»   » 'ಕಾಮಿಡಿ ಕಿಲಾಡಿಗಳು' ಫಿನಾಲೆ ನೋಡಿ ನಿಮ್ಮ ಹೊಟ್ಟೆ ಹುಣ್ಣಾದರೆ, ನಾವು ಜವಾಬ್ದಾರರಲ್ಲ.!

'ಕಾಮಿಡಿ ಕಿಲಾಡಿಗಳು' ಫಿನಾಲೆ ನೋಡಿ ನಿಮ್ಮ ಹೊಟ್ಟೆ ಹುಣ್ಣಾದರೆ, ನಾವು ಜವಾಬ್ದಾರರಲ್ಲ.!

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ಇಂದು (ಭಾನುವಾರ, ಮಾರ್ಚ್ 12) ಸಂಜೆ 6 ಗಂಟೆಯಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಕಿರುತೆರೆ ವೀಕ್ಷಕರು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ 'ಗ್ರ್ಯಾಂಡ್ ಫಿನಾಲೆ' ಸಂಚಿಕೆ ಪ್ರಸಾರ ಆಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ...['ಕಾಮಿಡಿ ಕಿಲಾಡಿಗಳು' ಗೆದ್ದ ಪ್ರತಿಭಾವಂತರಿಗೆ ಸಿಕ್ಕ ಬಹುಮಾನ ಹಣ ಎಷ್ಟು ಗೊತ್ತೇ.?]

ಬಾಗಲಕೋಟೆಯಲ್ಲಿ ನಡೆದಿತ್ತು 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ

ಬಾಗಲಕೋಟೆಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ 'ಕಾಮಿಡಿ ಕಿಲಾಡಿಗಳು' ಕಚಗುಳಿ ಇಟ್ಟಿದ್ದಾರೆ. ಎಲ್ಲರ ಅದ್ಭುತ ನಟನೆಗೆ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಕ್ಷಾಂತರ ಜನರು ಸಾಕ್ಷಿಯಾಗಿದ್ದರು.!

ಬಾಗಲಕೋಟೆಯಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ನಡೆದಿದೆ.['ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?]

'ಡ್ರಾಮಾ ಜ್ಯೂನಿಯರ್ಸ್' ಪುಟಾಣಿಗಳು ಕೂಡ ಇದ್ದರು.!

ಕಾಮಿಡಿ ಕಿಲಾಡಿಗಳ ಕಚಗುಳಿ ಜೊತೆಗೆ 'ಡ್ರಾಮಾ ಜ್ಯೂನಿಯರ್ಸ್' ಮಕ್ಕಳೂ ಕೂಡ ಪ್ರದರ್ಶನ ನೀಡಿರುವುದು ಕಾರ್ಯಕ್ರಮದ ವಿಶೇಷ.

ಮಾಸ್ಟರ್ ಆನಂದ್ ನಿರೂಪಣೆ

ಎಂದಿನಂತೆ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆಗೆ ಮಾಸ್ಟರ್ ಆನಂದ್ ನಿರೂಪಣೆ ಇದ್ರೆ, ತೀರ್ಪುಗಾರರ ಸ್ಥಾನದಲ್ಲಿ ಜಗ್ಗೇಶ್, ರಕ್ಷಿತಾ ಮತ್ತು ಯೋಗರಾಜ್ ಭಟ್ ಇದ್ದಾರೆ.

ವಿನ್ನರ್ ಗಳ ಅಧಿಕೃತ ಪ್ರಕಟ

ಈಗಾಗಲೇ 'ಕಾಮಿಡಿ ಕಿಲಾಡಿಗಳು' ಶೋ ವಿನ್ನರ್ ಯಾರು ಎಂಬುದರ ಕುರಿತು ವರದಿಗಳು ಪ್ರಕಟಗೊಂಡಿದೆ. ಆದ್ರೆ, ಅಧಿಕೃತ ಘೋಷಣೆ ಇಂದು ಆಗಲಿದೆ.

ಮುಂಗಾರು-ದುನಿಯಾ.!

'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ 'ಮುಂಗಾರು ಮಳೆ' ಹಾಗೂ 'ದುನಿಯಾ' ಚಿತ್ರಗಳ ಕುರಿತು ಒಂದು ಕಾಮಿಡಿ ಆಕ್ಟ್ ಮಾಡಲಾಗಿದೆ. ಅದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ಫಿನಾಲೆಗೂ ಮುನ್ನ ಮಾಸ್ಟರ್ ಆನಂದ್ ಮಾತನಾಡಿರುವುದನ್ನು ನೋಡಿ...

'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ನಡೆಯುವ ಮುನ್ನ ಮಾಸ್ಟರ್ ಆನಂದ್ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ....

ಪ್ರೊಮೋ ನೋಡಿದ್ರಾ.?

ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ಪ್ರೊಮೋನ ನೀವಿನ್ನೂ ನೋಡಿಲ್ಲ ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ ನೋಡಿ...

ಗ್ರ್ಯಾಂಡ್ ಫಿನಾಲೆಯಲ್ಲಿ ಜಗ್ಗೇಶ್ ಮಾತು..

ಗ್ರ್ಯಾಂಡ್ ಫಿನಾಲೆಯಲ್ಲಿ ವೇದಿಕೆಯಲ್ಲಿ ನಟ ಜಗ್ಗೇಶ್ ಎದ್ದು ನಿಂತು, ಪ್ರತಿಭಾವಂತ ಕಿಲಾಡಿಗಳ ಭವಿಷ್ಯ ನುಡಿದಿದ್ದಾರೆ. ಅವರ ಮಾತುಗಳನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ಕಲರ್ ಫುಲ್ ಶೋ..!

'ಕಾಮಿಡಿ ಕಿಲಾಡಿಗಳು' ವೇದಿಕೆ ಮೇಲೆ 'ಜೋಡಿ ಹಕ್ಕಿ' ತಂಡ ಕೂಡ ಪರ್ಫಾಮೆನ್ಸ್ ನೀಡಿದೆ. ಅದರ ಝಲಕ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

English summary
Don't miss to watch Zee Kannada Channel's popular show 'Comedy Khiladigalu' grand finale today at 6PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada