Don't Miss!
- News
Surat-Chennai Expressway: ಕಲಬುರಗಿಯಿಂದ ಆರಂಭವಾಗಲಿದೆ ಸೂರತ್-ಚೆನೈ ಆರು ಪಥಗಳ ಹೆದ್ದಾರಿ, ಮಾಹಿತಿ ಇಲ್ಲಿದೆ
- Sports
WFI ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ 7 ಸದಸ್ಯರ ಸಮಿತಿ ರಚನೆ
- Automobiles
ಟಾಟಾ ನೆಕ್ಸಾನ್ ಪ್ರತಿಸ್ಪರ್ಧಿಯಾದ ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್ಯುವಿಯ ವಿಶೇಷತೆಗಳು
- Finance
ಉದ್ಯೋಗ ಕಡಿತದ ನಡುವೆ ಸಿಹಿಸುದ್ದಿ: ಭಾರತ್ಪೇಯಲ್ಲಿ ಉದ್ಯೋಗಾವಕಾಶ
- Technology
ಟ್ರಾಯ್ನ ಈ ಉಪಯುಕ್ತ ಸೇವೆಗೆ ಜಿಯೋ ಮತ್ತು ಏರ್ಟೆಲ್ನಿಂದ ಭಾರಿ ವಿರೋಧ! ಕಾರಣ ಏನು?
- Lifestyle
ಸತ್ತು ಸ್ವರ್ಗಕ್ಕೆ ಹೋಗಿ ಮತ್ತೆ ಬದುಕಿ ಬಂದ ಪೆರ್ರಿ ಎಂಬ ವ್ಯಕ್ತಿಯ ಕತೆ, ಅಚ್ಚರಿಯಾದರೂ ಇದು ಸತ್ಯ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಟಾರ್ ನಿರೂಪಕರಿಗೆ ಸಖತ್ 'ಕನೆಕ್ಷನ್' ಕೊಟ್ಟ ಅರುಣ್ ಸಾಗರ್
ಪ್ರತಿ ವಾರ ವಿಶೇಷ ವ್ಯಕ್ತಿಗಳಿಂದ ಕೂಡಿದ ಈ 'ಕನೆಕ್ಷನ್' ಶೋ ಈ ವಾರ ಕೂಡ ಖ್ಯಾತ ಕನ್ನಡ ರಿಯಾಲಿಟಿ ಶೋಗಳ ನಿರೂಪಕರಿಂದ ಕೂಡಿದೆ. ಪುಟಾಣಿ ಗಾನ ಕೋಗಿಲೆಗಳು ಶನಿವಾರದ ಸಂಚಿಕೆಯಲ್ಲಿ ಮಿಂಚಿದರೆ, ಭಾನುವಾರದ ಸಂಚಿಕೆಯಲ್ಲಿ ನಿರೂಪಕರ ಮಧ್ಯೆ ಈ ಆಟ ನಡೆಯಲಿದೆ.
ಕಿರುತೆರೆಯ ಶೋಗಳ ಸಾರಥಿಗಳು, ಮಾತಿನ ಮಲ್ಲರು, ಕಾಮಿಡಿ ಸರದಾರರು, ನಗಿಸೋ ಪಂಟ್ರು ಆದ ಸಂತೋಷ್, ರೆಹಮಾನ್, ಮಾಸ್ವರ್ ಆನಂದ್, ನಿರಂಜನ್ ಮತ್ತು ಪವನ್ ಈ ವಾರದ 'ಕನೆಕ್ಷನ್' ಶೋನ ಅತಿಥಿಗಳು.['ಕನೆಕ್ಷನ್'ನಲ್ಲಿ ಕನೆಕ್ಟ್ ಆದ ಗಾನ ಕೋಗಿಲೆಗಳು & ಕಿರುತೆರೆ ಹಕ್ಕಿಗಳು]
ಈ ವಾರದ ಸಂಚಿಕೆಯಲ್ಲಿ ರಿಯಲ್ ಶೋ ಸ್ಟಾರ್ ಗಳ ಬುದ್ದಿವಂತಿಕೆಯ ಆಟ 'ಕನೆಕ್ಷನ್'ನಲ್ಲಿ ನೋಡಬಹುದು. ಮುಂದೆ ಓದಿ....

ಶೋನಲ್ಲಿ ಬೆವರಿಳಿಸಿದ ನಿರೂಪಕರು
ಸ್ಪರ್ಧಾರ್ಥಿಗಳಿಗೆ ಆಡಿಸಿ ನೀರಿಳಿಸುತ್ತಿದ್ದ, ಈ ನಿರೂಪಕರಿಗೆ 'ಕನೆಕ್ಷನ್' ಶೋನಲ್ಲಿ ಅರುಣ್ ಸಾಗರ್ ಅವರು ಸಖತ್ ಬೆವರಿಳಿಸಿದ್ದಾರೆ. 'ಸ್ಪರ್ಧೆಯಲ್ಲಿ ಎಲ್ಲಾರೂ ಗೆಲ್ಲೋಕೆ ಆಗಲ್ಲ, ಎಲ್ಲಾರೂ ಗೆದ್ದರೆ ಅದು ಸ್ಪರ್ಧೆಯಾಗಲ್ಲ' ಅಂತ ಹೇಳುತ್ತಿದ್ದ ಇವರೆಲ್ಲಾ, ಬರೀ ಆ ಡೈಲಾಗ್ ಹೇಳೋಕೆ ಮಾತ್ರ ಸೀಮಿತ ಆದ್ರು.['ಸೂಪರ್ ಸ್ಟಾರ್' ಜೆಕೆ ಮತ್ತು ಪುಟಾಣಿಗಳ 'ಕನೆಕ್ಷನ್' ಸ್ಪೆಷಲ್]

ವೀಕ್ಷಕರಿಗೆ ಮನರಂಜನೆ ನೀಡಿದ ಶೋ ಆಂಕರ್ಸ್
ಎಲ್ಲರನ್ನು ಕಾಲು ಎಳೆದು ಮಜಾ ಕೊಡುತ್ತಿದ್ದ ಈ ಸ್ಟಾರ್ ನಿರೂಪಕರು, 'ಕನೆಕ್ಷನ್' ಶೋನಲ್ಲಿ ಮಾತ್ರ ಕಾಲ ಎಳೆಸಿಕೊಂಡು ಎಲ್ಲರನ್ನು ನಕ್ಕು ನಲಿಸಿದ್ದಾರೆ.['ಕನೆಕ್ಷನ್' ಶೋಗೆ ಬಂದು ಕಣ್ಣೀರು ಹಾಕಿದ ಹುಚ್ಚ ವೆಂಕಟ್]

ಜಬರ್ದಸ್ತ್ ಮನರಂಜನೆ
ಬೇಜಾನ್ ತರ್ಲೆ, ಅದಕ್ಕೂ ಮಿರಿದ ಕಾಮಿಡಿ, ಬುದ್ದಿವಂತಿಕೆಯ ಚಾತುರ್ಯ ಒಟ್ಟಿನಲ್ಲಿ ಜಬರ್ದಸ್ತ್ ಮನರಂಜನೆಯನ್ನು ಈ ವಾರದ 'ಕನೆಕ್ಷನ್' ಸಂಚಿಕೆಯಲ್ಲಿ ನೋಡಬಹುದು.[ಮನರಂಜನೆಯ 'ಕನೆಕ್ಷನ್' ಕೊಡಲು ಬಂದ್ರು ಅರುಣ್ ಸಾಗರ್.!]

ನಿರೂಪಕರ ಪ್ರತಿಭೆ ಅನಾವರಣ
ಮಾಸ್ಟರ್ ಆನಂದ್ ಅವರ ಮಿಮಿಕ್ರಿ, ಸಂತೋಷ್ ಅವರ ಡ್ಯಾನ್ಸ್, ಪವನ್ ಅವರ ನಾಟಕ, ಟಿವಿ9 ನಲ್ಲಿ ಖ್ಯಾತ ನಿರೂಪಕರಾದ ರೆಹಮಾನ್ ಅವರ ನ್ಯೂಸ್ ರೀಡಿಂಗ್, ಹೀಗೆ ಎಲ್ಲರೂ ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಿ, ಎಲ್ಲಾ ವೀಕ್ಷಕರನ್ನು ಹಾಸ್ಯ ಲೋಕಕ್ಕೆ ಕರೆದುಕೊಂಡು ಹೋಗಲಿದೆ.

ಇದೇ ವಾರ ಪ್ರಸಾರ
ಸಖತ್ ಕಚಗುಳಿ ಇಟ್ಟು ನಗಿಸೋ ಕಿಲಾಡಿಗಳ ಈ ವಿಶೇಷ ಎಪಿಸೋಡನ್ನು ಸಿಂಪಲ್ಲಾಗಿ ನೋಡಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿ. ನಕ್ಕು ನಲಿದುಬಿಡುವ ನಾನ್ ಸ್ಪಾಪ್ ಕಾಮಿಡಿಯ 'ಕನೆಕ್ಷನ್' ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಕ್ಕೆ ನಿಮ್ಮ ನೆಚ್ಚಿನ ಸ್ವಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.