twitter
    For Quick Alerts
    ALLOW NOTIFICATIONS  
    For Daily Alerts

    ತನ್ನ ನೆಚ್ಚಿನ ನಟಿ ಯಾರೆಂದು ಬಹಿರಂಗ ಪಡಿಸಿದ ಸಿಎಂ ಬಸವರಾಜ ಬೊಮ್ಮಾಯಿ

    |

    ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 'ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್' ಧಾರಾವಾಹಿಯಲ್ಲಿ ಈಗ ಅಂಬೇಡ್ಕರ್‌ ಜೀವನದ ಮತ್ತೊಂದು ಮಜುಲನ್ನು ತೋರಿಸಲು ಜೀ ವಾಹಿನಿ ಸಜ್ಜಾಗಿದೆ. ಇದುವರೆಗೂ ಧಾರಾವಾಹಿಯಲ್ಲಿ ಅಂಬೇಡ್ಕರ್‌ ಅವರ ಬಾಲ್ಯದ ಬಗ್ಗೆ ಪ್ರಸಾರವಾಗುತ್ತಿತ್ತು. ಇನ್ಮುಂದೆ 'ಮಹಾನಾಯಕ ಅಂಬೇಡ್ಕರ್‌' ಧಾರಾವಾಹಿಯಲ್ಲಿ ಯುವ ಅಂಬೇಡ್ಕರ್‌ ಕಾಣಿಸಿಕೊಳ್ಳಲಿದ್ದಾರೆ.

    ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್' ಧಾರಾವಾಹಿ ಪ್ರೇಕ್ಷಕರ ಗಮನ ಸೆಳೆದಿದೆ. ಇದುವರೆಗೂ ಪ್ರೇಕ್ಷಕರ ಮನಗೆದ್ದಿದ್ದ ಬಾಲಕ ಭೀಮ ಇನ್ನುಮುಂದೆ ದೊಡ್ಡವನಾಗಿ ವೀಕ್ಷಕರ ಮುಂದೆ ಬರ್ತಿದ್ದಾರೆ. ಯವ ಅಂಬೇಡ್ಕರ್ ಬದುಕಿನ ಕಥೆಯನ್ನು ತೆರೆದಿಡುವ ಈ ಧಾರಾವಾಹಿಯ ವಿಶೇಷ ಪ್ರೋಮೋವನ್ನು ಇತ್ತೀಚಿಗಷ್ಟೆ ಸಿ ಎಂ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು.

    ಜೀ ಕನ್ನಡದ ವಾಹಿನಿಯಲ್ಲಿ 15 ವರ್ಷದ ಸಂಭ್ರಮ ನಡೆಯುತ್ತಿದೆ. ಅದ್ದೂರಿ ವೇದಿಕೆಯಲ್ಲಿ 15 ವರ್ಷಗಳ ಸುಂದರ ಪಯಣವನ್ನು ಮೆಲುಕು ಹಾಕಲಾಗುತ್ತಿದೆ. ಇದೇ ವೇದಿಕೆಯಲ್ಲಿ ಸಿಎಂ ಬೊಮ್ಮಾಯಿ ಮಹಾನಾಯಕ ಫ್ರೋಮೋ ಬಿಡುಗಡೆ ಮಾಡಿದರು. ಈ ಸಮಯದಲ್ಲಿ ಬೊಮ್ಮಾಯಿ ಇಂಟ್ರಸ್ಟಿಂಗ್ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವೇದಿಕೆ ಮೇಲೆ ಮಕ್ಕಳು ಕೇಳಿದ ತರವೇವಾರಿ ಪ್ರಶ್ನೆಗಳಿಗೆ ಬೊಮ್ಮಾಯಿ ಸಂತಸದಿಂದ ಉತ್ತರ ನೀಡಿದ್ದಾರೆ. ಈ ಸಮಯದಲ್ಲಿ ತನ್ನ ಕಾಲದ ನೆಚ್ಚಿನ ನಟಿಯರು ಯಾರು ಎಂದು ಬಹಿರಂಗ ಪಡಿಸಿದ್ದಾರೆ. ಮಕ್ಕಳು ಕೇಳಿದ ಪ್ರಶ್ನೆಗಳು ಹೇಗಿತ್ತು, ಬೊಮ್ಮಾಯಿ ಉತ್ತರ ಏನಾಗಿತ್ತು? ಇಲ್ಲಿದೆ ವಿವರ..

    ಸಿಎಂ ನೆಚ್ಚಿನ ಅಡುಗೆ ಯಾವುದು?

    ಸಿಎಂ ನೆಚ್ಚಿನ ಅಡುಗೆ ಯಾವುದು?

    ವೇದಿಕೆ ಮೇಲೆ ಮಕ್ಕಳು ಬೊಮ್ಮಾಯಿ ಅವರಿಗೆ, "ಅಂಕಲ್ ನಿಮ್ಮ ಅಮ್ಮ ಮಾಡುವ ಯಾವ ಅಡುಗೆ ನಿಮಗೆ ತುಂಬಾ ಇಷ್ಟ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸಿಎಂ "ನಮ್ಮ ತಾಯಿ ಬಿಸಿಬಿಸಿ ಜೋಳದ ರೊಟ್ಟಿ ಮಾಡುತ್ತಿದ್ದರು. ಅದು ನನಗೆ ಬಹಳ ಇಷ್ಟ. ಅದರ ಮೇಲೆ ಸ್ವಲ್ಪ ತುಪ್ಪ ಹಾಕಿಕೊಂಡು ತಿನ್ನಲು ಶುರುಮಾಡಿದರೆ ಲೆಕ್ಕವೇ ಇರುವುದಿಲ್ಲ. ಆದರೆ ಈಗ ನಮ್ಮ ತಾಯಿ ಇಲ್ಲ. ಈಗ ಯಾರೇ ಬಿಸಿ ರೊಟ್ಟಿ ಮಾಡಿದರೂ ನಮ್ಮ ತಾಯಿಯೇ ಮಾಡಿದ್ದಾರೆ ಎಂದುಕೊಂಡು ತಿನ್ನುತ್ತೇನೆ." ಎಂದು ರೊಟ್ಟಿ ಬಗ್ಗೆ ವಿವರಿಸಿದು.

    ಆನ್ ಲೈನ್ ಕ್ಲಾಸ್ ಬಗ್ಗೆ ಮಕ್ಕಳ ಪ್ರಶ್ನೆ

    ಆನ್ ಲೈನ್ ಕ್ಲಾಸ್ ಬಗ್ಗೆ ಮಕ್ಕಳ ಪ್ರಶ್ನೆ

    ಮತ್ತೊಬ್ಬ ಪೋರ ಸಿಎಂ ಬಳಿ, "ಅಂಕಲ್ ನೀವು ಯಾವಾಗಲೂ ಬ್ಯುಸಿ ಇರ್ತೀರಿ ಅಲ್ವಾ? ಮೊಮ್ಮಕ್ಕಳಿಗ ಆನ್ಲೈನ್ ಕ್ಲಾಸ್ ಹೇಳಿಕೊಡುತ್ತೀರಾ?" ಎಂದು ಕೇಳಿದರು. ಇದಕ್ಕೆ ಸಿಎಂ "ನೋಡು ಮರಿ, ನನಗೆ ಮೊಮ್ಮಗಳು ಇಲ್ಲ. ಆದರೆ ನೀವೆಲ್ಲರೂ ನನ್ನ ಮೊಮ್ಮಕ್ಕಳಿದ್ದಂತೆ. ಹಾಗಾಗಿ ನೀವು ಆನ್ ಲೈನ್ ಬಂದಾಗ, ನಾನು ನಿಮಗೆ ಸಿಗುತ್ತೇನೆ. ನಿಮ್ಮನ್ನೆಲ್ಲ ನೋಡಿದ ಮೇಲೆ ನನಗೂ ಮೊಮ್ಮಕ್ಕಳು ಬೇಕು ಅನಿಸ್ತಾ ಇದೆ. ಇದನ್ನು ನನ್ನ ಮಗನಿಗೆ ಮನವರಿಕೆ ಮಾಡಿಸುತ್ತೇನೆ" ಎಂದಿದರು.

    ಸಿನಿಮಾದ ಸಿಎಂ ಬಗ್ಗೆ ಬೊಮ್ಮಾಯಿ ಹೇಳಿದ್ದೇನು?

    ಸಿನಿಮಾದ ಸಿಎಂ ಬಗ್ಗೆ ಬೊಮ್ಮಾಯಿ ಹೇಳಿದ್ದೇನು?

    ಮತ್ತೊಂದು ಮಗುವಿನಿಂದ "ನಾವು ತುಂಬ ಸಿನಿಮಾಗಳಲ್ಲಿ ನೋಡಿರುವ ಸಿಎಂ ಬೇರೆ ಬೇರೆ ಥರ ಇದ್ದರು. ನೀವೇನು ಇಷ್ಟು ಸಿಂಪಲ್ ಆಗಿದ್ದೀರಲ್ಲಾ?" ಎನ್ನುವ ಪ್ರಶ್ನೆ ಸಿಎಂಗೆ ತೂರಿಬಂತು. ಇದಕ್ಕೆ ಉತ್ತರಿಸಿದ ಸಿಎಂ "ಅದು ಸಿನಿಮಾ ಕಣೋ. ಸಿನಿಮಾದಲ್ಲಿ ಆರ್ಭಟ ಇರಲೇಬೇಕು. ಹಾಗಿದ್ದಾಗಲೇ ಸಿನಿಮಾ ನೋಡೋಕೆ ಜನ ಬರೋದು. ಆದರೆ ನಿಜ ಜೀವನದಲ್ಲಿ ನಾವು ಆರ್ಭಟ ಮಾಡಿದರೆ ಜನರು ಕೇಳಲ್ಲ. ಹಾಗಾಗಿ ನಾವು ಇಲ್ಲಿ ಸಿಂಪಲ್ ಆಗಿ ಇರಲೇಬೇಕು" ಎಂದರು.

    ಬೊಮ್ಮಾಯಿ ನೆಚ್ಚಿನ ನಟಿಯರಿವರು

    ಬೊಮ್ಮಾಯಿ ನೆಚ್ಚಿನ ನಟಿಯರಿವರು

    ಬಳಿಕ ಸಿಎಂಗೆ ನೆಚ್ಚಿನ ನಾಯಕಿಯರ ಬಗ್ಗೆ ಪ್ರಶ್ನೆ ತೂರಿ ಬಂತು. "ನಿಮ್ಮ ಫೇವರಿಟ್ ಹೀರೋಯಿನ್ ಯಾರು?" ಎಂದು ಪುಟ್ಟ ಹುಡುಗ ಕೇಳಿದ ಪ್ರಶ್ನೆಗೆ ಸಿಎಂ ಬೊಮ್ಮಾಯಿ, "ಇದು ಬಹಳ ಕಷ್ಟದ ಪ್ರಶ್ನೆ. ಯಾಕೆಂದರೆ ಬಹಳ ಜನ ಇದ್ದಾರೆ. ಒಬ್ಬರ ಹೆಸರು ಹೇಳಿದರೆ ಇನ್ನೊಬ್ಬರಿಗೆ ಬೇಜಾರಾಗುತ್ತದೆ. ನನ್ನ ಆಲ್ಟೈಮ್ ಫೇವರಿಟ್ ಹೀರೋಯಿನ್ ಮಧುಬಾಲ. ಕನ್ನಡದಲ್ಲಿ ಹೇಳುವುದಾದರೆ, ನಮ್ಮ ಕಾಲದ ಟಾಪ್ 3 ಹೀರೋಯಿನ್ ಗಳಾದ ಕಲ್ಪನಾ, ಜಯಂತಿ ಮತ್ತು ಭಾರತಿ ನನ್ನ ಫೇವರಿಟ್" ಎಂದಿದ್ದಾರೆ.

    ನೆಚ್ಚಿನ ಹೀರೋ ಮತ್ತು ಹಾಡಿನ ಬಗ್ಗೆ ಬೊಮ್ಮಾಯಿ ಹೇಳಿದ್ದನು?

    ನೆಚ್ಚಿನ ಹೀರೋ ಮತ್ತು ಹಾಡಿನ ಬಗ್ಗೆ ಬೊಮ್ಮಾಯಿ ಹೇಳಿದ್ದನು?

    ನೆಚ್ಚಿನ ನಟನ ಬಗ್ಗೆ ಬಹಿರಂಗ ಪಡಿಸಿದ ಸಿಎಂ "ಡಾ. ರಾಜ್ ಕುಮಾರ್ ಅವರು ನನ್ನ ಆಲ್ಟೈಮ್ ಫೇವರಿಟ್ ಹೀರೋ" ಎಂದು ಹೇಳಿದರು. "ನೀವು ಯಾವಾಗಲೂ ಮೆಲುಕು ಹಾಕುವ ನಿಮ್ಮ ಫೇವರಿಟ್ ಹಾಡು ಯಾವುದು?" ಎನ್ನುವ ಪ್ರಶ್ನೆಗೆ ಸಿಎಂ, 'ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..' ಇದು ನನ್ನ ಫೇವರಿಟ್ ಹಾಡು. ಇನ್ನೊಂದು ಹಾಡು ಹೇಳಲಾ ಎನ್ನುತ್ತಾ, 'ಬಾನಿಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆ ಇದೆ..' ಈ ಹಾಡು ಕೂಡ ತುಂಬಾ ಇಷ್ಟ" ಎಂದು ಹೇಳಿದರು.

    English summary
    CM Basavaraj Bommai speaks about his favorite heroes. He says his favorite heroes Bharati, Arati and Kalpana.
    Saturday, August 21, 2021, 15:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X