»   » 'ಬಿಗ್ ಬಾಸ್' ಶೋಗೆ ಕ್ರೇಜಿಸ್ಟಾರ್ ರವಿಚಂದ್ರನ್

'ಬಿಗ್ ಬಾಸ್' ಶೋಗೆ ಕ್ರೇಜಿಸ್ಟಾರ್ ರವಿಚಂದ್ರನ್

Posted By:
Subscribe to Filmibeat Kannada

ಬಿಗ್ ಬಾಸ್ ರಿಯಾಲಿಟಿ ಶೋ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮನೆಯಲ್ಲಿ ಎಲ್ಲಾ ಹದಿನಾಲ್ಕು ಸದಸ್ಯರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಒಂದೊಂದೇ ಟಾಸ್ಕ್ ಗಳು ಶುರುವಾಗುತ್ತಿವೆ. ಯಾವಾಗ ಯಾರು ತಮ್ಮ ಸಹನೆಯನ್ನು ಕಳೆದುಕೊಳ್ಳುತ್ತಾರೋ ಗೊತ್ತಿಲ್ಲ.

ಪ್ರತಿ ವಾರದಲ್ಲಿ ಎರಡು ದಿನ ಅಂದರೆ ಶನಿವಾರ ಮತ್ತು ಭಾನುವಾರಗಳಂದು ಸುದೀಪ್ ಎಲಿಮಿನೇಷನ್ ರೌಂಡ್ ಹಾಗೂ ವಿಶೇಷ ಕಾರ್ಯಕ್ರಮ ನಿರೂಪಿಸುತ್ತಾರೆ. ಈ ಬಾರಿ ವಾರಾಂತ್ಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಪಾಲ್ಗೊಳ್ಳುತ್ತಿರುವುದು ವಿಶೇಷ. [ಮಾಣಿಕ್ಯ ಚಿತ್ರ ವಿಮರ್ಶೆ]

Sudeep and Ravichandran

ಅಂದರೆ ರವಿಚಂದ್ರನ್ ಅವರು ಬಿಗ್ ಬಾಸ್ ಮನೆಯ ಒಳಗೆ ಹೋಗದಿದ್ದರೂ ವಿಶೇಷ ಕಾರ್ಯಕ್ರಮದಲ್ಲಿ ಸುದೀಪ್ ಜೊತೆಗೆ ಇರುತ್ತಾರೆ. ಸುದೀಪ್ ಜೊತೆಗೆ ಬಿಗ್ ಬಾಸ್ ವೇದಿಕೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನುತ್ತವೆ ಮೂಲಗಳು. ಅವರ ಭಾಗದ ಸಂಚಿಕೆ ಇದೇ ಶನಿವಾರ (ಜು.5), ಭಾನುವಾರ (ಜು.6) ಪ್ರಸಾರವಾಗಲಿದೆ. ['ಬಿಗ್ ಬಾಸ್ ಸೀಸನ್ 2' ಹೈಲೈಟ್ಸ್]

ರವಿಚಂದ್ರನ್ ಹಾಗೂ ಸುದೀಪ್ ಅವರು 'ಮಾಣಿಕ್ಯ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿರುವುದು ಗೊತ್ತೇ ಇದೆ. ಇದೀಗ ಅವರ 'ದೃಶ್ಯ' ಚಿತ್ರವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಅವರು 'ಬಿಗ್ ಬಾಸ್' ಶೋಗೆ ಭೇಟಿ ನೀಡಿರುವುದು ವಿಶೇಷ.

ಈ ಮೂಲಕ ಬಿಗ್ ಬಾಸ್ ಸೀಸನ್ 2ನಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಸೆಲೆಬ್ರಿಟಿ ಎನ್ನಿಸಿಕೊಂಡಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್. ಇಷ್ಟಕ್ಕೂ ರವಿಚಂದ್ರನ್ ಶೋಗೆ ಬರುತ್ತಿರುವ ಉದ್ದೇಶ, ಹಿನ್ನೆಲೆ ಏನು ಎಂಬುದುಗೊತ್ತಾಗಬೇಕಾದರೆ ಭಾನುವಾರದ ತನಕ ಕಾಯಲೇಬೇಕು. ಅಂದಹಾಗೆ ನಲ್ಲ-ಮಲ್ಲರ ಕಾಂಬಿನೇಷನ್ ಚಿತ್ರ 'ಮಾಣಿಕ್ಯ' ಅರ್ಧ ಸೆಂಚುರಿ ಪೂರೈಸಿದೆ. (ಏಜೆನ್ಸೀಸ್)

English summary
Crazy Star Ravichandran will be seen in Bigg Boss Kannda 2, he is the first celebrity to be seen in the second season of Bigg Boss. sources says, the actor share the stage with host Sudeep.
Please Wait while comments are loading...