»   » ಕಿರುತೆರೆಗೆ ಅಡಿಯಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್

ಕಿರುತೆರೆಗೆ ಅಡಿಯಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್

Posted By:
Subscribe to Filmibeat Kannada

ಬೆಳ್ಳಿತೆರೆಯ ಕಲಾವಿದರು ಕಿರುತೆರೆಯಲ್ಲಿ ಮಿಂಚುವುದು ಹೊಸದೇನಲ್ಲ. ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಲೂಸ್ ಮಾದ ಯೋಗಿ...ಹೀಗೆ ಇಂದಿನ ಎಲ್ಲಾ ಬಹು ಬೇಡಿಕೆಯ ಸ್ಟಾರ್ ಗಳು ಕಿರುತೆರೆಯಲ್ಲಿ ಒಂದು ಕೈ ನೋಡಿದ್ದಾರೆ.

ಇನ್ನೂ ಹಿರಿಯ ನಟರ ಪೈಕಿ, ಶ್ರೀನಾಥ್, ಭಾರತಿ ವಿಷ್ಣುವರ್ಧನ್ ಮತ್ತು ಜಯಂತಿ ಕಿರುತೆರೆಯಲ್ಲೂ ಸೈ ಅನಿಸಿಕೊಂಡಿದ್ದಾರೆ. ಇವರೆಲ್ಲರ ಪಟ್ಟಿಯಲ್ಲಿ ಇದೀಗ ಲೇಟೆಸ್ಟ್ ಆಗಿ ಎಂಟ್ರಿಕೊಡುತ್ತಿರುವುದು ಕ್ರೇಜಿ ಸ್ಟಾರ್ ರವಿಚಂದ್ರನ್.

Crazy Star Ravichandran1

ನಂಬುವುದಕ್ಕೆ ಸ್ವಲ್ಪ ಕಷ್ಟವಾದರೂ, ಗಾಂಧಿನಗರದ ಮೂಲಗಳ ಪ್ರಕಾರ ಅಭಿಮಾನಿಗಳ ಪ್ರೀತಿಯ 'ಮಲ್ಲ' ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ. ಹಾಗಂತ, ರವಿಮಾಮ ಯಾವುದೋ ಸೀರಿಯಲ್ ಮಾಡುತ್ತಿಲ್ಲ. ರಿಯಾಲಿಟಿ ಶೋಗೆ ಹೋಸ್ಟ್ ಆಗಿ ಬರುತ್ತಿಲ್ಲ.

ಇವೆಲ್ಲವನ್ನೂ ಪಕ್ಕಕ್ಕಿಟ್ಟು, ತೀರ್ಪುಗಾರರಾಗಿ ರವಿಮಾಮ ಸಣ್ಣ ಪರದೆ ಮೇಲೆ ಮಿಂಚಲಿದ್ದಾರೆ. ಅದು ಯಾವ ಶೋಗೆ ಅಂತ ಕೇಳಿ. ಈಟಿವಿ ವಾಹಿನಿಯ ಜನಪ್ರಿಯ 'ಡ್ಯಾನ್ಸಿಂಗ್ ಸ್ಟಾರ್' ಕಾರ್ಯಕ್ರಮದಲ್ಲಿ.

Crazy Star Ravichandran

ಹೌದು, ಸದ್ಯದಲ್ಲೇ ಈಟಿವಿ ವಾಹಿನಿಯಲ್ಲಿ 'ಡ್ಯಾನ್ಸಿಂಗ್ ಸ್ಟಾರ್' ಕಾರ್ಯಕ್ರಮದ ಎರಡನೇ ಆವೃತ್ತಿ ಶುರುವಾಗಲಿದೆ. ಅದರಲ್ಲಿ ಮುಖ್ಯ ತೀರ್ಪುಗಾರರಾಗುವುದಕ್ಕೆ ಈಟಿವಿ ವಾಹಿನಿ ಮುಖ್ಯಸ್ಥರು ರವಿಚಂದ್ರನ್ ಬಳಿ ಮಾತುಕತೆ ನಡೆಸಿದ್ದಾರೆ. ಇದಕ್ಕೆ ರವಿಮಾಮ ಕೂಡ 'ಓಕೆ' ಅಂದಿದ್ದಾರೆ ಅನ್ನುತ್ತಿವೆ ಮೂಲಗಳು.

ರವಿಚಂದ್ರನ್ ಜೊತೆ ತೀರ್ಪುಗಾರರಾಗಿ ಇನ್ಯಾರ್ಯಾರು ಇರಲಿದ್ದಾರೆ ಅನ್ನುವುದು ಗುಟ್ಟಾಗಿದೆ. ಕಳೆದ ಬಾರಿ 'ಡ್ಯಾನ್ಸಿಂಗ್ ಸ್ಟಾರ್' ನಲ್ಲಿದ್ದ ರಕ್ಷಿತಾ ಈ ಬಾರಿ ಪಾಲ್ಗೊಳ್ಳುತ್ತಿಲ್ಲ ಅಂತ ಅವರೇ ಕ್ಲಿಯರ್ ಮಾಡಿದ್ದಾರೆ. [ಮತ್ತೆ ಕಿರುತೆರೆಗೆ ಕಾಲಿಡುತ್ತಾರಾ ರಕ್ಷಿತಾ ಪ್ರೇಮ್.?]

rakshitha

ಈಗಾಗಲೇ 'ಡ್ಯಾನ್ಸಿಂಗ್ ಸ್ಟಾರ್' ಮೊದಲ ಸೀಸನ್ ನ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಗೆ ರವಿಮಾಮ ಅತಿಥಿಯಾಗಿ ಭಾಗವಹಿಸಿದ್ದರು. ಹಾಗೆ, ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುತ್ತಿರುವ 'ಸೂಪರ್ ಮಿನಿಟ್' ಕಾರ್ಯಕ್ರಮದಲ್ಲೂ ಕ್ರೇಜಿ ಸ್ಟಾರ್ ಮಾಡಿದ ಕಮಾಲ್ ನ ನೀವೆಲ್ಲರೂ ನೋಡಿದ್ದೀರಾ.

ಇದೀಗ ತೀರ್ಪುಗಾರರಾಗಿ ರವಿಮಾಮನ ಹೊಸ ಅಧ್ಯಾಯ ಸಣ್ಣ ಪರದೆ ಮೇಲೆ ಶುರುವಾಗುತ್ತಿದೆ. ಅದನ್ನ ಆನಂದಿಸುವುದಕ್ಕೆ ನೀವು ತಯಾರಾಗಿ. (ಫಿಲ್ಮಿಬೀಟ್ ಕನ್ನಡ)

English summary
If the sources are to be believed, Crazy Star Ravichandran is being a part of Popular Tv Reality Show Dancing Stars-2. Ravichandran is roped in to judge the contestants in the show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada