»   » 'ವೀಕೆಂಡ್ ವಿತ್ ರಮೇಶ್' ಬಳಿಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದೇನು?

'ವೀಕೆಂಡ್ ವಿತ್ ರಮೇಶ್' ಬಳಿಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದೇನು?

Posted By:
Subscribe to Filmibeat Kannada

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ತಮ್ಮ ಜೀವನದ ಹಾದಿಯನ್ನ ನಾಡಿನ ಜನತೆಯ ಮುಂದೆ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಸಿದ್ದರಾಮಯ್ಯ ಅವರ ಎಪಿಸೋಡ್ ಚಿತ್ರೀಕರಣವಾಗಿದ್ದು, ಈಗ ಪ್ರೋಮೋ ಕೂಡ ಬಿಡುಗಡೆಯಾಗಿದೆ.

ಬ್ರೇಕಿಂಗ್ ನ್ಯೂಸ್: ಸಾಧಕರ ಸೀಟ್ ಮೇಲೆ ಕುಳಿತ ಮುಖ್ಯಮಂತ್ರಿ ಸಿದ್ದರಾಮಯ್ಯ

ವೀಕೆಂಡ್ ಸಾಧಕರ ಕುರ್ಚಿಯಲ್ಲಿ ಕೂತು ಮಾತನಾಡಿದ ಸಿದ್ದರಾಮಯ್ಯ ಅವರು, ತಾವು ಸಾಗಿ ಬಂದ ರಾಜಕೀಯ ಹಾದಿ, ತಮ್ಮ ಬಾಲ್ಯ ಮತ್ತು ಶಾಲಾ ಕಾಲೇಜ್ ದಿನಗಳನ್ನು ನೆನೆಪಿಸಿಕೊಂಡರು. ಗೆಳಯರ ಜೊತೆ ಕುಣಿಯುತ್ತಿದ್ದ ಆ ದಿನಗಳನ್ನ ಮೆಲುಕು ಹಾಕಿದರು. ಪುತ್ರ ರಾಕೇಶ್ ಅವರ ಅಕಾಲಿಕ ನಿಧನವನ್ನ ನೆನೆದು ಭಾವುಕರಾದರು ಎಂದು ಜೀ-ಕನ್ನಡ ಮೂಲಗಳು ತಿಳಿಸಿವೆ.

Cm Siddaramaiah Tweet After Weekend With Ramesh

ಇನ್ನು ಸಿದ್ದರಾಮಯ್ಯ ಅವರ ಎಪಿಸೋಡ್ ಚಿತ್ರೀಕರಣದ ನಂತರ ಟ್ವೀಟ್ ಮಾಡಿರುವ ಸಿಎಂ ''ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ನನ್ನ ನೆನಪನ್ನು ಹಸಿರಾಗಿಸಿತು. ಸಾಗಿ ಬಂದ ಹಾದಿಯನ್ನು ಮರಳಿ ನೋಡುವ ಅವಕಾಶವಾಯಿತು. ಧನ್ಯವಾದ ಜೀ ಕನ್ನಡ ಹಾಗೂ @Ramesh_aravind'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಂತೆ-ಕಂತೆ ಅಂತೇನಿಲ್ಲ.. ಸಾಧಕರ ಸೀಟ್ ಮೇಲೆ ಸಿ.ಎಂ ಸಿದ್ದರಾಮಯ್ಯ ಕೂರೋದು ಪಕ್ಕಾ.!

ಅಂದ್ಹಾಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಇದೇ ಶನಿವಾರ (ಜೂನ್ 24) ಮತ್ತು ಭಾನುವಾರ (ಜೂನ್ 25) ಎರಡು ದಿನಗಳ ಕಾಲ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪ್ರೋಮೋ ಇಲ್ಲಿದೆ ನೋಡಿ....

English summary
Chief Minister Siddaramaiah has taken his twitter account to Say Thanks For Weekend With Ramesh

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada