For Quick Alerts
  ALLOW NOTIFICATIONS  
  For Daily Alerts

  ಕನ್ನಡ ಕಿರುತೆರೆಯ ನಂ.1 ಕಾರ್ಯಕ್ರಮ 'ಪುಟ್ಟಗೌರಿ ಮದುವೆ' ಅಲ್ಲ.! ಮತ್ತಿನ್ಯಾವುದು.?

  By Harshitha
  |
  ಕಿರುತೆರೆಯಲ್ಲಿ ನಂ1 ಶೋ ಇದೇ ನೋಡಿ..!! | Filmibeat Kannada

  ಒಂದ್ಕಾಲದಲ್ಲಿ ಕಲರ್ಸ್ ಕನ್ನಡ ವಾಹಿನಿಯ 'ಪುಟ್ಟಗೌರಿ ಮದುವೆ' ಕನ್ನಡ ಕಿರುತೆರೆಯ ನಂ.1 ಕಾರ್ಯಕ್ರಮ ಆಗಿತ್ತು. ಟಿ.ಆರ್.ಪಿ ಲೆಕ್ಕಾಚಾರದಲ್ಲಿ 'ಪುಟ್ಟಗೌರಿ ಮದುವೆ' ಹಾಗೂ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಗಳು ಸದಾ ಮುಂಚೂಣಿಯಲ್ಲಿ ಇರುತ್ತಿತ್ತು.

  ಆದ್ರೀಗ ಕಾಲ ಬದಲಾಗಿದೆ. ಎಲಾಸ್ಟಿಕ್ ಗಿಂತಲೂ ಅಧ್ವಾನವಾಗಿ ಎಳೆಯುತ್ತಿರುವ ಮೆಗಾ ಸೀರಿಯಲ್ ಗಳನ್ನು ನೋಡಿ ನೋಡಿ ವೀಕ್ಷಕರಿಗೆ ತಲೆ ಕೆಟ್ಟು ಹೋಗಿದೆ. ಹೀಗಾಗಿ ಅದೇ ಹಳೇ ಧಾರಾವಾಹಿಗಳಿಂದ ವೀಕ್ಷಕರು ದೂರ ಸರಿಯುತ್ತಿರುವ ಹಾಗೆ ಕಾಣುತ್ತಿದೆ.

  ಟಿವಿ ಮುಂದೆ ಕೂತರೆ ಕಿಲಕಿಲ ಅಂತ ನಗಬೇಕು, ಮನಸ್ಸಿಗೆ ನೆಮ್ಮದಿ ಸಿಗಬೇಕು ಅಂತ ಬಯಸುವ ವೀಕ್ಷಕರಿಗೆ ವರದಾನವಾಗಿ ಸಿಕ್ಕಿರುವುದು 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ. 'ಕಾಮಿಡಿ ಕಿಲಾಡಿಗಳು' ಮೊದಲ ಆವೃತ್ತಿ ಜನಪ್ರಿಯತೆ ಪಡೆದಿತ್ತು. ಆದ್ರೆ ಅದ್ಯಾಕೋ ಏನೋ ಎರಡನೇ ಸೀಸನ್ ಅಷ್ಟಾಗಿ ಜನ ಮನ್ನಣೆ ಗಳಿಸಲಿಲ್ಲ.

  ಇದೀಗ ಮೊದಲ ಹಾಗೂ ಎರಡನೇ ಸೀಸನ್ ನ 'ಕಿಲಾಡಿ'ಗಳನ್ನೇ ಬಳಸಿಕೊಂಡು 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್'ಗೆ ಜೀ ಕನ್ನಡ ವಾಹಿನಿ ಚಾಲನೆ ನೀಡಿದೆ. ಈ ಐಡಿಯಾ ಸೂಪರ್ ಸಕ್ಸಸ್ ಆಗಿದೆ. ಅದಕ್ಕೆ ಸಾಕ್ಷಿ ಕಾರ್ಯಕ್ರಮಕ್ಕೆ ಸಿಕ್ಕಿರುವ ರೇಟಿಂಗ್.! ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ....

  ನಂ.1 ಕಾರ್ಯಕ್ರಮ 'ಇದೇ' ಕಣ್ರೀ.!

  ನಂ.1 ಕಾರ್ಯಕ್ರಮ 'ಇದೇ' ಕಣ್ರೀ.!

  ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿಯೇ ನಂ.1 ಕಾರ್ಯಕ್ರಮ ಆಗಿ ಹೊರಹೊಮ್ಮಿರುವುದು 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್'. ರೇಟಿಂಗ್ ಲೆಕ್ಕಾಚಾರದಲ್ಲಿ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್' ನಂ.1 ಸ್ಥಾನ ಪಡೆದಿದೆ.

  ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!

  ಬಾರ್ಕ್ ರೇಟಿಂಗ್ ಇಲ್ಲಿದೆ ನೋಡಿ...

  ಬಾರ್ಕ್ ರೇಟಿಂಗ್ ಇಲ್ಲಿದೆ ನೋಡಿ...

  ಕನ್ನಡ ಕಿರುತೆರೆಯಲ್ಲಿ 29ನೇ ವಾರ (ಜುಲೈ 14 ರಿಂದ ಜುಲೈ 20 ರವರೆಗೆ) ಪ್ರಸಾರವಾದ ಕಾರ್ಯಕ್ರಮಗಳ ಪೈಕಿ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್' ಟಾಪ್ ನಲ್ಲಿದೆ. ಇಡೀ ಕರ್ನಾಟಕದಲ್ಲಿ (ಅರ್ಬನ್ ಮತ್ತು ರೂರಲ್) 5844 ಇಂಪ್ರೆಶನ್ ಗಳನ್ನು ಗಳಿಸುವ ಮೂಲಕ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್' ನಂ.1 ಸ್ಥಾನದಲ್ಲಿದೆ.

  ಟಾಪ್ ಗೇರಿದ ಕಲರ್ಸ್ ಕನ್ನಡ ಟಿ.ಆರ್.ಪಿ: ಎಲ್ಲ 'ಕಿರಿಕ್ ಪಾರ್ಟಿ' ಕರಾಮತ್ತು.!

  ಬಾಕಿ ನಾಲ್ಕು ಸ್ಥಾನಗಳು ಕಲರ್ಸ್ ವಾಹಿನಿಗೆ.!

  ಬಾಕಿ ನಾಲ್ಕು ಸ್ಥಾನಗಳು ಕಲರ್ಸ್ ವಾಹಿನಿಗೆ.!

  ಎರಡನೇ ಸ್ಥಾನದಲ್ಲಿ (5757) 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಇದ್ದರೆ, ಮೂರನೇ ಸ್ಥಾನದಲ್ಲಿ (5508) 'ಶನಿ' ಇದೆ. ನಾಲ್ಕನೇ ಸ್ಥಾನಕ್ಕೆ (5006) 'ಪುಟ್ಟಗೌರಿ ಮದುವೆ' ತೃಪ್ತಿ ಪಟ್ಟುಕೊಂಡಿದೆ. ಇನ್ನೂ 'ಪದ್ಮಾವತಿ' ಸೀರಿಯಲ್ ಐದನೇ ಸ್ಥಾನದಲ್ಲಿದೆ (4844).

  ನಿಮ್ಮ ನೆಚ್ಚಿನ ಟಿವಿ ಚಾನಲ್ ಯಾವುದು?

  ಅಚ್ಚರಿ ಅಂದ್ರೆ....

  ಅಚ್ಚರಿ ಅಂದ್ರೆ....

  ಹಾಗ್ನೋಡಿದ್ರೆ, 'ಶನಿ' ಹಾಗೂ 'ಮಹಾಕಾಳಿ' ಧಾರಾವಾಹಿಗಳಿಗೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ. ಆದ್ರೆ, 'ಲಕ್ಷ್ಮಿ ಬಾರಮ್ಮ' ಸೀರಿಯಲ್ ರೇಟಿಂಗ್ ನ ಬೀಟ್ ಮಾಡುವಲ್ಲಿ 'ಶನಿ' ಯಶಸ್ವಿ ಆಗಿಲ್ಲ. ಇನ್ನೂ ಟಾಪ್ 5 ಕಾರ್ಯಕ್ರಮಗಳ ಪಟ್ಟಿಯಲ್ಲಿ 'ಮಹಾಕಾಳಿ' ಸ್ಥಾನವೇ ಪಡೆದಿಲ್ಲ.!

  'ಮಗಳು ಜಾನಕಿ' ಕಥೆ ಏನಾಯ್ತು.?

  'ಮಗಳು ಜಾನಕಿ' ಕಥೆ ಏನಾಯ್ತು.?

  ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ 'ಮಗಳು ಜಾನಕಿ'ಯನ್ನ ಕರ್ಕೊಂಡು ಟಿ.ಎನ್.ಸೀತಾರಾಮ್ ಬಂದಿದ್ದಾರೆ. 'ಮಗಳು ಜಾನಕಿ'ಗೆ ವೀಕ್ಷಕರ ಬೆಂಬಲ ಲಭಿಸಿದೆ. ಆದ್ರೆ, ಟಾಪ್ 5 ಮಟ್ಟಕ್ಕೆ 'ಮಗಳು ಜಾನಕಿ' ಇನ್ನೂ ಬಂದಿಲ್ಲ.

  ಜೀ ಕನ್ನಡ ಪ್ಲಾನ್ ಸಕ್ಸಸ್ ಆಗಿದೆ.!

  ಜೀ ಕನ್ನಡ ಪ್ಲಾನ್ ಸಕ್ಸಸ್ ಆಗಿದೆ.!

  'ಕಾಮಿಡಿ ಕಿಲಾಡಿಗಳು' ಮೊದಲ ಸೀಸನ್ ಎಲ್ಲರಿಗೂ ಖುಷಿ ಕೊಟ್ಟಿತ್ತು. ಶಿವರಾಜ್.ಕೆ.ಆರ್.ಪೇಟೆ, ಲೋಕೇಶ್, ಹಿತೇಶ್, ನಯನಾ ಸೇರಿದಂತೆ ಮೊದಲ ಆವೃತ್ತಿಯ ಸ್ಪರ್ಧಿಗಳು ಕನ್ನಡಿಗರ ಹೃದಯ ಗೆದ್ದಿದ್ದರು. ಇದೀಗ ಇದೇ ಕಿಲಾಡಿಗಳು 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್'ನಲ್ಲಿ ವಾಪಸ್ ಬಂದಿದ್ದಾರೆ. ಜೊತೆಗೆ ಹಾಸ್ಯ ದಿಗ್ಗಜರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಕಾರಣ ಸಹಜವಾಗಿ ಟಿ.ಆರ್.ಪಿ ಟಾಪ್ ಗೇರಿದೆ. ಹಾಗಾದ್ರೆ, ಇವರುಗಳನ್ನೇ ಟಿ.ಆರ್.ಪಿ ಕಿಂಗ್ ಎನ್ನಬಹುದೇ.?

  English summary
  Zee Kannada Channel's popular show Comedy Khiladigalu Championship becomes No 1 show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X