»   » 'ಬಿಗ್ ಬಾಸ್ ಕನ್ನಡ' ನೋಡ್ತೀರಾ? ಇಲ್ವಾ? ವೀಕ್ಷಕರ ಅಭಿಮತ ಏನಿದೆ?

'ಬಿಗ್ ಬಾಸ್ ಕನ್ನಡ' ನೋಡ್ತೀರಾ? ಇಲ್ವಾ? ವೀಕ್ಷಕರ ಅಭಿಮತ ಏನಿದೆ?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಯಶಸ್ವಿ 6ನೇ ವಾರ ಪ್ರಸಾರವಾಗುತ್ತಿದೆ. ಇಲ್ಲಿಯವರೆಗೂ ಬಿಗ್ ಬಾಸ್ ಮನೆಯಲ್ಲಿ ವಾದ-ವಿವಾದ, ಆಟ-ಪಾಟ, ಎಲಿಮಿನೇಷನ್, ಎಲ್ಲವೂ ಆಗಿದೆ. ಹೀಗಿರುವಾಗ, ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.

ಕೆಲವರಿಗೆ ಈ ಆವೃತ್ತಿ ಸಿಕ್ಕಾಪಟ್ಟೆ ಇಷ್ಟವಾಗಿದ್ರೆ, ಮತ್ತೆ ಕೆಲವರು ಈ ಸೀಸನ್ ಯಾಕೋ ಆಸಕ್ತಿನೇ ಇಲ್ಲ ಅಂತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ 'ಒನ್ ಇಂಡಿಯಾ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಒಂದು POLL ಅಯೋಜಿಸಲಾಗಿತ್ತು.

ಈ POLL ಗೆ ಕಾಮೆಂಟ್ ಮಾಡಿರುವ ವೀಕ್ಷಕರು ಹಾಗೂ ನಮ್ಮ ಓದುಗರು, ಈ ಕಾರ್ಯಕ್ರಮ ನೋಡ್ಬೇಕಾ ಅಥವಾ ಬೇಡವೋ, ಕಾರ್ಯಕ್ರಮ ಹೇಗಿದೆ? ಏನು ಇಷ್ಟವಾಯ್ತು, ಏನು ಕಷ್ಟವಾಯ್ತು ಎಂದು ಪ್ರತಿಕ್ರಯಿಸಿದ್ದಾರೆ. ಜನರ ಅಭಿಮತವನ್ನ ನಿಮ್ಮ ಮುಂದೆ ಇಡಲಾಗಿದೆ. ಓದಿ....

ಬಿಗ್ ಬಾಸ್ ರಿಸಲ್ಟ್ ನೋಡಿ

'ಒನ್ ಇಂಡಿಯಾ ಕನ್ನಡ' ವೆಬ್ ಸೈಟ್ ನಲ್ಲಿ ಕೇಳಲಾಗಿದ್ದ POLLನಲ್ಲಿ ''ಓದುಗರೇ, ಬಿಗ್ ಬಾಸ್ ಕನ್ನಡ 5 ಶೋ ನೋಡುತ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು''. ಅದಕ್ಕೆ ಮೂರು ಆಯ್ಕೆ ನೀಡಲಾಗಿತ್ತು.

1 ಚೆನ್ನಾಗಿದೆ, ಪ್ರತಿದಿನವೂ ನೋಡುತ್ತೇವೆ
2 ನೋಡಲ್ಲ, ಇಂಟ್ರೆಸ್ಟ್ ಇಲ್ಲ
3 ಸಮಯ ಸಿಕ್ಕಾಗ ಮಾತ್ರ ನೋಡ್ತೇವೆ.
ಇವುಗಳಲ್ಲಿ 2ನೇ ಆಯ್ಕೆಗೆ ಹೆಚ್ಚು ವೋಟ್ ಬಂದಿದೆ.

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ಇದೊಂದು ಒಳ್ಳೆಯ ಶೋ, ಜ್ಞಾನ ಬರುತ್ತೆ.!

''ಬಿಗ್ ಬಾಸ್ ಶೋ ಯಿಂದ ನೋಡಗರಿಗೆ ತಿಳುವಳಿಕೆ, ಜ್ಞಾನ ಹೆಚ್ಚಿಸುತ್ತದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಬಿಗ್ ಬಾಸ್ ಎಂದರೆ ಅದು ಒಂದು ವ್ಯಕ್ತಿಗೆ ಜೀವನದ ಪಾಠ ಶಾಲೆ, ಹಾಗೇ ಗರ್ಭಗುಡಿ ಎಂದರೆ ತಪ್ಪು ಆಗಲಿಕ್ಕೆ ಇಲ್ಲ. ಆ ಗರ್ಭ ಗುಡಿಯೊಳಗೆ ಒಳಿತನ್ನೇ ಕಲಿಬೇಕು ಹೊರಪ್ರಪಂಚ ಕಾಣದ ಗುಡಿಯೊಳಗಿದ್ದ ಜೀವ ಅತೀ ಸೂಕ್ಷ್ಮವಾಗಿ ಅತೀ ಪಾದರಸವಾಗಿ ಬಿಗ್ ಬಾಸ್ ವಿನ್ನರ್ ಆಗಿ ಕಾಣುವುದೇ ಕನ್ನಡದ ಜೀವ ಶಿಲೆ ಇದ್ದಂತೆ'' ಎಂದು ವೀಕ್ಷರೊಬ್ಬರು ಕಾಮೆಂಟ್ ಮಾಡಿದ್ದಾರೆ.

'ಬಿಗ್ ಬಾಸ್' ಮನೆಯಿಂದ ಹೊರ ಹೋಗ್ತಾರಂತೆ ನಟಿ ಅನುಪಮಾ ಗೌಡ.!

ಸಮಯ ಹಾಳು ಮಾಡುವ ಶೋ

''ಇದು ಒಂದು ಸಮಯ ಹಾಳುಮಾಡುವ ಹಾಗೂ ಅರ್ಥವಿಲ್ಲದ ಕಾರ್ಯಕ್ರಮ ಇದರಿಂದ ಸಾಮಾನ್ಯ ಜನರಿಗೆ ಯಾವುದೇ ಅನುಕೂಲವಿಲ್ಲ. ಇದರ ಬದಲು ಕನ್ನಡದ ಕೋಟ್ಯಾಧಿಪತಿನಾದ್ರೂ ಮಾಡಿ ಬಡ ಪ್ರತಿಭಾವಂತ ವಿಧ್ಯಾರ್ಥಿಗಳಿಗಾದ್ರು ಸಹಾಯ ಆಗುತ್ತೆ. ಅದುಬಿಟ್ಟು ಇಂತಹ ಅನಾವಶ್ಯಕ ಕಾರ್ಯಕ್ರಮಗಳ ಅಗತ್ಯವಿಲ್ಲ. ಸೆಲಬ್ರೆಟಿಗಳು ವೈಯಕ್ತಿಕ ಜೀವನದಲ್ಲಿ ಹಾಗೂ ಅವರ ಮನೆಯಲ್ಲಿ ಹೇಗಿದ್ದರೆ ನಮಗೇನು ಅದನ್ನು ತಿಳಿದುಕೊಳ್ಳೋಕೆ ಒಂದು ಕಾರ್ಯಕ್ರಮ'' ಎಂದು ವೀಕ್ಷರೊಬ್ಬರ ಅಭಿಪ್ರಾಯ.

ಐಸ್ ಕ್ರೀಮ್, ಬಿಸ್ಕತ್ತುಗಳಿಗಾಗಿ 'ಬಿಗ್ ಬಾಸ್' ಮನೆಯಲ್ಲಿ ನಡೆದಿದೆ ಮಹಾಯುದ್ಧ.!

ಸೂಪರ್ ಆಗಿದೆ. ಆದ್ರೆ,,,,?

''ಸೂಪರ್ ಆಗಿದೆ. ಹುಡುಗಿಯರ ಉಡುಪುಗಳು ಮೈ ಮುಚ್ಚುವಂತಿರಲಿ. ಪ್ರೀತಿ ಪ್ರೇಮಕ್ಕೆ ಇದು ಸ್ಥಳವಲ್ಲ. ಇದು ಇಡೀ ಕುಟುಂಬ ಸಮೇತ ನೋಡುವ ಕಾರ್ಯಕ್ರಮ. ಮೈ ಮುಟ್ಟಿ ಮಾತನಾಡಿಸದೆ ಇದ್ದರೆ ಇನ್ನೂ ಹೆಚ್ಚು ಖುಷಿ ಹಾಗೂ ಸೊಗಸು'' ಎಂದು ಬಿಗ್ ಬಾಸ್ ಪ್ರಿಯರು ತಿಳಿಸಿದ್ದಾರೆ.

ಮತ್ತೆ ರೊಚ್ಚಿಗೆದ್ದು ಏಕವಚನ ಬಳಸಿದ ಜಗನ್.! ಇದು ಸೀಕ್ರೆಟ್ ಟಾಸ್ಕ್.?

ಒಳ್ಳೆಯ ಆಟ ಆಡಿಸಿ..

ಫ್ಯಾಮಿಲಿ ಕೂತು ನೋಡುವ ಕಾರ್ಯಕ್ರಮ ಇದು. ಮೊದಲು ಒಳ್ಳೆಯ ಯಾವುದಾದರೂ ಆಟ ಆಡಿಸಿ ಎಂದು ಜನ ಕೇಳುತ್ತಿದ್ದಾರೆ.

ಸಂದರ್ಶನ : ಕೃಷಿ ಬಿಚ್ಚಿಟ್ಟ 'ಬಿಗ್ ಬಾಸ್' ಕುತೂಹಲಕಾರಿ ವಿಷಯಗಳು

ಸಮಾಜಕ್ಕೇನು ಸಂದೇಶ?

''ಫ್ಯಾಮಿಲಿ ಶೋ ಬದಲು ವಯಸ್ಕರಿಗೆ ಮಾತ್ರ ಆಗಿದೆ. ಚಡ್ಡಿಗಳು ಹಾಕ್ಕೊಂಡು, ತಬ್ಬಿಕೊಳ್ಳುವುದು, ಕಿಸ್ ಮಾಡುವುದು. ಇದರಿಂದ ಸಮಾಜಕ್ಕೇನು ಸಂದೇಶ'' ಎಂದು ಕೇಳುತ್ತಿದ್ದಾರೆ.

ವಾರಾಂತ್ಯದಲ್ಲಿ ಮಾತ್ರ ನೋಡುತ್ತೇವೆ

ಇನ್ನು ಕೆಲವರು ಬಿಗ್ ಬಾಸ್ ಕಾರ್ಯಕ್ರಮವನ್ನ ಕೇವಲ ವೀಕೆಂಡ್ ನಲ್ಲಿ ಮಾತ್ರ ನೋಡುತ್ತಿದ್ದಾರಂತೆ.

'ಬಿಗ್ ಬಾಸ್' ಮನೆಯಲ್ಲಿ ಇದಕ್ಕಿದ್ದಂತೆ ಟಾರ್ಗೆಟ್ ಆದ ಶ್ರುತಿ ಪ್ರಕಾಶ್.!

ತಿನ್ನೋಕೆ ಬಂದಿದ್ದಾರೆ

''ಬಿಗ್ ಬಾಸ್ ಗೆ ಇವರೆಲ್ಲಾ ತಿನ್ನೋಕೆ ಬಂದಿದ್ದಾರೆ ಅನಿಸುತ್ತಿದೆ. ಚಾನಲ್ ಗೆ ಸಮಯ ವ್ಯರ್ಥ'' ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.

ಜನರಲ್ ನಾಲೆಡ್ಜ್ ಇಲ್ಲ

''ಗಣರಾಜ್ಯ ಯಾವಾಗ ಅಂತ ಗೊತ್ತಿಲ್ಲ, ಕನ್ನಡದಲ್ಲಿ ಎಷ್ಟು ವರ್ಣ ಮಾಲೆ ಇದೆ ಅಂತ ಗೊತ್ತಿಲ್ಲ. ಇಸ್ರೋ ಪೂರ್ತಿ ಅರ್ಥ ಗೊತ್ತಿಲ್ಲ. ಎಷ್ಟು ರಾಜ್ಯ, ಜಿಲ್ಲೆಗಳಿದೆ ಎಂದು ಗೊತ್ತಿಲ್ಲ. ಫಸ್ಟ್ ಇವರಿಗೆ ಜ್ಞಾನ ಕೊಡಿಸಿ'' ಬಿಗ್ ಬಾಸ್ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೋಡಲ್ಲ ಎನ್ನುವರು ಇದ್ದಾರೆ

ಶೋ ಬಂದ ಮೇಲೆ ಈ ಚಾನಲ್ ನೋಡುತ್ತಿಲ್ಲ, ಕಾರ್ಯಕ್ರಮ ನೋಡಿ ಸಮಯ ಹಾಳು ಮಾಡಿಕೊಳ್ಳುವುದಿಲ್ಲ ಎಂದು ಹೇಳುವವರು ಕೂಡ ಇದ್ದಾರೆ.

ಅದೃಷ್ಟ ಅಂದ್ರೆ ಇದು.! ಏನ್ ಗುರು ಚಂದನ್ ಶೆಟ್ಟಿ ಲಕ್ಕು.!

English summary
One India Kannada FaceBook page conduct the poll about Bigg Boss Kannada 5. here is the Comments About Bigg boss kannada 5. ಒನ್ ಇಂಡಿಯಾ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಬಿಗ್ ಬಾಸ್ ಕನ್ನಡ 5 ಕುರಿತು POLL ಅಯೋಜಿಸಲಾಗಿತ್ತು. ಈ POLL ನಲ್ಲಿ ಬಿಗ್ ಬಾಸ್ ಬಗ್ಗೆ ಮಿಶ್ರಪ್ರತಿಕ್ರಿಯೆ ಬಂದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada