕದಲ್ಲೇ ಬಣ್ಣ ಹಚ್ಚಿದ್ದರು ಸಿಎಂ ಸಿದ್ದರಾಮಯ್ಯ, ಯಾವುದು ಆ ಚಿತ್ರ?

Posted By:
Subscribe to Filmibeat Kannada

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕವಿತಾ ಲಂಕೇಶ್ ನಿರ್ದೇಶನ ಮಾಡಲಿರುವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬುದು ಇತ್ತೀಚೆಗಷ್ಟೇ ದೊಡ್ಡ ಸುದ್ದಿಯಾಗಿತ್ತು. ಈ ಮೂಲಕ ಕನ್ನಡ ಚಿತ್ರದಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿತ್ತು.

ಆದ್ರೆ, ಅದೇಷ್ಟೋ ಜನಕ್ಕೆ ಗೊತ್ತಿಲ್ಲದೇ ವಿಚಾರವೇನಪ್ಪಾ ಅಂದ್ರೆ, ಸಿದ್ದರಾಮಯ್ಯ ಅವರು ತುಂಬಾ ವರ್ಷಗಳ ಹಿಂದೆಯೇ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಂಗತಿ ಸ್ವತಃ ಸಿದ್ದರಾಮಯ್ಯ ಅವರಿಗೆ ನೆನಪಿರಲಿಲ್ಲ. ಆದ್ರೆ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಿಷ್ಯ ಹೊರಬಿದ್ದಿದೆ.

ಹಾಗಾದ್ರೆ, ಸಿದ್ದರಾಮಯ್ಯ ಅವರು ಅಭಿನಯಸಿದ ಮೊದಲ ಕನ್ನಡ ಚಿತ್ರ ಯಾವುದು? ಮುಂದೆ ಓದಿ.....

ಸಿನಿಮಾ ಹೆಸರು 'ಎಲ್ಲಿಂದಲೋ ಬಂದವರು'

ಪಿ.ಲಂಕೇಶ್ ನಿರ್ದೇಶನ ಮಾಡಿದ್ದ 'ಎಲ್ಲಿಂದಲೋ ಬಂದವರು' ಚಿತ್ರದಲ್ಲಿ ಸಿದ್ದರಾಮಯ್ಯ ಅವರು ಸಣ್ಣದೊಂದು ಪಾತ್ರವನ್ನ ಮಾಡಿದ್ದಾರಂತೆ. ಈ ವಿಷ್ಯವನ್ನ ಚಿತ್ರದ ನಟ ಸುರೇಶ್ ಹೆಬ್ಳಿಕರ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು.

ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ಮಿಂಚಲಿದ್ದಾರೆ ಸಿ.ಎಂ ಸಿದ್ದರಾಮಯ್ಯ

ಸಾಲ ವಸೂಲಿ ಮಾಡುವ ವ್ಯಕ್ತಿ ಪಾತ್ರ

ರೈತರ 50 ಸಾವಿರ ರೂ.ವರೆಗಿನ ಕೃಷಿ ಸಾಲಮನ್ನಾ ಮಾಡಿರುವ ಸಿಎಂ ಸಿದ್ದರಾಮಯ್ಯ, 'ಎಲ್ಲಿಂದಲೋ ಬಂದವರು' ಚಿತ್ರದಲ್ಲಿ ರೈತರ ಸಾಲ ವಸೂಲಿ ಮಾಡುವ ವ್ಯಕ್ತಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರಂತೆ.

'ಪಂಟ' ಸಿನಿಮಾ ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಎಂಗೆ ಇದು ನೆನಪಿರಲಿಲ್ಲ

ಈ ಸಿನಿಮಾದಲ್ಲಿ ಅಭಿನಯಿಸುರುವುದು ಸ್ವತಃ ಸಿಎಂ ಸಿದ್ದರಾಮಯ್ಯ ಅವರಿಗೆ ನೆನಪಾಗಿಲ್ಲ. ತದ ನಂತರ ಸುರೇಶ್ ಹೆಬ್ಳಿಕರ್ ಅವರು ಘಟನೆಯನ್ನ ಹೇಳಿದ ನಂತರ ಮುಖ್ಯಮಂತ್ರಿ ಅವರು ಈ ಚಿತ್ರದ ಬಗ್ಗೆ ಮಾತನಾಡಿದರು. ''ಇದು ಲೋಕೇಶ್, ಸುರೇಶ್ ಹೆಬ್ಳಿಕರ್ ಅವರು ಅಭಿನಯದ ಚಿತ್ರ. ನಾನು ಆಕ್ಟ್ ಮಾಡಿಲ್ಲ. ಬಹುಶಃ ಅಲ್ಲೇಲ್ಲೋ ಸುಮ್ಮನೆ ನಿಂತಿರಬಹುದು ಅಷ್ಟೇ'' ಎಂದು ಸಿದ್ದರಾಮಯ್ಯ ಅವರು ಮೆಲುಕು ಹಾಕಿದರು.

ಸುರೇಶ್ ಹೆಬ್ಳಿಕರ್ ಹೇಳಿದ ಸಿಎಂ ಕಥೆ

''ಅದು 1978-79 ರಲ್ಲಿ ಸಮಯದಲ್ಲಿ ಮೈಸೂರು ಪಕ್ಕದಲ್ಲಿ ಕುಪ್ಪೆಗಾಲ ಎಂಬ ಹಳ್ಳಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ಚಿತ್ರದ ನಿರ್ಮಾಪಕರು ಮೋಹನ್ ಕೊಂಡಜ್ಜಿ ಅವರ ಸಿದ್ದರಾಮಯ್ಯ ಅವರನ್ನ ಕರೆದುಕೊಂಡು ಬಂದು, ಇವರಿಗೊಂದು ಪಾತ್ರ ಕೊಡಿ ಎಂದಿದ್ದರು. ನಂತರ ಸಿದ್ದರಾಮಯ್ಯ ಅವರನ್ನ ಸಾಲ ವಸೂಲಿ ಮಾಡುವ ವ್ಯಕ್ತಿ ಆಗಿ ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿದರು. ಒಂದೆರೆಡು ಡೈಲಾಗ್ ಇತ್ತು ಅಷ್ಟೇ. ಆದ್ರೆ, ಅವರು ಆಗ ತುಂಬಾ ಹ್ಯಾಂಡ್ ಸಮ್ ಆಗಿದ್ದರು ಬಹುಶಃ ಒಳ್ಳೆಯ ನಟನಾಗಬಹುದಿತ್ತೇನೋ'' ಎಂದು ಸುರೇಶ್ ಹೆಬ್ಳಿಕರ್ ಸಿಎಂ ಅವರ ಬಗ್ಗೆ ಮಾತನಾಡಿದರು.

ಸಿಎಂ ಅಕೌಂಟ್ ಗೆ ಬಿತ್ತು 4ನೇ ಸಿನಿಮಾ: ಯಾವಾಗ ನೋಡ್ತೀರಾ ಸಿದ್ದು ಸರ್?

English summary
Chief Minister of Karnataka Siddaramaiah Speaks About his First Film With Lankesh in Weekend With Ramesh 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada