»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಷ್ಟವಾದ ರಿಯಾಲಿಟಿ ಶೋ ಇದು..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಷ್ಟವಾದ ರಿಯಾಲಿಟಿ ಶೋ ಇದು..

Posted By:
Subscribe to Filmibeat Kannada

ಸದಾ ಶೂಟಿಂಗ್, ಸಿನಿಮಾ, ಮೇಕಪ್ ಅನ್ನೋದ್ರಲ್ಲೇ ಸ್ಟಾರ್ ಗಳು ಬಿಜಿ. ಇವರಿಗೆಲ್ಲ ಪರ್ಸನಲ್ ಲೈಫ್ ಗೆ ಟೈಮ್ ಸಿಗುವುದೇ ಕಮ್ಮಿ. ಅಂಥದ್ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುವು ಮಾಡಿಕೊಂಡು ಒಂದು ರಿಯಾಲಿಟಿ ಶೋ ನೋಡ್ತಾರೆ ಅಂದ್ರೆ....

ಹೌದು, ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಮಿಸ್ ಮಾಡದೇ ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ಟಿವಿ ಮುಂದೆ ಹಾಜರ್ ಆಗುತ್ತಾರೆ. ಅದು ಯಾವ ಕಾರ್ಯಕ್ರಮಕ್ಕಾಗಿ ಗೊತ್ತಾ.?

ದರ್ಶನ್ ರವರ ಇಷ್ಟದ ಶೋ...

ಜೀ ಕನ್ನಡ ವಾಹಿನಿಯ ಜನಪ್ರಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮವನ್ನ ಮಿಸ್ ಮಾಡದೇ ದರ್ಶನ್ ರವರು ನೋಡ್ತಾರಂತೆ.['ಕಾಮಿಡಿ ಕಿಲಾಡಿ' ಶಿವರಾಜ್ ಕೆ.ಆರ್.ಪೇಟೆಗೆ ಗೋಲ್ಡನ್ ಚಾನ್ಸ್! ಯಾವ ಚಿತ್ರದಲ್ಲಿ?]

ಬಾಯಿ ಬಿಟ್ಟಿದ್ದು ರಕ್ಷಿತಾ

''ಕಾಮಿಡಿ ಕಿಲಾಡಿಗಳು' ದರ್ಶನ್ ಗೆ ಸಖತ್ ಇಷ್ಟ'' ಅಂತ ಸ್ವತಃ ಬಾಯ್ಬಿಟ್ಟಿದ್ದು ನಟಿ ರಕ್ಷಿತಾ ಪ್ರೇಮ್. 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋನ ತೀರ್ಪುಗಾರರ ಪೈಕಿ ನಟಿ ರಕ್ಷಿತಾ ಪ್ರೇಮ್ ಕೂಡ ಒಬ್ಬರು.[ಕಾಮಿಡಿ ಕಿಲಾಡಿಗಳ ಅಡ್ಡದಲ್ಲಿ ಜಗ್ಗೇಶ್ ಪ್ರತ್ಯಕ್ಷ]

ರಕ್ಷಿತಾ ಏನಂದರು.?

''ವೀಕೆಂಡ್ ನಲ್ಲಿ ದರ್ಶನ್ ಜೊತೆ ಮಾತನಾಡುತ್ತಿರುವಾಗ, ''ನನ್ನ ಫೇವರಿಟ್ ಶೋ ಕಾಮಿಡಿ ಕಿಲಾಡಿಗಳು... ಮಿಸ್ ಮಾಡೋದೇ ಇಲ್ಲ ಅಂತ ದರ್ಶನ್ ಹೇಳಿದರು. ಎಲ್ಲ ಕಾಮಿಡಿ ಕಿಲಾಡಿಗಳಿಗೂ ದರ್ಶನ್ ಕಡೆಯಿಂದ ಆಲ್ ದಿ ಬೆಸ್ಟ್'' - ರಕ್ಷಿತಾ ಪ್ರೇಮ್

ನಿಮಗೆ ಇಷ್ಟವೇ.?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾಮಿಡಿ ಕಿಲಾಡಿಗಳು' ಇನ್ನೇನು ಫಿನಾಲೆ ಹಂತ ತಲುಪಲಿದೆ. ಸದ್ಯ ಇರುವ ಹತ್ತು ಸ್ಪರ್ಧಿಗಳ ಪೈಕಿ ನಿಮಗೆ ಇಷ್ಟವಾದ 'ಕಾಮಿಡಿ ಕಿಲಾಡಿ' ಯಾರು ಎಂಬುದನ್ನು ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Kannada Actress Rakshitha Prem revealed that 'Comedy Khiladigalu' is the favourite show of Kannada Actor Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada