»   » ಕಲರ್ಸ್ ಕನ್ನಡ 'ಸಿನಿಮಾ ಗೌರವ' ದಲ್ಲಿ ತಾರೆಯರ ಸಂಗಮ

ಕಲರ್ಸ್ ಕನ್ನಡ 'ಸಿನಿಮಾ ಗೌರವ' ದಲ್ಲಿ ತಾರೆಯರ ಸಂಗಮ

Posted By:
Subscribe to Filmibeat Kannada

ಕಲರ್ಸ್ ಕನ್ನಡ ಮತ್ತು ಇನ್ನೋವೇಟಿವ್ ಫಿಲ್ಮ್ ಸಿಟಿ ಜಂಟಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಅದಕ್ಕೆ ಉತ್ತಮ ಉದಾಹರಣೆ ಬಿಗ್ ಬಾಸ್ ಬಾಸ್ ರಿಯಾಲಿಟಿ ಶೋ .ಈ ಪಟ್ಟಿಗೆ ಹೊಸ ಸೇರ್ಪಡೆ ಸಿನಿಮಾ ಗೌರವ ಕಳೆದ ಹತ್ತು ವರ್ಷಗಳಿಂದ ಸ್ಯಾಂಡಲ್ವುಡ್ ನಲ್ಲಿ ಅದ್ಬುತವಾದ ಸಾಧನೆ ತೋರಿದ ತಂತ್ರಜ್ಞರು ಹಾಗೂ ಕಲಾವಿದರುಗಳನ್ನು ಗೌರವಿಸುವ ಕಾರ್ಯಕ್ರಮ.

ಸಿನಿಮಾ ಗೌರವ ಪ್ರಶಸ್ತಿಯನ್ನು ಪ್ರಮುಖವಾಗಿ ಎರಡು ವಿಭಾಗಗಳಾಗಿ ಮಾಡಿ ಗೌರವಾನ್ವಿತರಿಗೆ ಪ್ರಶಸ್ತಿ ನೀಡಲಾಗಿದೆ. ಮೊದಲನೆಯದಾಗಿ ಕನ್ನಡ ಸಿನಿಮಾ ರಂಗದಲ್ಲಿ ವೈಯಕ್ತಿಕ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ಮತ್ತೊಂದು ಭಾಗದಲ್ಲಿ ಸ್ಯಾಂಡಲ್ ನಲ್ಲಿ ಕಳೆದ ದಶಕಗಳಿಂದ ಜೀವಮಾನ ಸಾಧನೆಗೈದ ಹತ್ತು ಅಪರೂಪದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ಅಂತು 'ಮಾಸ್ಟರ್ ಡ್ಯಾನ್ಸರ್' ವೇದಿಕೆ ಏರಿದ ಡ್ಯಾನ್ಸ್ ರಾಜ

ಸಿನಿಮಾ ಗೌರವ ಕಾರ್ಯಕ್ರಮದಲ್ಲಿ ಕನ್ನಡ ಸಿನಿಮಾರಂಗದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿ ಸಂತೋಷವನ್ನ ಒಟ್ಟಿಗೆ ಸಂಭ್ರಮಿಸಿದರು. ಸಿನಿಮಾ ಗೌರವ ಕಾರ್ಯಕ್ರ ಹೇಗೆ ನಡೆಯಿತು. ಯಾರೆಲ್ಲಾ ಬಾಗಿ ಆಗಿದ್ದರು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ತಾರೆಗಳಿಗೆ ಗೌರವ ಸಮರ್ಪಣೆ

ಕಲಾವಿದರಿಗೆ ಗೌರವ ಸಮರ್ಪಣೆ ಮಾಡುವ ನಿಟ್ಟಿನಲ್ಲಿ ನಟ ವಿಜಯ ರಾಘವೇಂದ್ರ ಅನಂತ್ ನಾಗ್ ಅವರ ಹಾಡಿಗೆ ಹೆಜ್ಜೆ ಹಾಕಿದರು. ನಟಿ ನಭಾ ನಟೇಶ್ ಮಾಲಾಶ್ರೀ ಅವರಿಗೆ ತಮ್ಮ ನೃತ್ಯದ ಮೂಲಕ ಅಭಿನಂದನೆ ಸಲ್ಲಿಸಿರು.

ಭಾರತಿ ವಿಷ್ಣುವರ್ಧನ್ ಆದ ಶರ್ಮಿಳಾ

ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಅಂಬರೀಶ್ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು, ಇನ್ನು ನಟಿ ಶರ್ಮಿಲಾ ಮಾಂಡ್ರೆ ಭಾರತಿ ವಿಷ್ಣುವರ್ಧನ್ ಅವರ ಹಾಡಿಗೆ ನೃತ್ಯ ಮಾಡಿದರು.

ವಿಜಯ ಪ್ರಕಾಶ್ ಅವರಿಂದ ನಮನ

ಸಂಗೀತ ಲೋಕದ ದಿಗ್ಗಜ ನಾದಬ್ರಹ್ಮ ಹಂಸಲೇಖ ಅವರು ಸಂಯೋಜಿಸಿರುವ ಹಲವು ಹಾಡುಗಳನ್ನು ವಿಜಯ್ ಪ್ರಕಾಶ್ ಹಾಡಿ ಸಂಗೀತ ಮಾಂತ್ರಿಕನಿಗೆ ತಮ್ಮ ಗೌರವ ಸಲ್ಲಿಸಿದರು

ಚಿತ್ರರಂಗದ ಹಲವು ಗೌರವಾನ್ವಿತರು

ರೆಬೆಲ್ ಸ್ಟಾರ್ ಅಂಬರೀಶ್, ಭಾರತಿ ವಿಷ್ಣುವರ್ಧನ್, ಹಿರಿಯ ನಟ ಅನಂತ್ ನಾಗ್ ಹಾಗೂ ಆಕ್ಷನ್ ಕ್ವೀನ್ ಮಾಲಾಶ್ರೀ ಅವರಿಗೆ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ತನ್ನದೇ ಹಾಡಿಗೆ ನೃತ್ಯ ಮಾಡಿದ ಶಿವರಾಜ್ ಕುಮಾರ್

ಸಿನಿಮಾ ಗೌರವ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಶಿವರಾಜ್ ಕುಮಾರ್ ತಮ್ಮದೇ ಸಿನಿಮಾ ಟಗರು ಚಿತ್ರದ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ರು .ಸಹ ನೃತ್ಯಗಾರರೊಂದಿಗೆ ಶಿವರಾಜ್ ಕುಮಾರ್ ವೇದಿಕೆ ಮೇಲೆ ಕುಣಿದು ವೀಕ್ಷಕರನ್ನು ರಂಜಿಸಿದರು.

ವೇದಿಕೆ ಮೇಲೆ ಒಂದಾದ ದಿಗಂತ್ - ಐಂದ್ರಿತಾ

ಶಿವರಾಜ್ ಕುಮಾರ್ ಮಾತ್ರವಲ್ಲದೆ ಸ್ಯಾಂಡಲ್ ವುಡ್ ನ ಖ್ಯಾತ ಜೋಡಿಯಾದ ದಿಗಂತ್ ಮತ್ತು ಐಂದ್ರಿತಾ ನೃತ್ಯ ಕೂಡ ಸಿನಿಮಾ ಗೌರವ ಕಾರ್ಯಕ್ರಮದಲ್ಲಿ ನೋಡಬಹುದು .ನಿಜ ಜೀವನದಲ್ಲಿ ಜೋಡಿಯಾಗಲಿರುವ ದಿಗಂತ್ ಮತ್ತು ಐಂದ್ರಿತಾ ವೇದಿಕೆ ಮೇಲೆ ಜೋಡಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

ನಿವೇದಿತಾ ಗೌಡ ಸ್ಟೈಲ್ ನಲ್ಲಿ ರೆಬೆಲ್ ಸ್ಟಾರ್

ರೆಬೆಲ್ ಸ್ಟಾರ್ ಅಂಬರೀಶ್ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರಂತೆ ಮಾತನಾಡುವುದನ್ನು ಅನುಕರಣೆ ಮಾಡಿ ವೀಕ್ಷಕರನ್ನು ರಂಜಿಸಿದರು. ಇಂತದ್ದೇ ಸಾಕಷ್ಟು ಮನೋರಂಜನಾತ್ಮಕ ದೃಶ್ಯಗಳು ಸಿನಿಮಾ ಗೌರವದಲ್ಲಿ ನೋಡಬಹುದು.

ಕಲರ್ಸ್ ಕನ್ನಡದಲ್ಲಿ ಸಿನಿಮಾ ಗೌರವ

ಸಿನಿಮಾ ಗೌರವ ಕಾರ್ಯಕ್ರಮದ ಸುಂದರ ಕ್ಷಣಗಳನ್ನು ಮೇ 19 ಹಾಗೂ 20 ರಂದು ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ.

English summary
COLORS Kannada has established and sustained an efficacious alliance with Innovative Film City, together garnering much adulation of audience through propositions like Bigg Boss. Adding to the plethora of offerings, COLORS Kannada and Innovative Film City present ‘Cinema Gaurava’

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X