»   » 'ಕಾಮಿಡಿ ಕಿಲಾಡಿಗಳು' ಫಿನಾಲೆ ತಲುಪುವ ಆರು ಅದೃಷ್ಟಶಾಲಿಗಳು ಯಾರು.?

'ಕಾಮಿಡಿ ಕಿಲಾಡಿಗಳು' ಫಿನಾಲೆ ತಲುಪುವ ಆರು ಅದೃಷ್ಟಶಾಲಿಗಳು ಯಾರು.?

Posted By:
Subscribe to Filmibeat Kannada

ಶನಿವಾರ-ಭಾನುವಾರ ರಾತ್ರಿ 9 ಗಂಟೆ ಆಯ್ತು ಅಂದ್ರೆ ಸಾಕು... ಕರುನಾಡ ಜನತೆ ತಪ್ಪದೆ ಟಿವಿ ಮುಂದೆ ಹಾಜರ್ ಆಗುತ್ತಾರೆ. ಎಷ್ಟೇ ದಣಿದಿದ್ದರೂ, ಮನಸಾರೆ ನಕ್ಕು-ನಲಿಯಲು 'ಜೀ ಕನ್ನಡ' ವಾಹಿನಿ ಟ್ಯೂನ್ ಮಾಡುತ್ತಾರೆ. ಕಾರಣ 'ಕಾಮಿಡಿ ಕಿಲಾಡಿಗಳು'!

'ಡ್ರಾಮಾ ಜ್ಯೂನಿಯರ್ಸ್'ನ ಮುದ್ದು ಮಕ್ಕಳ ಕಲರವ ಮುಗಿದ ಮೇಲೆ ಕನ್ನಡ ಕಿರುತೆರೆ ಇತಿಹಾಸದಲ್ಲಿ ದೊಡ್ಡ ಸಂಚಲನ ಉಂಟು ಮಾಡಿದ ಶೋ ಈ 'ಕಾಮಿಡಿ ಕಿಲಾಡಿಗಳು'.[ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!]

ಪುಟಾಣಿ ಮಕ್ಕಳನ್ನ 'ಡ್ರಾಮಾ ಜ್ಯೂನಿಯರ್ಸ್' ಮೂಲಕ 'ಕರ್ನಾಟಕದ ಸೂಪರ್ ಸ್ಟಾರ್ಸ್' ಮಾಡಿದ ಮೇಲೆ ಪ್ರತಿಭಾವಂತ ಕಲಾವಿದರನ್ನು 'ಕಾಮಿಡಿ ಕಿಲಾಡಿಗಳು' ಮೂಲಕ ಕರ್ನಾಟಕಕ್ಕೆ ಪರಿಚಯ ಮಾಡಿದ ಕೀರ್ತಿ 'ಜೀ ಕನ್ನಡ' ವಾಹಿನಿಗೆ ಸಲ್ಲಬೇಕು.

ಮುಗಿಯುವ ಹಂತಕ್ಕೆ ಬಂದ 'ಕಾಮಿಡಿ ಕಿಲಾಡಿಗಳು'

ಕೋಟ್ಯಾಂತರ ವೀಕ್ಷಕರ ಮನ ಗೆದ್ದಿರುವ 'ಕಾಮಿಡಿ ಕಿಲಾಡಿಗಳು' ಮುಗಿಯುವ ಹಂತಕ್ಕೆ ಬಂದಿದೆ. 'ಕಾಮಿಡಿ ಕಿಲಾಡಿಗಳು' ಫಿನಾಲೆಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿವೆ.[ಎಕ್ಸ್ ಕ್ಲೂಸಿವ್:'ಡ್ರಾಮಾ ಜ್ಯೂನಿಯರ್ಸ್' ಗೆದ್ದ ಮಕ್ಕಳಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?]

ಗ್ರ್ಯಾಂಡ್ ಫಿನಾಲೆ ಯಾವಾಗ.?

ಮಾರ್ಚ್ 5 ರಂದು 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ನಡೆಯಲಿದೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಷ್ಟವಾದ ರಿಯಾಲಿಟಿ ಶೋ ಇದು..]

ಫಿನಾಲೆ ತಲುಪುವ ಆರು ಮಂದಿ ಯಾರು.?

ಈಗಾಗಲೇ ನೀವೇ ಗಮನಿಸಿರುವ ಹಾಗೆ, ಅನೇಕ ಸಂಚಿಕೆಗಳಲ್ಲಿ 'ಎಲಿಮಿನೇಷನ್' ಇರಲಿಲ್ಲ. ಹೀಗಾಗಿ, ಸೆಮಿಫೈನಲ್ ನಲ್ಲಿ ಎಲ್ಲರಿಗೂ ಬಿಗ್ ಶಾಕ್ ಕಾದಿದೆ. ಸದ್ಯ ರೇಸ್ ನಲ್ಲಿ ಇರುವ ಹತ್ತು ಮಂದಿ ಪೈಕಿ ಕೇವಲ ಆರು ಮಂದಿ ಮಾತ್ರ ಫಿನಾಲೆ ಹಂತ ತಲುಪಲಿದ್ದಾರೆ.

ಹತ್ತು ಮಂದಿ ಯಾರ್ಯಾರು.?

ಶಿವರಾಜ್.ಕೆ.ಆರ್.ಪೇಟೆ, ನಯನ, ಲೋಕೇಶ್, ಅನೀಶ್, ದಿವ್ಯಶ್ರೀ, ಗೋವಿಂದೇ ಗೌಡ, ಸಂಜು ಬಸಯ್ಯ, ಹಿತೇಶ್, ಮುತ್ತುರಾಜ್ ಮತ್ತು ಪ್ರವೀಣ್ ಸದ್ಯ ರೇಸ್ ನಲ್ಲಿದ್ದಾರೆ.

ನಾಲ್ವರು ಔಟ್.!

ಶಿವರಾಜ್.ಕೆ.ಆರ್.ಪೇಟೆ, ನಯನ, ಲೋಕೇಶ್, ಅನೀಶ್, ದಿವ್ಯಶ್ರೀ, ಗೋವಿಂದೇ ಗೌಡ, ಸಂಜು ಬಸಯ್ಯ, ಹಿತೇಶ್, ಮುತ್ತುರಾಜ್ ಮತ್ತು ಪ್ರವೀಣ್ ಪೈಕಿ ನಾಲ್ಕು ಮಂದಿ ಸೆಮಿಫಿನಾಲೆಯಲ್ಲಿ ಎಲಿಮಿನೇಟ್ ಆಗಲಿದ್ದಾರೆ.

ನಿಮ್ಮ ನೆಚ್ಚಿನ ಕಾಮಿಡಿ ಕಿಲಾಡಿ ಯಾರು.?

ಸದ್ಯ ಇರುವ ಹತ್ತು ಸ್ಪರ್ಧಿಗಳ ಪೈಕಿ ನಿಮಗೆ ಇಷ್ಟವಾದ 'ಕಾಮಿಡಿ ಕಿಲಾಡಿ' ಯಾರು ಎಂಬುದನ್ನು ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Zee Kannada Channel's popular show 'Comedy Khiladigalu' Grand Finale is scheduled on March 5th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada