For Quick Alerts
  ALLOW NOTIFICATIONS  
  For Daily Alerts

  'ಟಿ.ಆರ್.ಪಿ'ಯಲ್ಲಿ ಟಾಪ್: ರಕ್ಷಿತಾ ಪ್ರೇಮ್, ಜಗ್ಗೇಶ್ ಗೆ ಖುಷಿಯೋ ಖುಷಿ.!

  By Harshitha
  |

  'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್' ಕಾರ್ಯಕ್ರಮ ನಿಜಕ್ಕೂ ಕಿರುತೆರೆ ಲೋಕದಲ್ಲಿ ಕಮಾಲ್ ಮಾಡಿದೆ. ನಕ್ಕು-ನಲಿಸುವ ಈ ಶೋನಲ್ಲಿ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಎರಡೂ ಆವೃತ್ತಿಗಳ ಸ್ಪರ್ಧಿಗಳು ಭಾಗವಹಿಸಿದ್ದಾರೆ.

  ಜೊತೆಗೆ ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ಸರಿಗಮ ವಿಜಿ, ಬ್ಯಾಂಕ್ ಜರ್ನಾಧನ್, ರೇಖಾ ದಾಸ್, ಆರ್.ಟಿ.ರಮಾ ರಂತಹ ಹಾಸ್ಯ ದಿಗ್ಗಜರೂ ಕೂಡ 'ಮೆಂಟರ್' ಸ್ಥಾನ ಅಲಂಕರಿಸಿದ್ದಾರೆ.

  ಹಾಸ್ಯದ ಹೊನಲನ್ನೇ ಹರಿಸುವ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್' ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಅದಕ್ಕೆ ಸಾಕ್ಷಿ, 2018 ರ 29ನೇ ವಾರದ ರೇಟಿಂಗ್.

  ಕನ್ನಡ ಕಿರುತೆರೆಯಲ್ಲಿ 29ನೇ ವಾರ (ಜುಲೈ 14 ರಿಂದ ಜುಲೈ 20 ರವರೆಗೆ) ಪ್ರಸಾರವಾದ ಕಾರ್ಯಕ್ರಮಗಳ ಪೈಕಿ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್' ಟಾಪ್ ನಲ್ಲಿದೆ. ಇಡೀ ಕರ್ನಾಟಕದಲ್ಲಿ (ಅರ್ಬನ್ ಮತ್ತು ರೂರಲ್) 5844 ಇಂಪ್ರೆಶನ್ ಗಳನ್ನು ಗಳಿಸುವ ಮೂಲಕ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್' ನಂ.1 ಸ್ಥಾನ ಪಡೆದಿದೆ. ಇದರಿಂದ ರಕ್ಷಿತಾ ಪ್ರೇಮ್ ಹಾಗೂ ಜಗ್ಗೇಶ್ ಸಂತಸಗೊಂಡಿದ್ದಾರೆ. ಮುಂದೆ ಓದಿರಿ...

  ನಿರ್ಣಾಯಕರ ಸ್ಥಾನದಲ್ಲಿ....

  ನಿರ್ಣಾಯಕರ ಸ್ಥಾನದಲ್ಲಿ....

  'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಶುರು ಆದಾಗಿನಿಂದಲೂ, ನಿರ್ಣಾಯಕರ ಸ್ಥಾನದಲ್ಲಿ ಇರುವವರು ನಟಿ-ನಿರ್ಮಾಪಕಿ ರಕ್ಷಿತಾ ಪ್ರೇಮ್, ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್. ಇದೀಗ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್' ನಲ್ಲಿ ರಕ್ಷಿತಾ, ಜಗ್ಗೇಶ್ ಹಾಗೂ ಯೋಗರಾಜ್ ಭಟ್ ತಲಾ ಎರಡು ತಂಡಗಳ ಸಾರಥ್ಯ ವಹಿಸಿದ್ದಾರೆ.

  'ಜಿ.ಆರ್.ಪಿ'ಯಲ್ಲಿ ಜೀ ಕನ್ನಡ ಏಕ್ದಂ ಜಿಗಿತ: ಎಲ್ಲಾ 'ಕಾಮಿಡಿ ಕಿಲಾಡಿಗಳ' ಕರಾಮತ್ತು.!'ಜಿ.ಆರ್.ಪಿ'ಯಲ್ಲಿ ಜೀ ಕನ್ನಡ ಏಕ್ದಂ ಜಿಗಿತ: ಎಲ್ಲಾ 'ಕಾಮಿಡಿ ಕಿಲಾಡಿಗಳ' ಕರಾಮತ್ತು.!

  ಸಂತಸದಲ್ಲಿ ರಕ್ಷಿತಾ ಪ್ರೇಮ್

  ಸಂತಸದಲ್ಲಿ ರಕ್ಷಿತಾ ಪ್ರೇಮ್

  'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್' ನಂಬರ್ 1 ಸ್ಥಾನ ಪಡೆದಿರುವುದಕ್ಕೆ ನಟಿ-ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಂತಸಗೊಂಡಿದ್ದಾರೆ. ತಮ್ಮ ಖುಷಿಯನ್ನ ಫೇಸ್ ಬುಕ್ ನಲ್ಲಿ ರಕ್ಷಿತಾ ಪ್ರೇಮ್ ಹಂಚಿಕೊಂಡಿದ್ದಾರೆ.

  ಕನ್ನಡ ಕಿರುತೆರೆಯ ನಂ.1 ಕಾರ್ಯಕ್ರಮ 'ಪುಟ್ಟಗೌರಿ ಮದುವೆ' ಅಲ್ಲ.! ಮತ್ತಿನ್ಯಾವುದು.?ಕನ್ನಡ ಕಿರುತೆರೆಯ ನಂ.1 ಕಾರ್ಯಕ್ರಮ 'ಪುಟ್ಟಗೌರಿ ಮದುವೆ' ಅಲ್ಲ.! ಮತ್ತಿನ್ಯಾವುದು.?

  ಟ್ವೀಟ್ ಮಾಡಿದ ಜಗ್ಗೇಶ್

  ''ಪ್ರೇಕ್ಷಕ ದೇವರ ಅಭಿಮಾನ ಪ್ರೀತಿಯಿಂದ ಬಂದ ಕೊಡುಗೆ ಇದು. ಧನ್ಯವಾದಗಳು ಈ ಪ್ರೀತಿಗೆ'' ಅಂತ ನವರಸ ನಾಯಕ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದಾರೆ.

  'ಜಿ.ಆರ್.ಪಿ'ನಲ್ಲಿ ಜೀ ಕನ್ನಡ ನಂಬರ್ 1

  'ಜಿ.ಆರ್.ಪಿ'ನಲ್ಲಿ ಜೀ ಕನ್ನಡ ನಂಬರ್ 1

  ಕನ್ನಡ ಕಿರುತೆರೆಯಲ್ಲಿ 29ನೇ ವಾರ (ಜುಲೈ 14 ರಿಂದ ಜುಲೈ 20 ರವರೆಗೆ) ಜೀ ಕನ್ನಡ ವಾಹಿನಿಗೆ 617 ಜಿ.ಆರ್.ಪಿ (ಗ್ರಾಸ್ ರೇಟಿಂಗ್ ಪಾಯಿಂಟ್) ಲಭಿಸಿದೆ. 'ಜಿ.ಆರ್.ಪಿ'ನಲ್ಲಿ ಮಿಕ್ಕೆಲ್ಲಾ ವಾಹಿನಿಗಳನ್ನು ಕೆಳಕ್ಕೆ ತಳ್ಳಿ ಜೀ ಕನ್ನಡ ವಾಹಿನಿ ನಂಬರ್ 1 ಸ್ಥಾನಕ್ಕೆ ಏರಿದೆ. ಇದಕ್ಕೆ ಕಾಮಿಡಿ ಕಿಲಾಡಿಗಳ ಕಮಾಲ್ ಕಾರಣ ಅಂದರೂ ತಪ್ಪಾಗಲಿಕ್ಕಿಲ್ಲ.

  English summary
  Kannada Actress Rakshitha Prem and Kannada Actor Jaggesh have expressed their happiness for Comedy Khiladigalu Championship becoming No 1 show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X