For Quick Alerts
  ALLOW NOTIFICATIONS  
  For Daily Alerts

  ಜನರ ಅಭಿಮತ: ಸೀರಿಯಲ್ಸ್ ಗಿಂತ ಬಿಗ್ ಬಾಸ್ ನಮಗಿಷ್ಟ

  By Suneetha
  |

  ಖಾಸಗಿ ವಾಹಿನಿಗಳ ಹವಾ ಹೆಚ್ಚಾಗಿರುವ ಈ ಕಾಲದಲ್ಲಿ ಹೆಚ್ಚಿನವರು ಎಂರ್ಟಟೈನ್ ಗೋಸ್ಕರ ಟಿವಿ ನೋಡಿದರೆ, ಕೆಲವೇ ಕೆಲವು ಮಂದಿ ಸುದ್ದಿ ನೋಡಲು ನ್ಯೂಸ್ ಚಾನಲ್ ಆನ್ ಮಾಡ್ತಾರೆ.

  ಅದ್ರಲ್ಲೂ ಇತ್ತೀಚೆಗೆ ಮನೆಯ ಹೆಂಗಳೆಯರಲ್ಲಿ ಹೆಚ್ಚಿನವರು ಸೀರಿಯಲ್ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆ ಅನ್ನೋದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ.ಇದೀಗ ಮನೋರಂಜನೆಗೆ ಹೆಚ್ಚಿನ ಆದ್ಯತೆಗೆ ನೀಡುತ್ತಾರೆ ಎಂಬುದಕ್ಕೆ ಉತ್ತಮ ನಿದರ್ಶನ ಎಂದರೆ ನಮ್ಮ ವೀಕ್ಷಕರು.[ನಂ.1 ಕನ್ನಡ ಎಂಟರ್ ಟೇನ್ಮೆಂಟ್ ಚಾನೆಲ್ ಯಾವ್ದು ಗೊತ್ತಾ?]

  ಇತ್ತೀಚೆಗೆ ಮನೋರಂಜನಾ ವಾಹಿನಿ ಕಲರ್ಸ್ ಕನ್ನಡ ಚಾನಲ್ ಟಿ.ಆರ್.ಪಿ ಯಲ್ಲಿ ಕೊಂಚ ಮೇಲಿನ ಸ್ಥಾನದಲ್ಲಿದ್ದು, ಅದರಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಒಂದಾದ 'ಬಿಗ್ ಬಾಸ್' ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪಾಸಿಟಿವ್ ರೆಸ್ಪಾನ್ಸ್ ಇದೆ.

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅತ್ಯಂತ ಹೆಚ್ಚು ಟಿ.ಆರ್.ಪಿ ಹೊಂದಿರುವ 4 ಕಾರ್ಯಕ್ರಮಗಳಾದ ಪುಟ್ಟ ಗೌರಿ ಮದುವೆ, ಲಕ್ಷ್ಮಿ ಬಾರಮ್ಮ, ಅಕ್ಕ ಮತ್ತು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮನೋರಂಜನೆಗಾಗಿ ವೀಕ್ಷಕರು ಅತೀ ಹೆಚ್ಚು ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡುತ್ತಾರಂತೆ.[ವೀಕ್ಷಕರು ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಮೈಂಡ್ ಇವರೇ.!]

  ಹೀಗಂತ ಸ್ವತಃ ವೀಕ್ಷಕರೇ ಹೇಳಿಕೊಂಡಿದ್ದಾರೆ. ಅಂದಹಾಗೆ ಇದೇ ವಿಚಾರವಾಗಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಟ್ವಿಟ್ಟರ್ ನಲ್ಲಿ, 'ಅತೀ ಹೆಚ್ಚು TRP ಹೊಂದಿರುವ ಈ 4 ಕಾರ್ಯಕ್ರಮಗಳ ಪೈಕಿ ನಿಮ್ಮ ಆಯ್ಕೆ ಯಾವುದು?' ಎನ್ನುವ POLL ಕಂಡಕ್ಟ್ ಮಾಡಿತ್ತು.

  ಪುಟ್ಟ ಗೌರಿ ಮದುವೆ, ಲಕ್ಷ್ಮಿ ಬಾರಮ್ಮ, ಅಕ್ಕ ಮತ್ತು ಬಿಗ್ ಬಾಸ್ ಪೈಕಿ ಒಂದು ಕಾರ್ಯಕ್ರಮಕ್ಕೆ ವೀಕ್ಷಕರು ವೋಟ್ ಹಾಕಬೇಕಿತ್ತು. ಸಿಕ್ಕ ವೋಟ್ ಗಳ ಪ್ರಕಾರ, ಶೇ 76% ಪಡೆದುಕೊಂಡ ಬಿಗ್ ಬಾಸ್ ಮೊದಲ ಸ್ಥಾನದಲ್ಲಿದೆ. ಲಕ್ಷ್ಮಿ ಬಾರಮ್ಮ ಧಾರಾವಾಹಿ ಶೇ 16% ಪಡೆದುಕೊಂಡು ಎರಡನೇ ಸ್ಥಾನ ಗಿಟ್ಟಿಸಿಕೊಂಡರೆ, ಪುಟ್ಟ ಗೌರಿ ಮದುವೆ ಮತ್ತು ಅಕ್ಕ ಧಾರಾವಾಹಿ ತಲಾ ಶೇ 4% ಪಡೆದುಕೊಂಡು ಮೂರನೇ ಸ್ಥಾನವನ್ನು ಸಮಾನವಾಗಿ ಹಂಚಿಕೊಂಡಿದೆ.[ವೀಕ್ಷಕರೇ ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ 'ಡ್ರಾಮಾ ಕ್ವೀನ್' ಇವರೇ.!]

  ಇವತ್ತಿನ POLL ಹೀಗಿದೆ...."ಬಿಗ್ ಬಾಸ್ ಮನೆಯಿಂದ ಇವರಲ್ಲಿ ಯಾರು ಹೊರ ಹೋಗುತ್ತಾರೆ?"

  ಆಯ್ಕೆಗಳು - ನೇಹಾ ಗೌಡ, ರೆಹಮಾನ್, ಸುನಾಮಿ ಕಿಟ್ಟಿ, ಪೂಜಾ ಗಾಂಧಿ (ಇಲ್ಲಿ ವೋಟ್ ಮಾಡಿ)

  English summary
  Filmbeat Kannada Poll: Here is the result of poll conducted on twitter Which Is most popular program on Colors Kannada TV. Public voted for Bigg Boss Kannada 3 as most popular and rest of the serials in the next positions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X