For Quick Alerts
  ALLOW NOTIFICATIONS  
  For Daily Alerts

  ಅವಕಾಶ ಸಿಕ್ಕಿಲ್ಲ, ಅದೃಷ್ಟನೂ ಇಲ್ಲ: 'ಕಾಮನ್‌ಮ್ಯಾನ್‌'ಗೆ ಬಿಗ್‌ಬಾಸ್‌ನಿಂದ ಸಿಕ್ಕಿದ್ದೇನು?

  |

  ರಿಯಾಲಿಟಿ ಶೋಗಳಿಂದ ಖ್ಯಾತಿ ಮತ್ತು ಅದೃಷ್ಟ ಖುಲಾಯಿಸುತ್ತೆ. ಈ ಹಿಂದೆ ಟಿವಿ ರಿಯಾಲಿಟಿ ಶೋಗಳಿಂದ ಖ್ಯಾತಿನೂ ಪಡೆದಿರುವವರು ಇದ್ದಾರೆ, ಅದೃಷ್ಟನೂ ಒಲಿಸಿಕೊಂಡವರು ಇದ್ದಾರೆ. ಆದ್ರೆ, ಇತ್ತೀಚಿನ ರಿಯಾಲಿಟಿ ಶೋಗಳಲ್ಲಿ ಇದು ಅಷ್ಟಾಗಿ ಪರಿಣಾಮಕಾರಿಯಾಗುತ್ತಿಲ್ಲ. ವಿಶೇಷವಾಗಿ ಬಿಗ್ ಬಾಸ್ ರಿಯಾಲಿಟಿ ಶೋ.

  ಸೆಲೆಬ್ರಿಟಿಗಳಾಗಿ ಬಿಗ್ ಬಾಸ್ ಪ್ರವೇಶ ಮಾಡುವವರು ಮನೆಯಿಂದ ಹೊರಹೋಗಬೇಕಾದರೂ ಸೆಲೆಬ್ರಿಟಿಯಾಗಿಯೇ ಹೊಗುತ್ತಾರೆ. ಜನಸಾಮಾನ್ಯರಾಗಿ ದೊಡ್ಮನೆಗೆ ಕಾಲಿಡುವ ಜನರು ಹೋಗುವಾಗ ಸೆಲೆಬ್ರಿಟಿಯಾಗಿ ಹೋಗಬೇಕು ಎಂಬ ಆಸೆಯಿಂದ ಬರ್ತಾರೆ. ಸೆಲೆಬ್ರಿಟಿ ಫೀಲ್‌ನಲ್ಲಿ ಹೊರಬಂದರೂ ಅದು ಕೆಲವೇ ದಿನಕ್ಕೆ ಸೀಮಿತವಾಗಿರುತ್ತದೆ.

  ಬಿಗ್ ಬಾಸ್‌ ಶೋಗೆ ಹೋಗಿ ಬಂದ ಈ ಸ್ಪರ್ಧಿಗಳನ್ನು ಮರೆತುಬಿಟ್ಟಿರಾ?

  ಬಿಗ್ ಬಾಸ್‌ಗೆ ಹೋದ್ರೆ ನನ್ನ ಲೈಫ್ ಬದಲಾಗುತ್ತೆ. ಸಿನಿಮಾನೋ, ಧಾರಾವಾಹಿನೋ ಅಥವಾ ಟಿವಿ ಶೋಗಳಲ್ಲಿಯೋ ಒಂದು ಅವಕಾಶ ಸಿಗುತ್ತೆ. ಅಲ್ಲಿಂದ ಸೆಲೆಬ್ರಿಟಿ ಆಗಬಹುದು ಎಂದು ಆಸೆಯಿಂದಲೇ ಪ್ರಯತ್ನ ಪಡೋರು ಹೆಚ್ಚು. ಹೊಸ ಆವೃತ್ತಿ ಆರಂಭ ಎನ್ನುವ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಂತೆ, ಮುಗಿಬೀಳುವ ಜನಸಾಮಾನ್ಯರು ''ಸರ್ ನನಗೊಂದು ಅವಕಾಶ ಕೊಡಿ, ನನ್ನಲ್ಲಿ ಪ್ರತಿಭೆ ಇದೆ, ನಾನು ಮಾಡಿದ್ದೇನೆ, ಇದು ಮಾಡಿದ್ದೇನೆ'' ಎಂದು ಅಂಗಲಾಚುವ ಕಾಮೆಂಟ್‌ಗಳು ಕಣ್ಣಿಗೆ ಬೀಳುತ್ತದೆ.

  ಇದಕ್ಕೆ ಕಾರಣ ಬಿಗ್ ಬಾಸ್‌ ಕಾರ್ಯಕ್ರಮದಿಂದ ಜೀವನ ಬದಲಾಗುತ್ತೆ ಎಂಬ ನಂಬಿಕೆ. ಆದರೆ, ಜನಸಾಮಾನ್ಯರ ಪಾಲಿಗೆ ಬಿಗ್ ಬಾಸ್ ದೂರದಲ್ಲಿ ಕಾಣುವ ಬೆಟ್ಟ. ಏಕಂದ್ರೆ, ಈ ಹಿಂದೆ ಬಿಗ್ ಬಾಸ್‌ ಮನೆಗೆ ಬಂದು ಹೋದ ಕಾಮನ್ ಮ್ಯಾನ್‌ಗಳ ಪೈಕಿ ಯಾರೊಬ್ಬರು ದೊಡ್ಡ ಸಕ್ಸಸ್ ಕಂಡಿರುವ ಉದಾಹರಣೆಯೇ ಇಲ್ಲ.

  ಬಿಗ್‌ಬಾಸ್ ಪ್ರೋಮೊ: ಸುದೀಪ್‌ಗೆ ಬಿಡದೇ ಕಾಡುತ್ತಿದೆ ಎಂಟರ ನಂಟು

  ಪ್ರಥಮ್ ವಿಷ್ಯದಲ್ಲಿ ಹಾಗೇನು ಆಗಿಲ್ಲ ಅಂತ ಕೇಳಬಹುದು? ಪ್ರಥಮ್ ಕಾಮನ್ ಮ್ಯಾನ್ ಅಲ್ಲ. ಅದಾಗಲೇ ಸಿನಿಮಾ ನಿರ್ದೇಶಿಸುತ್ತಿದ್ದರು. ಚಿತ್ರರಂಗದಲ್ಲಿ ಒಡನಾಟವಿತ್ತು, ಸ್ನೇಹಿತರಿದ್ದರು. ಪ್ರಥಮ್‌ಗೆ ಖ್ಯಾತಿ ಬೇಕಿತ್ತು. ಬಿಗ್ ಬಾಸ್‌ನಿಂದ ಅದನ್ನು ಪಡೆದುಕೊಂಡರು.

  ಸೇಲ್ಸ್‌ಮ್ಯಾನ್ ದಿವಾಕರ್ ಎಲ್ಲೋದ್ರು? ಬಿಗ್ ಬಾಸ್ ಐದನೇ ಆವೃತ್ತಿಯಲ್ಲಿ ದಿವಾಕರ್ ರನ್ನರ್ ಅಪ್ ಆದರು. ಅಲ್ಲಿಂದ ಹೊರಬಂದ ಮೇಲೆ 'ರೇಸ್' ಎಂಬ ಸಿನಿಮಾನೂ ಮಾಡಿದರು. 'ಗುಲಾಲ್' ಎಂಬ ಚಿತ್ರವನ್ನು ಆರಂಭಿಸಿದರು. ಇನ್ನು ಗೆಲುವಿನ ಖುಷಿ ಕಂಡಿಲ್ಲ.

  ಸಮೀರಾಚಾರ್ಯ, ಜಯ ಶ್ರೀನಿವಾಸನ್, ಬಸ್ ಕಂಡಕ್ಟರ್ ಆನಂದ್ ಮಾಲಗತ್ತಿ, ಸಾಫ್ಟ್‌ವೇರ್ ರೀಮಾ ದಾಸ್, ಕ್ರಿಕೆಟರ್ ರಕ್ಷಿತಾ ರೈ, ರಿಯಾಜ್, ಎಂಜೆ ರಾಕೇಶ್ ಎಲ್ಲರೂ ತಮ್ಮ ವೃತ್ತಿ ಮುಂದುವರಿಸಿದರು. 'ಮಾರ್ಡನ್ ರೈತ' ಎಂದು ಗುರುತಿಸಿಕೊಂಡಿದ್ದ ಶಶಿ ಕುಮಾರ್ ಪ್ರತಿಭಟನೆ, ಚಳವಳಿ ಹಾಗೂ ಸೆಲೆಬ್ರಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾ ಸ್ಟಾರ್ ನಿವೇದಿತಾ ದಾಂಪತ್ಯ ಜೀವನದಲ್ಲಿ ಬ್ಯುಸಿ ಆದರು.

  ಒಂದು ಆವೃತ್ತಿ ಬಿಟ್ಟರೆ ಕಾಮನ್‌ಮ್ಯಾನ್ ಎಂಬ ಟ್ಯಾಗ್ ಬಿಗ್ ಬಾಸ್‌ಗೂ ಉಪಯೋಗ ಆಗಿಲ್ಲ. ಹಾಗಾಗಿ, ನಂತರದ ಆವೃತ್ತಿಗಳಲ್ಲಿ ಮಿನಿ ಸೆಲೆಬ್ರಿಟಿಗಳನ್ನೇ ಬಿಗ್ ಮನೆ ಆಯ್ಕೆ ಮಾಡಿದ್ದರು. ಸದ್ಯದ ಮಾಹಿತಿ ಪ್ರಕಾರ, ಏಂಟನೇ ಆವೃತ್ತಿಯಲ್ಲಿ ಜನಸಾಮಾನ್ಯರಿಗೆ ಅವಕಾಶ ಕೊಡುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

  ಆದರೂ, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆದ ಅಥವಾ ವಿವಾದಗಳನ್ನು ಉಂಟು ಮಾಡಿದ ಟಿಕ್‌ಟಾಕ್ ಸ್ಟಾರ್ಸ್‌ಗೆ ಆಫರ್ ಬಂದರೂ ಬರಹುದು.

  English summary
  Common Man Contestants in Bigg Boss Kannada Are Not Successful?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X