For Quick Alerts
  ALLOW NOTIFICATIONS  
  For Daily Alerts

  ರಾಜವಂಶದ ನಟಿ ಮತ್ತು ಕುಟುಂಬಕ್ಕೆ ಕೊರೊನಾ ವೈರಸ್ ಪಾಸಿಟಿವ್

  |

  ಉತ್ತರಾಖಂಡದ ರಾಜವಂಶದ ನಟಿ, ಆಕೆಯ ಮಾವ ಮತ್ತು ಸಚಿವ ಸೇರಿದಂತೆ ಕುಟುಂಬದ ಐವರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಹಾಗೆಯೇ ರಾಜಮನೆತನದ ಅರಮನೆಯಲ್ಲಿ ಕೆಲಸ ಮಾಡುವ 17 ಸಿಬ್ಬಂದಿಯಲ್ಲಿಯೂ ಸೋಂಕು ಕಂಡುಬಂದಿದೆ.

  'ಯೇ ರಿಷ್ತಾ ಕ್ಯಾ ಕೆಹ್ಲತಾ ಹೈ' ಧಾರಾವಾಹಿಯ ಮೂಲಕ ನಟಿಯಾಗಿ ಗುರುತಿಸಿಕೊಂಡಿರುವ ಮೋಹೆನಾ ಕುಮಾರಿ ಸಿಂಗ್, ತಮ್ಮ ಕುಟುಂಬದ ಸದಸ್ಯರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ನೀಡಿದ್ದಾರೆ. ಕುಟುಂಬದ ಎಲ್ಲ ಸದಸ್ಯರೂ ಮೇ 31ರಂದು ರಿಷಿಕೇಶದ ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಮೋಹೆನಾ ಕುಮಾರಿ ಅವರ ಅತ್ತೆಯಲ್ಲಿ ಮೊದಲು ಜ್ವರ ಕಾಣಿಸಿಕೊಂಡಿತ್ತು. ಇದು ಸಾಮಾನ್ಯ ಜ್ವರ ಎಂದೇ ಭಾವಿಸಿದ್ದೆವು. ಆದರೂ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಕೊರೊನಾ ವೈರಸ್ ನೆಗೆಟಿವ್ ಎಂದು ವರದಿ ಬಂದಾಗ ನೆಮ್ಮದಿಯಿಂದ ಉಸಿರಾಡಿದ್ದೆವು ಎಂದು ಮೋಹೆನಾ ತಿಳಿಸಿದ್ದಾರೆ. ಮುಂದೆ ಓದಿ...

  ಕುಟುಂಬದ ಅನೇಕರಲ್ಲಿ ಪಾಸಿಟಿವ್

  ಕುಟುಂಬದ ಅನೇಕರಲ್ಲಿ ಪಾಸಿಟಿವ್

  'ವರದಿ ನೆಗೆಟಿವ್ ಬಂದಿದ್ದರಿಂದ ನಾವು ಹೆಚ್ಚು ತಲೆಕೆಡಿಸಿಕೊಳ್ಳದೆ ಅವರಿಗೆ ಮಾಮೂಲಿ ಆರೈಕೆ ಮಾಡಿದ್ದೆವು. ಆದರೆ ಅವರ ಜ್ವರ ಕಡಿಮೆಯಾಗದೆ ಇರುವುದನ್ನು ಗಮನಿಸಿದೆವು. ಕೂಡಲೇ ಪರೀಕ್ಷೆಗೆ ಒಳಗಾದೆವು. ಕೊರೊನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದೇ ಇದ್ದರೂ ನಮ್ಮ ಕುಟುಂಬದ ಅನೇಕರಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದೆ' ಎಂದಿದ್ದಾರೆ.

  ಗಂಭೀರ ಲಕ್ಷಣಗಳಿಲ್ಲ

  ಗಂಭೀರ ಲಕ್ಷಣಗಳಿಲ್ಲ

  'ಜಗತ್ತಿನ ಎಲ್ಲೆಡೆ ಕೊರೊನಾ ವೈರಸ್ ಸೋಂಕು ಇಲ್ಲದೆಯೂ ಅನೇಕ ಜನರು ಕಷ್ಟಪಡುತ್ತಿದ್ದಾರೆ. ನಮ್ಮ ಎಲ್ಲರಲ್ಲಿಯೂ ಈಗ ಕಾಣಿಸಿಕೊಳ್ಳುತ್ತಿರುವ ಲಕ್ಷಣಗಳು ಅಷ್ಟೇನೂ ತೀವ್ರವಾಗಿಲ್ಲ. ಇದರಿಂದಾಗಿಯೇ ಯಾರೂ ವೈರಸ್ ಕುರಿತು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ ಎನಿಸುತ್ತದೆ.

  ಜನ ಅವಕಾಶ ಬಳಸಿಕೊಳ್ಳುತ್ತಿದ್ದಾರೆ

  ಜನ ಅವಕಾಶ ಬಳಸಿಕೊಳ್ಳುತ್ತಿದ್ದಾರೆ

  'ನಮ್ಮ ಕುಟುಂಬದ ಬಗ್ಗೆ ಅಲ್ಲಿ ಇಲ್ಲಿ ನೆಗೆಟಿವ್ ಸುದ್ದಿಗಳು ಹರಿದಾಡುತ್ತಿವೆ. ಇದು ಬಹಳ ದುರದೃಷ್ಟಕರ. ಅದರಲ್ಲಿಯೂ ನನ್ನ ಅತ್ತೆ ಮಾವ ಅನೇಕ ಜನರಿಗೆ ಬಹಳ ಸಹಾಯ ಮಾಡಿದ್ದಾರೆ. ಈಗ ನಮಗೆ ಕೆಟ್ಟ ಹೆಸರು ತರಲು ಜನರಿಗೆ ಅವಕಾಶ ಸಿಕ್ಕಂತಾಗಿದೆ. ಆದರೆ ಏನೇ ಇರಲಿ. ನಮ್ಮಲ್ಲಿ ಸಣ್ಣಪುಟ್ಟ ಲಕ್ಷಣಗಳಷ್ಟೇ ಇರುವುದು' ಎಂದು ಹೇಳಿದ್ದಾರೆ.

  ವಾತಾವರಣದ ಕಾರಣದಿಂದ ಅಲ್ಲ

  ವಾತಾವರಣದ ಕಾರಣದಿಂದ ಅಲ್ಲ

  ನನ್ನ ಭಾವನನ್ನು ಹೊರತುಪಡಿಸಿ ಕುಟುಂಬದ ಎಲ್ಲರಲ್ಲಿಯೂ ಪಾಸಿಟಿವ್ ವರದಿ ಬಂದಿದೆ. ಮನೆಯಲ್ಲಿನ ಸಿಬ್ಬಂದಿಯಲ್ಲಿಯೂ ಕಾಣಿಸಿಕೊಂಡಿದೆ. ಯಾರಲ್ಲಿಯೂ ತೀವ್ರ ಲಕ್ಷಣಗಳು ಕಂಡುಬಂದಿಲ್ಲ. ಯಾರಿಗಾದರೂ ಅನಾರೋಗ್ಯ ಉಂಟಾದಾಗ ಮಾತ್ರ ನಮಗೆ ಅದರ ತೀವ್ರತೆ ಅರ್ಥವಾಗುವುದು. ಡೆಹ್ರಾಡೂನ್‌ನಲ್ಲಿ ಒಮ್ಮೆ ಬಿಸಿಲು, ಒಮ್ಮೆ ಮಳೆ, ಶೀತದ ವಾತಾವರಣ ಹೀಗೆ ದಿನವೂ ಬದಲಾಗುತ್ತಿರುವುದರಿಂದ ಜ್ವರ ಬಂದಾಗಲೂ ವಾತಾವರಣದ ಬದಲಾವಣೆ ಕಾರಣದಿಂದ ಬಂದಿರಬಹುದು ಎಂದೇ ಭಾವಿಸುತ್ತೇವೆ ಎಂದು ಹೇಳಿದ್ದಾರೆ.

  ಉತ್ತರಾಖಂಡ ಸಚಿವ

  ಉತ್ತರಾಖಂಡ ಸಚಿವ

  ರಾಜಕುಮಾರಿ ಮೋಹೆನಾ ಕುಮಾರಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹರಿದ್ವಾರದಲ್ಲಿ ನಡೆದ ಭಾರಿ ಅದ್ಧೂರಿ ಸಮಾರಂಭದಲ್ಲಿ ಸುಯೇಶ್ ರಾವತ್ ಅವರನ್ನು ಮದುವೆಯಾಗಿದ್ದರು. ಮೋಹೆನಾ ಕುಮಾರಿ ತಂದೆ ಮಧ್ಯಪ್ರದೇಶದ ರೇವಾ ಸಂಸ್ಥಾನದ ರಾಜ. ಸುಯೇಶ್ ರಾವತ್ ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸತ್ಪಲ್ ಮಹಾರಾಜ್ ಅವರ ಮಗ. ಮೋಹೆನಾ ಕುಮಾರಿ, ಪತಿ ಸುಯೇಶ್ ರಾವತ್, ಮಾವ ಸತ್ಪಲ್ ಮಹಾರಾಜ್ ಮತ್ತು ಅತ್ತೆ ಅಮೃತಾ ರಾವತ್ ಸೇರಿದಂತೆ ಐವರಲ್ಲಿ ವೈರಸ್ ಇರುವುದು ಪತ್ತೆಯಾಗಿದೆ.

  English summary
  Actor Mohena Kumari Singh said she along with five family members tested coronavirus positive. Their 17 staff also tested Covid-19 positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X