»   » ಸಿದ್ದರಾಮಯ್ಯ ಅಂದುಕೊಂಡಿದ್ದೇ ಒಂದು, ನಡೆದದ್ದು ಮತ್ತೊಂದು.!

ಸಿದ್ದರಾಮಯ್ಯ ಅಂದುಕೊಂಡಿದ್ದೇ ಒಂದು, ನಡೆದದ್ದು ಮತ್ತೊಂದು.!

Posted By:
Subscribe to Filmibeat Kannada

ಸಿ.ಎಂ ಸಿದ್ದರಾಮಯ್ಯ ಮಾಡಿದ್ದ ಪ್ಲಾನ್ ಪ್ರಕಾರ, ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿ ಆಗಿ ರಾಕೇಶ್ ಸಿದ್ದರಾಮಯ್ಯ ಕಣಕ್ಕೆ ಇಳಿಯಬೇಕಿತ್ತು. ಪುತ್ರ ರಾಕೇಶ್ ರವರನ್ನ ಎಂ.ಎಲ್.ಎ ಮಾಡಿ, ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯಲು ಸಿದ್ದರಾಮಯ್ಯ ಯೋಚಿಸಿದ್ದರು. ಆದ್ರೆ, ವಿಧಿ ಲಿಖಿತ ಬೇರೆಯದ್ದೇ ಆಗಿತ್ತು. ವಿದೇಶಕ್ಕೆ ಹೋಗಿದ್ದ ರಾಕೇಶ್ ಸಿದ್ದರಾಮಯ್ಯ ಅಕಾಲಿಕ ಮರಣ ಹೊಂದಿದರು.

ರಾಜಕಾರಣದ ಕನಸು ಕಾಣುತ್ತಿದ್ದ ಮಗನಿಗೆ ಭದ್ರ ಬುನಾದಿ ಹಾಕಿಕೊಡಲು ಸಕಲ ತಯಾರಿ ಮಾಡಿಕೊಂಡಿದ್ದ ಸಿದ್ದರಾಮಯ್ಯ ಅಂದುಕೊಂಡಿದ್ದೇ ಒಂದು. ಆದರೆ, ವಿಧಿ... ನಡೆದದ್ದೇ ಮತ್ತೊಂದು.!

ಮಗನ ಸಾವು ಹಾಗೂ ಭವಿಷ್ಯದ ರಾಜಕಾರಣ ಕುರಿತು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಿಷ್ಟು....

ಕಣ್ಣೀರು ಹಾಕಿದ್ದು...

''ಜೀವನದಲ್ಲಿ ನಾನು ಇಲ್ಲಿಯವರೆಗೂ ಎರಡು ಬಾರಿ ಕಣ್ಣೀರು ಹಾಕಿರಬಹುದು. ಒಂದು ನನ್ನ ತಾಯಿ ತೀರಿಕೊಂಡಾಗ, ಇನ್ನೊಂದು ನನ್ನ ಮಗ ತೀರಿಕೊಂಡಾಗ'' ಎಂದು ರಾಕೇಶ್ ಸಾವಿನ ಕುರಿತು ಸಿದ್ದರಾಮಯ್ಯ ಭಾವುಕರಾದರು.

'ವೀಕೆಂಡ್..' ಕಾರ್ಯಕ್ರಮಕ್ಕೆ ಸಿ.ಎಂ ಸಿದ್ಧರಾಮಯ್ಯ ಪತ್ನಿ ಬರ್ಲಿಲ್ಲ.!ಯಾಕೆ.?

ಬರುವ ಚುನಾವಣೆಯಲ್ಲಿ...

''ಮುಂಬರುವ ಚುನಾವಣೆಯಲ್ಲಿ ರಾಕೇಶ್ ನ ಎಲೆಕ್ಷನ್ ಗೆ ನಿಲ್ಲಿಸಬೇಕು ಅಂತಿದ್ದೆ'' - ಸಿದ್ದರಾಮಯ್ಯ, ಮುಖ್ಯಮಂತ್ರಿ

ಕಾರ್ ಮೇಲೆ ಕಾಗೆ ಕೂತರೂ ಸಿದ್ದರಾಮಯ್ಯ 'ಸಿ.ಎಂ' ಕುರ್ಚಿಗೆ ಕುತ್ತು ಬರಲೇ ಇಲ್ಲ.!

ನಿವೃತ್ತಿ ಬಗ್ಗೆ ಯೋಚನೆ...

''ಇನ್ಮುಂದೆ ಎಲೆಕ್ಷನ್ ಗೆ ನಿಲ್ಲಬಾರದು ಎಂದು ಕಳೆದ ಚುನಾವಣೆಯಲ್ಲಿಯೇ ನಾನು ನಿರ್ಧಾರ ಮಾಡಿದ್ದೆ. ಚುನಾವಣೆ ರಾಜಕೀಯ ಸಾಕು ಅಂತ ನನಗೆ ಅನಿಸಿತ್ತು. ನನಗೀಗ 69 ವರ್ಷ. ಮುಂದಿನ ಚುನಾವಣೆ ಬರುವ ಹೊತ್ತಿಗೆ 70 ವರ್ಷ ಆಗುತ್ತೆ. ಹೀಗಾಗಿ ನಿವೃತ್ತಿ ಆಗಬೇಕು. ರಾಕೇಶ್ ನ ನನ್ನ ಕ್ಷೇತ್ರದಲ್ಲಿ ಅಭ್ಯರ್ಥಿ ಆಗಿ ನಿಲ್ಲಿಸಬೇಕು ಅಂತ ಅಂದುಕೊಂಡಿದ್ದೆ. ಆದ್ರೆ, ಅಕಾಲಿಕ ಮರಣಕ್ಕೆ ರಾಕೇಶ್ ತುತ್ತಾದ'' - ಸಿದ್ದರಾಮಯ್ಯ, ಮುಖ್ಯಮಂತ್ರಿ

ಚುನಾವಣಾ ಕಣಕ್ಕೆ ಯತೀಂದ್ರ.?

''ಯತೀಂದ್ರಗೆ ರಾಜಕೀಯ ಅಷ್ಟೊಂದು ಗೊತ್ತಿಲ್ಲ. ಜನರ ಪ್ರೀತಿ ಗಳಿಸಿದರೆ ಮಾತ್ರ ಗೆಲ್ಲಲು ಸಾಧ್ಯ. ಕ್ಷೇತ್ರದಲ್ಲಿ ಇರುವ ಜನರು ಬಯಸಿದರೆ, ಚುನಾವಣೆಗೆ ನಿಲ್ಲಬೇಕು. ಈಗೀಗ ಯತೀಂದ್ರ ರಾಜಕೀಯದಲ್ಲಿ ನನಗೆ ಸಾಥ್ ನೀಡುತ್ತಿದ್ದಾನೆ'' ಎಂದು ಮಾರ್ಮಿಕವಾಗಿ ನುಡಿದರು ಸಿದ್ದರಾಮಯ್ಯ.

English summary
Karnataka Chief Minister Siddaramaiah spoke about his son Rakesh in Zee Kannada Channel's popular show 'Weekend With Ramesh 3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada