»   » ಮನರಂಜನೆಯ 'ಕನೆಕ್ಷನ್' ಕೊಡಲು ಬಂದ್ರು ಅರುಣ್ ಸಾಗರ್.!

ಮನರಂಜನೆಯ 'ಕನೆಕ್ಷನ್' ಕೊಡಲು ಬಂದ್ರು ಅರುಣ್ ಸಾಗರ್.!

Posted By:
Subscribe to Filmibeat Kannada

ನಟ ಅರುಣ್ ಸಾಗರ್ ಎಷ್ಟು ಎಂಟರ್ ಟೇನಿಂಗ್ ಎನ್ನುವುದಕ್ಕೆ 'ಬಿಗ್ ಬಾಸ್ ಕನ್ನಡ-1' ಸೂಪರ್ ಹಿಟ್ ಆಗಿದ್ದಕ್ಕಿಂತ ಬೇರೆ ಸಾಕ್ಷಿ ಬೇಕಾ.?

'ಬಿಗ್ ಬಾಸ್' ಮನೆಯಿಂದ ಹೊರಬಂದ ಮೇಲೆ 'ಸಿಂಪಲ್ಲಾಗೊಂದ್ ಸಿಂಗಿಂಗ್ ಶೋ', 'ಬೆಂಗ್ಳೂರ್ ಬೆಣ್ಣೆ ದೋಸೆ' ಸೇರಿದಂತೆ ಅನೇಕ ರಿಯಾಲಿಟಿ ಶೋಗಳ ನಿರೂಪಣೆ ಮಾಡುವ ಜೊತೆಗೆ ಸಿನಿಮಾಗಳಲ್ಲೂ ಅರುಣ್ ಸಾಗರ್ ಬಿಜಿಯಾದರು. [ಜೀ ಕನ್ನಡದಲ್ಲಿ ಅರುಣ್ ಸಾಗರ್ ಹೊಸ ರಿಯಾಲಿಟಿ ಶೋ]

ಕಿರುತೆರೆ ಮೂಲಕ ಕನ್ನಡ ವೀಕ್ಷಕರ ಮನೆ-ಮನ ತಲುಪಿರುವ ಅರುಣ್ ಸಾಗರ್ ಈಗ ಹೊಸ ರಿಯಾಲಿಟಿ ಶೋ ಮೂಲಕ ನಿಮ್ಮ ಜೊತೆ ಕನೆಕ್ಟ್ ಆಗಲಿದ್ದಾರೆ. ಮುಂದೆ ಓದಿ.....

ಯಾವುದು ಆ ರಿಯಾಲಿಟಿ ಶೋ.?

'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಮೂಡಿಬರುವ ಹೊಸ ರಿಯಾಲಿಟಿ ಶೋ 'ಕನೆಕ್ಷನ್'ಗೆ ಅರುಣ್ ಸಾಗರ್ ನಿರೂಪಕ. [ಜುಲೈ 25 ರಿಂದ ನಿಮ್ಮ 'ಸುವರ್ಣ' ವಾಹಿನಿ ಹೊಸ ರೂಪದಲ್ಲಿ.!]

ಏನಿದು 'ಕನೆಕ್ಷನ್'?

ಪಕ್ಕಾ ಮನರಂಜನಾ ಶೋ 'ಕನೆಕ್ಷನ್' ಕಾನ್ಸೆಪ್ಟ್ ಇತರೆ ಶೋಗಳಿಗಿಂತ ವಿಭಿನ್ನವಾಗಿದೆ. ಡ್ಯಾನ್ಸ್, ಡ್ರಾಮಾ ಬಿಟ್ಟು ಚಿತ್ರಗಳಿಂದ ಆಡುವ ಆಟವೇ ಈ ಶೋ.

ತರ್ಲೆ ಯೋಚನೆ ಇರಬೇಕು.!

ಈ ಶೋನಲ್ಲಿ ಭಾಗವಹಿಸುವವರ ಯೋಚನೆ ಸಿಕ್ಕಾಪಟ್ಟೆ ತರ್ಲೆ ಆಗಿರ್ಬೇಕು. ಕೊಟ್ಟಿರುವ ಚಿತ್ರಗಳನ್ನು ವಿಭಿನ್ನವಾಗಿ ಯೋಚಿಸಿ ಕನೆಕ್ಟ್ ಮಾಡುವ ಟ್ಯಾಲೆಂಟ್ ಇರಬೇಕು.

ಸ್ಪರ್ಧಿಗಳು ಯಾರ್ಯಾರು.?

ಕಿರುತೆರೆ ಹಾಗೂ ಬೆಳ್ಳಿತೆರೆಯ ಸ್ಟಾರ್ ಗಳು 'ಕನೆಕ್ಷನ್'ನಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಸಂಚಿಕೆಯಲ್ಲಿ ಮೂರು ತಂಡಗಳು ಸ್ಪರ್ಧಿಸಲಿದ್ದು, ಒಂದು ತಂಡದಲ್ಲಿ ಇಬ್ಬರು ಇರಲಿದ್ದಾರೆ.

ಮನರಂಜನೆಯ ಮಹಾಪೂರ

ಪ್ರತಿ ಸಂಚಿಕೆಯಲ್ಲಿ ಆರು ಸುತ್ತುಗಳಿದ್ದು, ಒಂದಕ್ಕಿಂತ ಒಂದು ಮಜವಾಗಿರಲಿದೆ. ವೀಕ್ಷಕರನ್ನು ಈ ಶೋ ಮೋಜಿನ ಅಮಲಿಗೆ ಕರೆದುಕೊಂಡು ಹೋಗುತ್ತದೆ.

ಪ್ರಸಾರ ಯಾವಾಗ?

ಜನಮನಗೆದ್ದಿರುವ ಅರುಣ್ ಸಾಗರ್ ಈ ಶೋ ನಿರೂಪಕ. ಜುಲೈ 31 ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Popular Kannada Channel Star Suvarna has come up with a new non-fiction reality show called 'Connexion'. The format of the show is completely different from any other non-fiction show in Kannada Television. Kannada Actor Arun Sagar will host this show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada