»   » ಜೀ ಕನ್ನಡದಲ್ಲಿ ಛೋಟಾ ಚಾಂಪಿಯನ್ ಸೀಸನ್ 2

ಜೀ ಕನ್ನಡದಲ್ಲಿ ಛೋಟಾ ಚಾಂಪಿಯನ್ ಸೀಸನ್ 2

Posted By:
Subscribe to Filmibeat Kannada

ಸೃಜನಶೀಲ ನಿರೂಪಕ ಸೃಜನ್ ಲೋಕೇಶ್ ನಿರೂಪಣೆಯಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಛೋಟಾ ಚಾಂಪಿಯನ್ ಮೊದಲ ಸೀಸನ್ ಭರ್ಜರಿ ಯಶಸ್ವಿಯಾಗಿದೆ. ಇದೀಗ ಸೀಸನ್ 2ವನ್ನು ಸಮರ್ಪಿಸುತ್ತಿದೆ ಜೀ ಕನ್ನಡ.

ಛೋಟಾ ಚಾಂಪಿಯನ್ ಮೊದಲ ಸೀಸನ್ ನಲ್ಲಿ ಮಗು ಜೊತೆಗೆ ತಂದೆತಾಯಿ ಆಟವಾಡುತ್ತಿದ್ದರು. ಎರಡು ಮೂರು ವರ್ಷಗಳ ವಯೋಮಾನದ ಮಕ್ಕಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು.

ಇದೀಗ ಸೀಸನ್ 2ರಲ್ಲಿ ತಂದೆ ತಾಯಿ ಹಾಗೂ ಇಡೀ ಪರಿವಾರದದೊಂದಿಗೆ (ಅಜ್ಜ ಅಜ್ಜಿ ಅಣ್ಣ ತಂಗಿ ಮುಂತಾದವರು) ಆಟವಾಡುವ ಮೂಲಕ ಹೊಸ ಫಾರ್ಮ್ಯಾಟ್ ಮೂಡಿಬರಲಿದೆ.

Chota Champion season 2 on Zee Kannada

ಈಗಾಗಲೆ ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಹಾಸನ, ಮೈಸೂರು ಮತ್ತು ಬೆಂಗಳೂರಿನಲ್ಲಿ ಆಡಿಷನ್ ಮುಗಿದಿದ್ದು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳು ಆಡಿಷನ್ ನಲ್ಲಿ ಪಾಲ್ಗೊಂಡಿದ್ದಾರೆ.

ನಾನಾ ರೀತಿ ಟ್ಯಾಲೆಂಟ್ ಇರುವ ಮಕ್ಕಳು ಈ ಬಾರಿಯ ಆಡಿಷನ್ ನಲ್ಲಿ ಸಿಕ್ಕಿರುವ ಕಾರಣ ಎಪಿಸೋಡ್ ಗಳು ಸಾಕಷ್ಟು ಮನರಂಜನೆಯಿಂದ ತುಂಬಿರುತ್ತವೆ. ಮಾರ್ಚ್ 15 ಶನಿವಾರದಿಂದ ಶುರುವಾಗುವ ಛೋಟಾ ಚಾಂಪಿಯನ್ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. (ಒನ್ಇಂಡಿನಾ ಕನ್ನಡ)

English summary
CHOTA CHAMPION is back with Season 2...!!! Dont miss the auditions happening all over Karnataka!! A children reality show on Zee Kannada Television Channel launch on 15th March at 9 pm on Satuday and Sunday.
Please Wait while comments are loading...