»   »  'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಗೆದ್ದ ಬಾಲಕಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು.?

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಗೆದ್ದ ಬಾಲಕಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು.?

Posted By:
Subscribe to Filmibeat Kannada
Guess the prize amount won by Dance Dance Juniors winner | FIlmibeat Kannada

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ರಿಯಾಲಿಟಿ ಶೋ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ಮುಗಿದಿದೆ.

ಕಳೆದ ಎರಡೂವರೆ ತಿಂಗಳಿನಿಂದ ಡ್ಯಾನ್ಸ್ ಪ್ರಿಯರನ್ನ ರಂಜಿಸುತ್ತಾ ಬಂದಿದ್ದ ಅದ್ಭುತ ಕಾರ್ಯಕ್ರಮದಲ್ಲಿ ಒಬ್ಬ ಪ್ರತಿಭಾನ್ವಿತ ಬಾಲಕಿ ಗೆದ್ದಿದ್ದಾರೆ. ಮೊದಲ ಸ್ಥಾನ ಪಡೆದ ಈ ಬಾಲಕಿಗೆ ಆಕರ್ಷಕ ಪ್ರಶಸ್ತಿ ಮತ್ತು ಭರ್ಜರಿ ಮೊತ್ತ ಬಹುಮಾನವಾಗಿ ಸಿಕ್ಕಿದೆ.

ಹಾಗಿದ್ರೆ, 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಫಿನಾಲೆ ಕೀರಿಟಕ್ಕೆ ಮುತ್ತಿಟ್ಟಿದ್ದು ಯಾರು? ಮೊದಲ ಬಹುಮಾನ ಗೆದ್ದ ಡ್ಯಾನ್ಸ್ ಜೂನಿಯರ್ ಗೆ ಸಿಕ್ಕ ಬಹುಮಾನವೆಷ್ಟು? ಎಂದು ತಿಳಿದುಕೊಳ್ಳಲು ಮುಂದೆ ಓದಿ......

ಫಿನಾಲೆ ವೇದಿಕೆಯಲ್ಲಿ ಧೂಳೆಬ್ಬಿಸಿದ ಜೂನಿಯರ್ಸ್

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಫಿನಾಲೆ ವೇದಿಕೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ತಮ್ಮ ಸೂಪರ್ ಡ್ಯಾನ್ಸ್ ಮೂಲಕ ಧೂಳೆಬ್ಬಿಸಿದರು. ಕೊನೆಯ ಹಂತದಲ್ಲಿ 5 ಜನ ಮಕ್ಕಳು ಫಿನಾಲೆ ವೇದಿಕೆಯಲ್ಲಿದ್ದರು. ಒಬ್ಬರು ಪ್ರಶಸ್ತಿಗೆ ಭಾಜನರಾದರು.

ನೇತ್ರಾವತಿ ವಿನ್ನರ್

ಕಾರ್ಯಕ್ರಮದ ಮೊದಲ ದಿನದಿಂದಲೂ ಮೋಡಿ ಮಾಡುತ್ತಾ ಬಂದಿದ್ದ ನೇತ್ರಾವತಿ ಈ ಬಾರಿಯ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕೀರಿಟಕ್ಕೆ ಮುತ್ತಿಟ್ಟಿದ್ದಾರೆ.

ವಿನ್ನರ್ ಗೆ ಸಿಕ್ಕ ಬಹುಮಾನವೆಷ್ಟು?

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಗೆದ್ದ ನೇತ್ರಾವತಿಗೆ ಸ್ಟಾರ್ ಸುವರ್ಣ ವಾಹಿನಿ ಕಡೆಯಿಂದ 10 ಲಕ್ಷ ರೂಪಾಯಿ ಮತ್ತು ಪ್ರಶಸ್ತಿ ಬಹುಮಾನವಾಗಿ ಸಿಕ್ಕಿದೆ.

ದ್ವಿತೀಯ ಸ್ಥಾನ ಪಡೆದ ಹೃತಿಕ

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಫಿನಾಲೆಯಲ್ಲಿ ನೇತ್ರಾವತಿ ಮೊದಲನೇ ಬಹುಮಾನ ಪಡೆದುಕೊಂಡರೇ, ರಿತಿಕಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಪವರ್ ಸ್ಟಾರ್ ಮುಖ್ಯ ಅತಿಥಿ

'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಕಾರ್ಯಕ್ರಮ ಮೊದಲ ಎಪಿಸೋಡ್ ಗೆ ಚಾಲನೆ ಕೊಟ್ಟಿದ್ದ ಪುನೀತ್ ರಾಜ್ ಕುಮಾರ್, ಗ್ರ್ಯಾಂಡ್ ಫಿನಾಲೆಯಲ್ಲೂ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ನಟಿ ರಶ್ಮಿಕಾ ಮಂದಣ್ಣ ಕೂಡ ಭಾಗಿಯಾಗಿದ್ದರು.

English summary
Star Suvarna's Dance Dance Juniors winner is nethravathi, Hrithika Gets Seconds Place in the finale.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X