For Quick Alerts
  ALLOW NOTIFICATIONS  
  For Daily Alerts

  ಅಂತೆ-ಕಂತೆ ಅಂತೇನಿಲ್ಲ.. ಸಾಧಕರ ಸೀಟ್ ಮೇಲೆ ಸಿ.ಎಂ ಸಿದ್ದರಾಮಯ್ಯ ಕೂರೋದು ಪಕ್ಕಾ.!

  By Harshitha
  |

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಅಗುತ್ತಿರುವ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂಬ ಸುದ್ದಿ ನಿನ್ನೆ (ಜೂನ್ 17) ಇದಕ್ಕಿದ್ದಂತೆ ಕಾಡ್ಗಿಚ್ಚಿನಂತೆ ಹಬ್ಬಿತು.

  ರಾಜಕೀಯ ಚಟುವಟಿಕೆ ಹಾಗೂ ವಿಧಾನಮಂಡಲ ಅಧಿವೇಶನದಲ್ಲಿ ತುಂಬಾ ಬಿಜಿಯಾಗಿರುವ ಸಿ.ಎಂ ಸಿದ್ದರಾಮಯ್ಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸುವುದು ಉಂಟೇ.? ಅಷ್ಟಕ್ಕೂ, ಇದು ಕೇವಲ ಅಂತೆ-ಕಂತೆ ಅಷ್ಟೆ ಎಂದು ಕೆಲವರು ಮೂಗು ಮುರಿದಿರಬಹುದು. ಆದ್ರೆ, ವಾಸ್ತವ ಅದಲ್ಲ.!

  ಬಿಗ್ ಬ್ರೇಕಿಂಗ್: 'ವೀಕೆಂಡ್' ಸಾಧಕರ ಸೀಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುವುದು ಖಚಿತ. ಮುಂದೆ ಓದಿರಿ....

  ಖಚಿತ ಪಡಿಸಿದ ಜೀ ಕನ್ನಡ ಬಿಸಿನೆಸ್ ಹೆಡ್

  ಖಚಿತ ಪಡಿಸಿದ ಜೀ ಕನ್ನಡ ಬಿಸಿನೆಸ್ ಹೆಡ್

  ''ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ಮೇಲೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂರುವುದು ಖಚಿತ'' ಎಂದು ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದ್ದಾರೆ.

  ಅಧಿವೇಶನ ಮುಗಿದ ಬಳಿಕ ಚಿತ್ರೀಕರಣ

  ಅಧಿವೇಶನ ಮುಗಿದ ಬಳಿಕ ಚಿತ್ರೀಕರಣ

  ವಿಧಾನಮಂಡಲ ಅಧಿವೇಶನ ಜೂನ್ 21ರ ವರೆಗೂ ನಡೆಯಲಿದೆ. ಅದು ಮುಗಿದ ಬಳಿಕ, ಅಂದ್ರೆ ಜೂನ್ 22 ರಂದು ಬೆಂಗಳೂರಿನ ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ಸಿ.ಎಂ ಸಿದ್ದರಾಮಯ್ಯ ಭಾಗವಹಿಸುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಂಚಿಕೆಯ ಚಿತ್ರೀಕರಣ ನಡೆಯಲಿದೆ ಎಂದು ರಾಘವೇಂದ್ರ ಹುಣಸೂರು ಹೇಳಿದರು.

  ಕಾರ್ಯಕ್ರಮ ಪ್ರಸಾರ ಯಾವಾಗ.?

  ಕಾರ್ಯಕ್ರಮ ಪ್ರಸಾರ ಯಾವಾಗ.?

  ಬರುವ ಶನಿವಾರ ಹಾಗೂ ಭಾನುವಾರ... ಅಂದ್ರೆ ಜೂನ್ 24 ಹಾಗೂ 25 ರಂದು ರಾತ್ರಿ 9 ಗಂಟೆಗೆ ಸಿ.ಎಂ ಸಿದ್ದರಾಮಯ್ಯ ಭಾಗವಹಿಸುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಂಚಿಕೆ ಪ್ರಸಾರ ಆಗಲಿದೆ.

  ಯಾರೆಲ್ಲ ಪಾಲ್ಗೊಳ್ಳುತ್ತಾರೆ.?

  ಯಾರೆಲ್ಲ ಪಾಲ್ಗೊಳ್ಳುತ್ತಾರೆ.?

  ಸಿದ್ದರಾಮಯ್ಯ ರವರ 'ವೀಕೆಂಡ್ ವಿತ್ ರಮೇಶ್' ಸಂಚಿಕೆಯಲ್ಲಿ ಕುಟುಂಬಸ್ಥರು, ಸ್ನೇಹಿತರು, ರಾಜಕೀಯ ಮಿತ್ರರು ಪಾಲ್ಗೊಳ್ಳುವ ಸಾಧ್ಯತೆ ಇದೆ.

  English summary
  Zee Kannada Channel's Business Head Raghavendra Hunsur confirmed that Cheif Minister Siddaramaiah will take part in 'Weekend With Ramesh 3'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X