For Quick Alerts
  ALLOW NOTIFICATIONS  
  For Daily Alerts

  ಭಾವ ಡಾ.ರಾಜ್ ನೆನೆದು ಕಣ್ಣೀರಿಟ್ಟ ಭಾಮೈದ ಚಿನ್ನೇಗೌಡ್ರು

  By Harshitha
  |

  ಅಕ್ಕನ (ಪಾರ್ವತಮ್ಮ ರಾಜ್ ಕುಮಾರ್) ಗಂಡ (ಭಾವ) ಡಾ.ರಾಜ್ ಕುಮಾರ್ ಕಂಡ್ರೆ ಚಿನ್ನೇಗೌಡ್ರಿಗೆ ಎಲ್ಲಿಲ್ಲದ ಗೌರವ, ಅಭಿಮಾನ. ಅಣ್ಣಾವ್ರಿಗೂ ಅಷ್ಟೇ, ಚಿನ್ನೇಗೌಡ್ರ ಮುದ್ದು ಮಕ್ಕಳಂದ್ರೆ (ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ) ಅಪಾರ ಪ್ರೀತಿ. ಅದು ಎಷ್ಟರಮಟ್ಟಿಗೆ ಅಂದ್ರೆ, ಆರೋಗ್ಯ ಸರಿ ಇಲ್ಲದೇ ಇದ್ದರೂ, 'ನಿನಗಾಗಿ' ಚಿತ್ರದ ಮುಹೂರ್ತಕ್ಕೆ ಡಾ.ರಾಜ್ ಕುಮಾರ್ ಆಗಮಿಸಿ, ವಿಜಯ್ ರಾಘವೇಂದ್ರ ರವರಿಗೆ ಆಶೀರ್ವಾದ ಮಾಡಿದ್ದರಂತೆ.

  ಈ ಸಂಗತಿಯನ್ನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹೇಳಿಕೊಂಡು ಚಿನ್ನೇಗೌಡ್ರು ಕೊಂಚ ಭಾವುಕರಾದರು.

  ಡಾ.ರಾಜ್ ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ಚಿನ್ನೇಗೌಡ್ರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದನ್ನ ಅವರ ಮಾತುಗಳಲ್ಲೇ ಓದಿರಿ....

  ವಿಜಯ್ ರಾಘವೇಂದ್ರ ಕಂಡ್ರೆ ಅಣ್ಣಾವ್ರಿಗೆ ಬಹಳ ಇಷ್ಟ

  ವಿಜಯ್ ರಾಘವೇಂದ್ರ ಕಂಡ್ರೆ ಅಣ್ಣಾವ್ರಿಗೆ ಬಹಳ ಇಷ್ಟ

  ''ಅಣ್ಣಾವ್ರಿಗೆ ವಿಜಯ್ ರಾಘವೇಂದ್ರ ಕಂಡೆ ಬಹಳ ಇಷ್ಟ. ಮನೆಯಲ್ಲಿ ಮಕ್ಕಳೆಲ್ಲ ಇರುವಾಗ ಇಬ್ಬರು 'ರಾಘು' ಇದ್ದರು ಎಂಬ ಕಾರಣಕ್ಕೆ ಇವನನ್ನ ಗುಗ್ಗು ಅಂತ ಕರೆಯೋರು'' - ಜಯಮ್ಮ, ವಿಜಯ್ ರಾಘವೇಂದ್ರ ತಾಯಿ [ನಟ ವಿಜಯ್ ರಾಘವೇಂದ್ರ ಮಾಡಿರುವ ಸಾಧನೆ ಏನು.?]

  'ನಿನಗಾಗಿ' ಮುಹೂರ್ತ ಸಂದರ್ಭ

  'ನಿನಗಾಗಿ' ಮುಹೂರ್ತ ಸಂದರ್ಭ

  ''ನಿನಗಾಗಿ' ಮುಹೂರ್ತ ಸಮಯದಲ್ಲಿ ನನ್ನ ಬಾವ (ಅಣ್ಣಾವ್ರ) ರವರನ್ನ ಕರೆಯಿಸಬೇಕು ಅಂತ ಬಹಳ ಆಸೆ ಇತ್ತು ನನಗೆ. ಆದ್ರೆ, ಅವರಿಗೆ ಸ್ವಲ್ಪ ಕಾಲು ನೋವು ಇತ್ತು. ನನ್ನ ಅಕ್ಕ (ಪಾರ್ವತಮ್ಮ ರಾಜ್ ಕುಮಾರ್) ಬರುತ್ತೇನೆ ಅಂತ ಹೇಳಿದ್ದರು. ಬಾವ ಬರಲ್ಲ ಎಂದು ಅಂದುಕೊಂಡಿದ್ದೆ. ಆದ್ರೆ, ಅವರ ಜೊತೆ ಬಾವ ಕೂಡ ಬಂದರು'' - ಚಿನ್ನೇಗೌಡ್ರು, ವಿಜಯ್ ರಾಘವೇಂದ್ರ ತಂದೆ [ಸಾಧಕರ ಸೀಟ್ ಮೇಲೆ ಕೂರಲು ವಿಜಯ್ ರಾಘವೇಂದ್ರ ಅರ್ಹರೇ.?]

  ಚಿನ್ನೇಗೌಡ್ರು

  ಚಿನ್ನೇಗೌಡ್ರು

  ''ಕಷ್ಟ ಆದರೂ ಬಾವ ಬಂದು ಕ್ಲಾಪ್ ಮಾಡಿ ರಾಘುಗೆ ಹರಸಿದರು. ಆ ದೃಶ್ಯವನ್ನ ನನ್ನಿಂದ ಯಾವತ್ತೂ ಮರೆಯಲು ಸಾಧ್ಯವಿಲ್ಲ'' ಎಂದು ಹೇಳುತ್ತಾ ಚಿನ್ನೇಗೌಡ್ರು ಭಾವುಕರಾದರು.

  ಡಾ.ರಾಜ್ ಕುಮಾರ್ ರವರ ಒಂದು ಫೋಟೋ ಕಥೆ

  ಡಾ.ರಾಜ್ ಕುಮಾರ್ ರವರ ಒಂದು ಫೋಟೋ ಕಥೆ

  ''ಒಂದು ಬಾರಿ ನಾನು ಚಿಕ್ಕಬಳ್ಳಾಪುರಕ್ಕೆ ಹೋಗಿದ್ದೆ. ಅಲ್ಲಿ ಒಂದು ಫೋಟೋ ಸ್ಟುಡಿಯೋ ಇತ್ತು. ಆ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ರವರದ್ದು ಒಂದು ಫೋಟೋ ಇತ್ತು. ಆ ಫೋಟೋ ನೋಡಿದ ತಕ್ಷಣ ನನಗೆ ಒಂಥರಾ ಆಯ್ತು'' - ಚಿನ್ನೇಗೌಡ್ರು, ವಿಜಯ್ ರಾಘವೇಂದ್ರ ತಂದೆ

  ಕನ್ನಡಕ್ಕೆ ಒಬ್ಬನೇ ತಾನೇ ರಾಜ್ ಕುಮಾರ್.!

  ಕನ್ನಡಕ್ಕೆ ಒಬ್ಬನೇ ತಾನೇ ರಾಜ್ ಕುಮಾರ್.!

  ''ತಕ್ಷಣ ಈ ಫೋಟೋ ಕೊಡಿ ನನಗೆ ಅಂತ ಆ ಸ್ಟುಡಿಯೋದವರನ್ನ ಕೇಳಿದೆ. ಯಾಕಂದ್ರೆ, ಆ ಫೋಟೋದಲ್ಲಿ ರಾಜ್ ಕುಮಾರ್ ತುಂಬಾ ಮುದ್ದಾಗಿ ಇದ್ದಾರೆ. ಅಷ್ಟು ಚೆನ್ನಾಗಿ ಅವರನ್ನ ಸೆರೆ ಹಿಡಿದಿದ್ದರು. ಆಗ ಅಂದುಕೊಂಡೆ, ಡಾ.ರಾಜ್ ಕುಮಾರ್ ರವರ ಜನ ಯಾಕೆ ಇಷ್ಟ ಪಡುತ್ತಾರೆ ಅಂದ್ರೆ ಅವರ ಮೊಗದಲ್ಲಿ ಇರುವ ಮಂದಹಾಸ ಹಾಗೂ ನಗು. ಡಾ.ರಾಜ್ ರವರ ಮುಖದಲ್ಲಿ ಇರುವ ಅಟ್ರ್ಯಾಕ್ಷನ್ ಯಾರಿಗಿದೆ.? ಕನ್ನಡಕ್ಕೆ ಒಬ್ಬನೇ ತಾನೆ ರಾಜಕುಮಾರ್.! ವಿಜಯ್ ರಾಘವೇಂದ್ರ ಮುಖ ನೋಡಿದರೂ ನನಗೆ ಹಾಗೇ ಅನಿಸುತ್ತೆ'' - ಚಿನ್ನೇಗೌಡ್ರು, ವಿಜಯ್ ರಾಘವೇಂದ್ರ ತಂದೆ

  English summary
  Kannada Actor Vijay Raghavendra's father Chinnegowda talks about Dr.Rajkumar in Weekend with Ramesh 3

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X