»   » ಇದೇ ಭಾನುವಾರ ಉದಯ ಟಿವಿಯಲ್ಲಿ ಮೊಟ್ಟ ಮೊದಲ ಬಾರಿಗೆ 'ಚೌಕ'

ಇದೇ ಭಾನುವಾರ ಉದಯ ಟಿವಿಯಲ್ಲಿ ಮೊಟ್ಟ ಮೊದಲ ಬಾರಿಗೆ 'ಚೌಕ'

Posted By:
Subscribe to Filmibeat Kannada

ಕಳೆದ ಐದು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ದ್ವಾರಕೀಶ್ ನಿರ್ಮಾಣದ 50ನೇ ಸಿನಿಮಾ 'ಚೌಕ'. ತರುಣ್ ಸುಧೀರ್ ನಿರ್ದೇಶನ ಮಾಡಿರುವ 'ಚೌಕ' ಚಿತ್ರ ಇದೇ ಭಾನುವಾರ (ಜುಲೈ 23) ಸಂಜೆ 6 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರ ಆಗಲಿದೆ.

1986ರಲ್ಲಿ ಬೆಂಗಳೂರು, 1995 ರಲ್ಲಿ ಮೈಸೂರು, 2000 ರಲ್ಲಿ ಮಂಗಳೂರು, 2007 ರಲ್ಲಿ ವಿಜಯಪುರದಲ್ಲಿ ನಡೆಯುವ ನಾಲ್ಕು ಪ್ರೇಮಿಗಳ ಸುತ್ತ ಹೆಣೆದಿರುವ ಕಥೆ 'ಚೌಕ'.


'Chowka' premiere in Udaya TV on July 23rd

ವಿಜಯ ರಾಘವೇಂದ್ರ, ಪ್ರೇಮ್, ದಿಗಂತ್ ಹಾಗೂ ಪ್ರಜ್ವಲ್ ದೇವರಾಜ್ 'ಚೌಕ' ಚಿತ್ರದ ನಾಲ್ವರು ನಾಯಕರು. 'ಚೌಕ' ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಶೀನಾಥ್ ಕಾಣಿಸಿಕೊಂಡಿದ್ದರೆ, ಕಾಮಿಡಿ ಕಚಗುಳಿ ಇಡುವ ಜವಾಬ್ದಾರಿ ಚಿಕ್ಕಣ್ಣ ರವರದ್ದು. ಇನ್ನೂ ದರ್ಶನ್ ಕೂಡ 'ಚೌಕ' ಚಿತ್ರದ ಸ್ಪೆಷಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.


'ಅಪ್ಪ... ಐ ಲವ್ ಯು ಪಾ...' ಹಾಗೂ 'ಅಲ್ಲಾಡ್ಸು... ಅಲ್ಲಾಡ್ಸು...' ಅಂತಹ ಗೀತೆಗಳಿಂದ ಖ್ಯಾತಿ ಪಡೆದಿದ್ದ 'ಚೌಕ' ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿತ್ತು.


'ಚೌಕ' ಚಿತ್ರವನ್ನ ಥಿಯೇಟರ್ ನಲ್ಲಿ ನೋಡಲು ಮಿಸ್ ಮಾಡಿಕೊಂಡಿದ್ದರೆ, ಈ ಭಾನುವಾರ ಮಾತ್ರ ತಪ್ಪದೇ ಟಿವಿ ಮುಂದೆ ಹಾಜರ್ ಆಗಿ...

English summary
Kannada Movie 'Chowka' premiere in Udaya TV on July 23rd at 6 PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada