»   » 'ಕನೆಕ್ಷನ್'ನಲ್ಲಿ ಕನೆಕ್ಟ್ ಆದ ಗಾನ ಕೋಗಿಲೆಗಳು & ಕಿರುತೆರೆ ಹಕ್ಕಿಗಳು

'ಕನೆಕ್ಷನ್'ನಲ್ಲಿ ಕನೆಕ್ಟ್ ಆದ ಗಾನ ಕೋಗಿಲೆಗಳು & ಕಿರುತೆರೆ ಹಕ್ಕಿಗಳು

Posted By:
Subscribe to Filmibeat Kannada

ಸಂಗೀತ ಅಂದರೆ ಮ್ಯಾಜಿಕ್, ಸಂಗೀತಕ್ಕೆ ಭಾಷೆ ಇಲ್ಲ ಎಂಬುದು ಮತ್ತೆ 'ಕನೆಕ್ಷನ್ ವೇದಿಕೆ'ಯಲ್ಲಿ ಸಾಬೀತಾಗಿದೆ. ಸುಮಧುರ ಕಂಠದಿಂದ ಸಂಗೀತ ಕ್ಷೇತ್ರದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ, ಅಪ್ಪಟ ಕನ್ನಡ ಗಾನ ಕೋಗಿಲೆಗಳು ಈ ವಾರ ಎಲ್ಲರನ್ನು ರಂಜಿಸಲಿದ್ದಾರೆ.

Rap ಸಾಂಗ್ ಗೆ ಪಕ್ಕ ಉದಾಹರಣೆ ಅಂದ್ರೆ ಬಿಜ್ಜು, ಸದ್ಯಕ್ಕೆ ಯುವ ಸಂಗೀತಗಾರನಾಗಿ ಮಿಂಚುತ್ತಾ ಇರೋ ಚಂದನ್ ಶೆಟ್ಟಿ, ಮತ್ತೊಬ್ಬ ಸಿಂಗರ್ ಅಲೋಕ್.['ಕನೆಕ್ಷನ್' ಶೋಗೆ ಬಂದು ಕಣ್ಣೀರು ಹಾಕಿದ ಹುಚ್ಚ ವೆಂಕಟ್]

ಇವರೆಲ್ಲಾ ಒಂಥರಾ ಟ್ರ್ಯಾಕ್ ಆದರೆ, 'ಹೆಣ್ಮಕ್ಳೇ ಸ್ವ್ರಾಂಗು ಗುರೂ' ಅನ್ನೋ ಹಾಗೆ ಕರೆಯೋಲೆಯ ಇಂಚರ, ಇಂದೂ ನಾಗರಾಜ್ ಮತ್ತು ಸಂಗೀತ ಅವರು ಆಟದ ಪೈಪೋಟಿಯ ಜೊತೆ-ಜೊತೆಗೆ ಸಂಗೀತ ಸುರಿಮಳೆಯನ್ನು ಕೂಡ ವೀಕ್ಷಕರಿಗಾಗಿ ಹರಿಸಿದ್ದಾರೆ. ಮುಂದೆ ಓದಿ....

ಹಾಡುಗಳ ಜೊತೆ ಮನರಂಜನೆ

Rap ಸಾಂಗ್, ಸಿನಿಮಾದ ಹಾಡು, ಶಾಸ್ತ್ರೀಯ ಗಾನ, ವೆಸ್ಟರ್ನ್ ಹಾಡುಗಳನ್ನು ಹಾಡುತ್ತಾ, ಚಿತ್ರಗಳ ಸಿಂಕ್ ಗೆ, ಸ್ವರ ಸೇರಿಸಿ ಸಂಗೀತ ಲೋಕಕ್ಕೆ ಕರೆದುಕೊಂಡು ಹೋಗಿದ್ದಾರೆ.[ಈ ವಾರದ ವಿಶೇಷ: 'ಮಹಾದೇವ'ನಿಂದ ಚಿತ್ರಾಸುರನ ವಧೆ]

ಸಂಗೀತದ ಜೊತೆ 'ಕನೆಕ್ಷನ್' ಆಟ

ವಿಭಿನ್ನ ಹಾಡುಗಳನ್ನು ತಮ್ಮದೇ ಶೈಲಿಯಲ್ಲಿ ಹಾಡಿ, ಎಲ್ಲಾ ವೀಕ್ಷಕರ ಮನಸ್ಸಿಗೆ ಮುದ ನೀಡುತ್ತಿದ್ದ ಗಾನಕೋಗಿಲೆಗಳು, ನಂತರ 'ಕನೆಕ್ಷನ್' ಆಟ ಆಡಿ ಎಲ್ಲರನ್ನು ನಕ್ಕು ನಲಿಸಿ ಈ ವಿಕೆಂಡ್ ಗೆ ವಿಭಿನ್ನ ಮನರಂಜನೆ ನೀಡಿದ್ದಾರೆ.[ಮನರಂಜನೆಯ 'ಕನೆಕ್ಷನ್' ಕೊಡಲು ಬಂದ್ರು ಅರುಣ್ ಸಾಗರ್.!]

ಸಂಗೀತ ದಿಗ್ಗಜರ ಜೊತೆ ಕಿರುತೆರೆ ಪ್ರತಿಭೆಗಳು

ಇನ್ನು ಸಂಗೀತ ದಿಗ್ಗಜರ ಜೊತೆಗೆ, ಕರ್ನಾಟಕ ಕಿರುತೆರೆಯ ಪ್ರಿಯರ ಮನಸ್ಸನ್ನು ಕದ್ದಿರೋ 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯ ಶ್ರಾವಣಿ ಮತ್ತು ಕೃತಿಕ, ಪಡ್ಡೆ ಹೈಕ್ಳನ್ನ ಟಿವಿ ಮುಂದೆ ಕೂರ್ಸಿರೋ 'ಜೀವನ ಚೈತ್ರ' ಧಾರಾವಾಹಿಯ ಜೀವನ್ ಮತ್ತು ರಶ್ಮಿ, ಕರ್ನಾಟಕದ ಗೃಹಿಣಿಯರಿಗೆ ಮಾದರಿಯಾಗಿ ಸಾಮಾಜಿಕ ಕಳಕಳಿಯುಳ್ಳ 'ಅಮ್ಮ' ಧಾರಾವಾಹಿಯ ದಿವ್ಯ ಮತ್ತು ಅಭಿಷೇಕ್ ಭಾಗವಹಿಸಿ ಮನರಂಜನೆ ನೀಡಿದ್ದಾರೆ.[ಪ್ರೀತಿ-ದ್ವೇಷಗಳ ಕೊಂಡಿ 'ಜಸ್ಟ್ ಮಾತ್ ಮಾತಲ್ಲಿ']

ಸೀರಿಯಲ್ ಸ್ಟಾರ್ ಗಳು 'ಕನೆಕ್ಷನ್' ನಲ್ಲಿ ಕನೆಕ್ಟ್

ಧಾರಾವಾಹಿ ಮೂಲಕ ಕನ್ನಡಿಗರನ್ನು ರಂಜಿಸುತ್ತಿದ್ದ ಸ್ವಾರ್ ಗಳು 'ಕನೆಕ್ಷನ್' ವೇದಿಕೆಯಲ್ಲಿ ಲಿಂಕ್ ಆಗಿ, ತಮ್ಮ ಮನದಾಳದ ಮಾತುಗಳನ್ನಾಡಿ, ಆಟದ ಜೊತೆಗೆ ಕುಣಿದು-ಕುಪ್ಪಳಿಸಿ ಮನರಂಜನೆ ನೀಡಿದ್ದಾರೆ. ಹೀಗಾಗಿ ಸಂಗೀತಗಾರರ ಮತ್ತು ನಟರ 'ಕನೆಕ್ಷನ್' ಯಾವ ರೀತಿ ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತದೆ ಎಂಬುದನ್ನು ಕಾದು ನೋಡ ಬೇಕಾಗಿದೆ.

ಯಾವಾಗ ಪ್ರಸಾರ

ಸಂಗೀತ ದಿಗ್ಗಜರಿಗೆ ಹಾಗೂ ಕಿರುತೆರೆ ಕಲಾವಿದರ ಜೊತೆ ನಟ ಅರುಣ್ ಸಾಗರ್ ಅವರು ಕೂಡ ಸಖತ್ ಎಂಜಾಯ್ ಮಾಡಿ, ಕಾರ್ಯಕ್ರಮದ ನಿರೂಪಕರಾಗಿ ಎಲ್ಲರನ್ನು ಆಟ ಆಡಿಸಿದ್ದಾರೆ. ಹಾಡು ಮತ್ತು ನಟನೆಯ 'ಕನೆಕ್ಷನ್' ಇದೇ ಶನಿವಾರ-ಭಾನುವಾರ ರಾತ್ರಿ 7.30ಕ್ಕೆ, ನಿಮ್ಮ ನೆಚ್ಚಿನ ಸ್ವಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Rap singer Chandan Shetty, Singer Indu Nagaraj, And Serial Stars Abhishek, Divya, Shravani is going to make a grand entry in this week’s 'Connexion'. Known for thease stars is going to unleash his hidden and unseen talent in front of the audiences. 'Connexion' will be on-air every Saturday and Sunday at 7:30 PM on Star Suvarna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada