For Quick Alerts
ALLOW NOTIFICATIONS  
For Daily Alerts

  ಬಿಗ್ ಬಾಸ್ ಮನೆಗೆ ಕುಶಾಲ್ ರೀ ಎಂಟ್ರಿ

  By ಜೇಮ್ಸ್ ಮಾರ್ಟಿನ್
  |

  ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿರುವ ಕುಶಾಲ್ ಮತ್ತೆ ಮನೆಗೆ ರೀ ಎಂಟ್ರಿ ಕೊಡುವುದು ಖಚಿತವಾಗಿದೆ. ಪ್ರೀತಿಯ ಗೆಳತಿ ಗೌಹರ್ ಜತೆ ಕುಶಾಲ್ ಮತ್ತೆ ಸಮಯ ಕಳೆಯಲು ಅವಕಾಶ ಸಿಗಲಿದೆ. ನಿನ್ನೆ ದಿನ ಗೌಹರ್ ತನ್ನ ಆಪ್ತ ವಸ್ತುಗಳನ್ನು ಕಳೆದುಕೊಂಡು ಗೋಳಿಟ್ಟಿದ್ದಳು ಇದಕ್ಕೆ ಪ್ರತಿಯಾಗಿ ಅಚ್ಚರಿ ರೂಪದಲ್ಲಿ ಕುಶಾಲ್ ಎಂಟ್ರಿಯಾಗಲಿದ್ದಾನೆ ಎಂದು ತಿಳಿದು ಬಂದಿದೆ.

  ಸಿನೀಮಿಯ ಮಾದರಿಯಲ್ಲಿ ಕುಶಾಲ್ ಹಾಗೂ ಗೌಹರ್ ಇಬ್ಬರು ಮನೆಯಿಂದ ಹೊರಬಿದ್ದಿದ್ದರು. ಕುಶಾಲ್ ಮಾಜಿ ಗೆಳತಿ ಕ್ಯಾಂಡಿ ಬ್ರಾರ್ ಇರುವ ತನಕ ಕುಶಾಲ್ ಮನೆಗೆ ಮತ್ತೆ ಪ್ರವೇಶಿಸುವುದು ಅಸಾಧ್ಯ ಎನ್ನಲಾಗಿತ್ತು. ಅದಲ್ಲದೆ, ಸಲ್ಮಾನ್ ಖಾನ್ ಕೂಡಾ ನನಗೆ ಸ್ಸಾರಿ ಎಂದಿದ್ದಾನೆ ಎಂದು ಕುಶಾಲ್ ಹೊರಗಡೆ ಹೇಳಿಕೊಂಡು ತಿರುಗಾಡುತ್ತಿದ್ದ ಇದು ಆತನ ರೀ ಎಂಟ್ರಿಗೆ ವಿಳಂಬಗೊಳಿಸಿತ್ತು.

  ಕುಶಾಲ್ ರೀ ಎಂಟ್ರಿ ಬಗ್ಗೆ ಬಿಗ್ ಬಾಸ್ ಯಾವುದೇ ಸುಳಿವು ನೀಡಿಲ್ಲ. ಕುಶಾಲ್ ಪುನರ್ ಪ್ರವೇಶದ ಬಗ್ಗೆ ವಿಜೆ ಆಂಡಿ, ತನೀಶಾ, ಅರ್ಮಾನ್ ನಿರಾಸಕ್ತಿ ತೋರಿದ್ದರು. ನಾನು ಮನೆಯಲ್ಲಿ ಇರಲಾರೆ ಎಂದು ತನೀಶಾ ಘೋಷಿಸಿದ್ದಳು.

  ಕುಶಾಲ್ ಹಾಗೂ ಗೌಹರ್ ಪ್ರೇಮ್ ಕಹಾನಿಗೆ ಟ್ವಿಸ್ಟ್ ಕೊಡಲು ಮನೆಹೊಕ್ಕಿದ್ದ ಕ್ಯಾಂಡಿ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲಳಾಗಿ ಮನೆಯಿಂದ ಹೊರ ನಡೆದಿದ್ದಾಳೆ.ನಿರೂಪಕ ಸಲ್ಮಾನ್ ಖಾನ್ ಕ್ಯಾಂಡಿ ಹೆಸರು ಹೇಳಿದಾಗ ಯಾರಿಗೂ ಅಷ್ಟಾಗಿ ಅಚ್ಚರಿ ಮೂಡಿರಲಿಲ್ಲ.

  ಕ್ಯಾಂಡಿ ಜತೆ ನಾಮಿನೇಟ್ ಆಗಿದ್ದ ಸಂಗ್ರಾಮ್ ಸಿಂಗ್, ಸೋಫಿಯಾ ಹಯಾತ್, ಏಜಾಜ್ ಖಾನ್ ಎಲಿಮಿನೇಷನ್ ನಿಂದ ಬಚಾವ್ ಆಗಿದ್ದರು. ನಂತರದ ವಾರದಲ್ಲಿ ಪ್ರತ್ಯೂಷಾ ಮನೆಯಿಂದ ಹೊರಕ್ಕೆ ಬರಬೇಕಾಯಿತು. ಮುಂದಿನ ವಾರ ಕುಶಾಲ್ ರೀ ಎಂಟ್ರಿ ಆಗುತ್ತದೆಯೇ? ಎಂಬ ಕುತೂಹಲ ಪ್ರೇಕ್ಷಕರಲ್ಲಿ ಬಿಗ್ ಬಾಸ್ ಉಳಿಸಿದ್ದಾರೆ.

  ಆಂಡಿಗೆ ಅಚ್ಚರಿ

  ಕಳ್ಳ ಪೊಲೀಸ್ ಟಾಸ್ಕ್ ನಲ್ಲಿ ಕಳ್ಳರದ್ದೇ ಮೇಲುಗೈ ಆಗಿತ್ತು. ಆದರೂ ಇಬ್ಬರಿಗೂ ಬಿಗ್ ಬಾಸ್ ಲಕ್ಸುರಿ ಬಜೆಟ್ ಹಂಚಿದರು. ವಿಜೆ ಆಂಡಿಗೆ ತನ್ನ ಸೋದರನ ದನಿ ಕೇಳುವ ಕಾತುರವನ್ನು ಬಿಗ್ ಬಾಸ್ ತಣಿಸಿದರು. ಈ ನಡುವೆ ಗೌಹರ್ ಕಾಫಿ ಮಗ್ ಬಿಗ್ ಬಾಸ್ ವಶಕ್ಕೆ ಹೋಗಿರುವುದು ಮನೆಯಲ್ಲಿ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದೆ.

  ಕುಶಾಲ ಮಾಜಿ ಗೆಳತಿ

  ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಏಜಾಜ್ ಜತೆ ಮನೆ ಹೊಕ್ಕಿದ್ದ ಕ್ಯಾಂಡಿ ಮನೆಯಲ್ಲಿ ಗ್ಲಾಮರ್ ಆಗಲಿ, ಜಗಳವಾಗಲಿ ಹುಟ್ಟು ಹಾಕಲಿಲ್ಲ. ಅಲ್ಲದೆ, ಕುಶಾಲ್ ಬಗ್ಗೆ ಯಾವುದೇ ಕಥೆ, ಗಾಸಿಪ್ ಹರಡಿಸಲಿಲ್ಲ. ಇದು ಪ್ರೇಕ್ಷಕರಿಗೂ ನಿರಾಶೆ ಮೂಡಿಸಿತು.

  ಕುಶಾಲ್ ದಿಲ್ ಖುಷ್

  ಮನೆಯಿಂದ ಹೊರ ಬಿದ್ದಿರುವ ಕುಶಾಲ್ ಥಂಡನ್ ನ ಮಾಜಿ ಗೆಳತಿಯಾಗಿರುವ ಕ್ಯಾಂಡಿ ಬ್ರಾರ್ ಹಳೆ ಪ್ರೇಮಕಥೆಯ ಬಗ್ಗೆ ಮಾತೇ ಆಡಲಿಲ್ಲ ಎಂಬುದರ ಬಗ್ಗೆ ಕುಶಾಲ್ ಗೂ ಅರಿವಿದೆ. ಜತೆಗೆ ಮನೆಯಲ್ಲಿ ಹಾಲಿ ಗೆಳತಿ ಗೌಹರ್ ರೀ ಎಂಟ್ರಿ ಪಡೆದುಕೊಂಡಿದ್ದು ಕ್ಯಾಂಡಿ ಬಾಯಿ ಮುಚ್ಚಿಸಿತ್ತು ಎನ್ನಬಹುದು.

  ಕುಶಾಲ್-ಗೌಹರ್ ಪ್ರೇಮ ಪ್ರಸಂಗ

  ಕುಶಾಲ್ ಮನೆಯಿಂದ ಅನಿರೀಕ್ಷಿತವಾಗಿ ಹೊರಬಿದ್ದಾಗ ಮನೆಯ ಇನ್ನೊಂದು ತುದಿಯಲ್ಲಿದ್ದ ಕ್ಯಾಂಡಿ ಎಲ್ಲವನ್ನು ನೋಡಿದ್ದಳು. ಮನೆಗೆ ಏಜಾಜ್ ಜತೆ ಎಂಟ್ರಿಕೊಟ್ಟ ಕ್ಯಾಂಡಿ ತನ್ನ ಹಳೆ ಲವ್ ಸ್ಟೋರಿ ಬಗ್ಗೆ ಮಾತನಾಡದೆ ನಿರಾಶೆ ಮೂಡಿಸಿದಳು. ಇದರ ಬದಲಿಗೆ ಕುಶಾಲ್-ಗೌಹರ್ ಪ್ರೇಮ ಪ್ರಸಂಗವೆ ಸೂಪರ್ ಎಂಬ ಅನಿಸಿಕೆ ಎಲ್ಲೆಡೆ ವ್ಯಕ್ತವಾಯಿತು

  ಕುಶಾಲ್ ಸಿಗಲೇ ಇಲ್ಲ

  ಕುಶಾಲ್ ಮನೆಯಲ್ಲಿದ್ದಾಗಲೇ ಕ್ಯಾಂಡಿಯನ್ನು ಮನೆಗೆ ಬಿಡುವುದು ಬಿಗ್ ಬಾಸ್ ಉದ್ದೇಶವಾಗಿತ್ತು, ಆದರೆ, ಕ್ಯಾಂಡಿಗೆ ಕುಶಾಲ್ ಎದುರುಗೊಳ್ಳುವ ಅವಕಾಶವೇ ಸಿಗಲಿಲ್ಲ. ಕುಶಾಲ್ ಹಾಗೂ ಗೌಹರ್ ಮನೆ ಬಿಟ್ಟು ಹೊರಕ್ಕೆ ಹೊರಟ್ಟಿದ್ದರು

  ಕುಶಾಲ್ ಹೊರಕ್ಕೆ

  ಕ್ಯಾಂಡಿ ಎಂಟ್ರಿಗೂ ಮುನ್ನ ಆಂಡಿ ಮೇಲೆ ಕೈ ಮಾಡಿದ ಕುಶಾಲ್ ವರ್ತನೆಯನ್ನು ಎಲ್ಲರೂ ಖಂಡಿಸಿದರೆ ಗೌಹರ್ ಸಮರ್ಥಿಸಿದ್ದಲ್ಲದೆ, ಕುಶಾಲ್ ಜತೆ ಮನೆ ಬಿಟ್ಟು ಹೊರಕ್ಕೆ ನಡೆದಳು

  ಕ್ಯಾಂಡಿ ಎಂಟ್ರಿ ಕಾರಣವೇ

  ಗೌಹರ್ ಜತೆ ಪ್ರಣಯ ಸಂಬಂಧ ಬೆಳೆಸಿಕೊಂಡಿದ್ದ ಕುಶಾಲ್ ಗೆ ಕ್ಯಾಂಡಿಯನ್ನು ಎದುರುಗೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ಮನೆಯಿಂದ ಹೊರಕ್ಕೆ ನಡೆದ ಎನ್ನಲಾಗಿದೆ.

  ಕುಶಾಲ್ ರೀ ಎಂಟ್ರಿ

  ಕುಶಾಲ್ ಮತ್ತೆ ಮನೆಗೆ ಬಂದರೆ ಏನು ಆಗುತ್ತೋ ನನಗೆ ಗೊತ್ತಿಲ್ಲ ಎಂದು ಅರ್ಮಾನ್ ಹೇಳಿದ್ದಾನೆ. ನನ್ನ ಬಳಿ ಕುಶಾಲ್ ಕ್ಷಮೆಯಾಚಿಸಿಲ್ಲ. ಮನೆಗೆ ಬಂದರೆ ನಾನಿರುವುದಿಲ್ಲ ಎಂದು ತನೀಶಾ ನೇರವಾಗಿ ಹೇಳಿದ್ದಾಳೆ.

  ಸೋಫಿಯಾ ಎಲ್ಲಿ

  ಮನೆಯ ರೀತಿ ರಿವಾಜು ಅರ್ಥ ಮಾಡಿಕೊಂಡಿರುವ ಸೋಫಿಯಾ ಹಾಗೂ ಎಲ್ಲಿ ಈಗೀಗ ಮಾತಿಗೆ ಮಾತು ಬೆಳೆಸುವುದನ್ನು ಕಲಿಯುತ್ತಿದ್ದಾರೆ. ನಿಮ್ಮನ್ನು ಇಲ್ಲಿಗೆ ಕಳಿಸಿದ್ದು ಇಬ್ಬರ ನಡುವೆ ಜಗಳ ಆಡಿಸುವುದ್ದಕಾ? ಎಂದು ಸೋಫಿಯಾಗೆ ಅರ್ಮಾನ್ ನೇರವಾಗಿ ಕೇಳಿದ್ದಾನೆ. ಕುಶಾಲ್ ಎಂಟ್ರಿಯಾದರೆ ಸೋಫಿಯಾ, ಆಂಡಿ, ತನೀಶಾ ಮೂವರ ಸ್ಥಾನಗಳಲ್ಲಿ ಬದಲಾವಣೆ ಸಾಧ್ಯತೆ ನಿಚ್ಚಳ

  English summary
  Bigg Boss season 7's famous angry young man Kushal Tandon is confirmed to be retuning back to the show in tomorrow's episode. Kushal Tandon had left the show when he hurt a fellow contestant, VJ Andy. Kushal and Gauhar who made a very filmy exit was followed by Gauhar's re-entry, but Kushal's issue was left hanging.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more