»   » ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಗ್ಗೆ ಸಿದ್ದರಾಮಯ್ಯ ಏನಂದರು.?

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಗ್ಗೆ ಸಿದ್ದರಾಮಯ್ಯ ಏನಂದರು.?

Posted By:
Subscribe to Filmibeat Kannada

ವರ್ಷಗಳ ಹಿಂದಿನ ರಾಜಕೀಯ ವೈರತ್ವ ಏನೇ ಇರಬಹುದು... ತಮ್ಮ ನಿಲುವುಗಳ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿರಬಹುದು... ರಾಜಕೀಯವಾಗಿ ಒಬ್ಬರ ವಿರುದ್ಧ ಇನ್ನೊಬ್ಬರು ಸೆಡ್ಡು ಹೊಡೆದಿರಬಹುದು... ಏನೇ ಆಗಿದ್ದರೂ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಗೌರವ, ಹೆಮ್ಮೆ ಇದೆ.

ಈ ಸಂಗತಿ ಬಯಲಾಗಿದ್ದು, ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ.!

ಕಾರ್ ಮೇಲೆ ಕಾಗೆ ಕೂತರೂ ಸಿದ್ದರಾಮಯ್ಯ 'ಸಿ.ಎಂ' ಕುರ್ಚಿಗೆ ಕುತ್ತು ಬರಲೇ ಇಲ್ಲ.!

CM Siddaramaiah spoke about HD Devegowda in 'Weekend With Ramesh 3'

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಧಕರ ಸೀಟ್ ಮೇಲೆ ಕುಳಿತ ಸಿ.ಎಂ. ಸಿದ್ದರಾಮಯ್ಯ ನವರಿಗೆ ರಮೇಶ್ ಅರವಿಂದ್, ''ನೀವು ಗೌರವಿಸುವಂತಹ ಎದುರಾಳಿ ಯಾರು.?'' ಎಂದು ಪ್ರಶ್ನೆ ಕೇಳಿದರು.

ಅದಕ್ಕೆ ಹಿಂದು ಮುಂದು ಯೋಚನೆ ಮಾಡದ ಸಿದ್ದರಾಮಯ್ಯ,''ಎಚ್.ಡಿ.ದೇವೇಗೌಡರು'' ಎಂದು ಉತ್ತರ ಕೊಟ್ಟು, ''ಮೊದಲಿನಿಂದಲೂ ನಾನು ದೇವೇಗೌಡ ರವರನ್ನು ಗೌರವಿಸುತ್ತೇನೆ'' ಎಂದರು.

'ವೀಕೆಂಡ್..' ಕಾರ್ಯಕ್ರಮಕ್ಕೆ ಸಿ.ಎಂ ಸಿದ್ಧರಾಮಯ್ಯ ಪತ್ನಿ ಬರ್ಲಿಲ್ಲ.! ಯಾಕೆ.?

''ದೇವೇಗೌಡರಿಗೆ ಬೇರೆ ಯಾವುದೇ ಅಭ್ಯಾಸ ಇಲ್ಲ. ಇಪ್ಪತ್ನಾಲ್ಕು ಗಂಟೆ ರಾಜಕೀಯ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅವರ ಮಗ ರೇವಣ್ಣ ಕೂಡ ಅದೇ ರೀತಿ ಮಾಡುತ್ತಿದ್ದಾರೆ'' ಎಂದರು ಸಿ.ಎಂ. ಸಿದ್ದರಾಮಯ್ಯ.

English summary
Karnataka Chief Minister Siddaramaiah spoke about HD Devegowda in Zee Kannada Channel's popular show 'Weekend With Ramesh 3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada