»   » ಡ್ಯಾನ್ಸ್ ಶೋನ ಮಧ್ಯದಲ್ಲೇ ಖುಷ್ಬೂ ಎದ್ದು ಹೋಗಿದ್ದು ಯಾಕೆ

ಡ್ಯಾನ್ಸ್ ಶೋನ ಮಧ್ಯದಲ್ಲೇ ಖುಷ್ಬೂ ಎದ್ದು ಹೋಗಿದ್ದು ಯಾಕೆ

Posted By:
Subscribe to Filmibeat Kannada

ಕನ್ನಡದ ಖಾಸಗಿ ಚಾನಲ್ ಸುವರ್ಣ ವಾಹಿನಿಯಲ್ಲಿ ನಿನ್ನೆಯಿಂದ ಪ್ರಸಾರವಾಗುವ 'ಡ್ಯಾನ್ಸ್ ಡ್ಯಾನ್ಸ್' ರಿಯಾಲಿಟಿ ಶೋನ ಪ್ರತೀ ಸಂಚಿಕೆ ಹೊಸತನದಿಂದ ಕೂಡಿದೆ. ಜೊತೆಗೆ ಸೂಪರ್ ಹಿಟ್ ಸೆಲೆಬ್ರಿಟಿಗಳಿಂದ ವೇದಿಕೆ ರಂಗು ರಂಗಿನಿಂದ ಕೂಡಿದೆ.

ಅಂದಹಾಗೆ ಈ ವಾರದ ಸಂಚಿಕೆಗೆ ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅದ್ಭುತ ಚಿತ್ರ 'ರಣಧೀರ'ದ ನಾಯಕಿ ಖುಷ್ಬೂ ಅವರು ಸ್ಪೆಷಲ್ ಜಡ್ಜ್ ಆಗಿ ಆಗಮಿಸಿ ವೇದಿಕೆಗೆ ಮತ್ತಷ್ಟು ಮೆರುಗು ತಂದಿದ್ದಾರೆ.[100 ಅಡಿ ಎತ್ತರದ ವೇದಿಕೆಯಲ್ಲಿ 'ಡ್ಯಾನ್ಸ್ ಡ್ಯಾನ್ಸ್' ಶೋ]

ಕನ್ನಡ ಕಿರುತೆರೆ ಕ್ಷೇತ್ರದಲ್ಲಿಯೇ ಪ್ರಪ್ರಥಮ ಬಾರಿಗೆ ರಿಯಾಲಿಟಿ ಶೋ ಗೆ ಎವರ್ ಗ್ರೀನ್ ನಟಿ ಖುಷ್ಬೂ ಅವರು ಆಗಮಿಸಿರುವುದರಿಂದ, ಈ ಬುಧವಾರದ (ಫೆಬ್ರವರಿ 10) 'ಡ್ಯಾನ್ಸ್ ಡ್ಯಾನ್ಸ್ ಶೋ' ತುಂಬಾ ವಿಭಿನ್ನವಾಗಿದೆ.

ನಟಿ ಖುಷ್ಬೂ ಅವರು 'ಡ್ಯಾನ್ಸ್ ಡ್ಯಾನ್ಸ್' ಶೋ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ತಮಗಿರುವ ಅಪಾರ ಒಲವನ್ನು ಹಂಚಿಕೊಂಡಿದ್ದಾರೆ. ಅವರು ಇದೀಗ ಒಬ್ಬ ಜನಪ್ರಿಯ ನಟಿಯಾಗಿ ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬೆಳೆದು ನಿಲ್ಲಲು ಕಾರಣ ಕ್ರೇಜಿಸ್ಟಾರ್ ರವಿಚಂದ್ರನ್ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.[ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಡ್ಯಾನ್ಸ್ ಶೋ.!]

ಅಂದಹಾಗೆ ನಟಿ ಖುಷ್ಬೂ ಅವರು ಡ್ಯಾನ್ಸ್ ಡ್ಯಾನ್ಸ್ ಶೋ ಕಾರ್ಯಕ್ರಮ ಆಗುತ್ತಿರುವ ಸಂದರ್ಭದಲ್ಲಿ ಮಧ್ಯದಲ್ಲೇ ವೇದಿಕೆಯಿಂದ ಎದ್ದು ಹೋದ ರೋಚಕ ಪ್ರಸಂಗ ಕೂಡ ನಡೆದಿದೆ. ಹೆಚ್ಚಿನ ವಿವರ ಮುಂದೆ ಓದಿ ಕೆಳಗಿನ ಸ್ಲೈಡುಗಳಲ್ಲಿ...

ವೇದಿಕೆಗೆ ಖುಷ್ಬೂ ಜಬರ್ದಸ್ತ್ ಎಂಟ್ರಿ

ಕನ್ನಡ ಕಿರುತೆರೆ ಕ್ಷೇತ್ರಕ್ಕೆ ಮೊದಲನೇ ಬಾರಿಗೆ ಆಗಮಿಸಿದ ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಅವರನ್ನು ಕನ್ನಡದಲ್ಲಿ ಅವರು ನಟಿಸಿದ ಚಿತ್ರದ ಹಾಡುಗಳ ಮೂಲಕ ಬರಮಾಡಿಕೊಳ್ಳಲಾಯಿತು. ವೇದಿಕೆಯಲ್ಲಿ ಸ್ಪರ್ಧಿಗಳೊಂದಿಗೆ ನಟಿ ಖುಷ್ಬೂ ಅವರು ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದರು.[ಖುಷ್ಬೂ ಸೀರೆಯ ಮೇಲೆ ರಾಮ ಕೃಷ್ಣ ಹನುಮಂತ!]

ರವಿಚಂದ್ರನ್ ಬಗ್ಗೆ ಮೆಚ್ಚುಗೆ ಮಾತುಗಳು

'ನಾನೊಬ್ಬ ಜನಪ್ರಿಯ ನಟಿಯಾಗಿದ್ದೇನೆ ಎಂದರೆ ಅದಕ್ಕೆ ರವಿಚಂದ್ರನ್ ಅವರು ಕಾರಣ. ನನಗೆ ನಟನೆಗೆ ರವಿಚಂದ್ರನ್ ಗುರುಗಳು, ಡ್ಯಾನ್ಸ್ ಬರುತ್ತೆ ಅಂದರೆ ಅದಕ್ಕೆ ಚಿನ್ನಿ ಮಾಸ್ಟರ್ ಕಾರಣ. ಎಂದು ಕನ್ನಡ ಬಗೆಗೆ ನಟಿ ಖುಷ್ಬೂ ಅವರಿಗೆ ಇರುವ ಅಭಿಮಾನವನ್ನು ಈ ಮೂಲಕ ವ್ಯಕ್ತಪಡಿಸಿದರು. ಹಾಗೂ ಡ್ಯಾನ್ಸ್ ವೇದಿಕೆಯಲ್ಲಿ ರವಿಚಂದ್ರನ್ ಮತ್ತು ಚಿನ್ನಿ ಮಾಸ್ಟರ್ ಗೆ ಅಭಿನಂದನೆ ಸಲ್ಲಿಸಿದರು.

ಖುಷ್ಬೂ ಡ್ಯಾನ್ಸ್

ಮೇಕಪ್ಪ್ ಮಾಡಿ ಜ್ಯೂನಿಯರ್ ರವಿಚಂದ್ರನ್ ಸ್ಟೇಜ್ ಮೇಲೆ ಬಂದೊಡನೆ ನಟಿ ಖುಷ್ಬೂ ಅವರು ಉತ್ಸಾಹದಿಂದ ವೇದಿಕೆಗೆ ನಡೆದರು ಮತ್ತು ಜ್ಯೂನಿಯರ್ ವಿಷ್ಣುವರ್ಧನ್ ಮಾಡಿದ್ದ ಸ್ಪರ್ಧಿಗಳೊಡನೆ ತಾವು ಸೇರಿ ಸಕತ್ತಾಗಿ ಡ್ಯಾನ್ಸ್ ಮಾಡಿದರು.

ಅಕುಲ್ ಮಸ್ತಿ

ಕಾರ್ಯಕ್ರಮ ನಿರೂಪಕ ಅಕುಲ್ ಬಾಲಾಜಿ ಅವರು ನಟಿ ಖುಷ್ಬೂ ವೇದಿಕೆಗೆ ಆಗಮಿಸಿದ ತಕ್ಷಣ ಅವರ ಕೈಗಳಿಗೆ ಕಿಸ್ ಮಾಡಿ ಸಖತ್ ಮಸ್ತಿ ಮಾಡುವ ಮೂಲಕ ಸ್ಪರ್ಧಿಗಳನ್ನು ಮತ್ತು ನೆರೆದಿದದ್ದವರನ್ನು ರಂಜಿಸಿದರು.

'ರಣಧೀರ'ನ ನಾಯಕಿಗೆ ಗಿಫ್ಟ್

'ರಣಧೀರ' ಚಿತ್ರದ ನಾಯಕಿ ಖುಷ್ಬೂ ಅವರಿಗೆ ಸ್ಪರ್ಧಿ ಭೌತೀಶ್ ಅವರು ಗಾಜಿನ ತಾಜ್ ಮಹಲ್ ಗಿಫ್ಟ್ ಮಾಡಿ ಅವರೊಂದಿಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಪೈಟಿಂಗ್ ಇಷ್ಟಪಡುವ ನಟಿ ಖುಷ್ಬೂ ಅವರಿಗೆ ಅಭಿಮಾನಿಗಳು ಒಂದು ಫೊಟೋ ಫ್ರೇಮ್ ಮಾಡಿ ಉಡುಗೊರೆ ನೀಡಿದರು.

ವೇದಿಕೆಯಿಂದ ಹೊರನಡೆದ ಖುಷ್ಬೂ

ಅಂದಹಾಗೆ ಬಹಳ ಖುಷಿಯಿಂದ ನಡೆಯುತ್ತಿದ್ದ ಶೋ ನಡುವೆ ನಟಿ ಖುಷ್ಬೂ ಅವರು ಸಡನ್ ಆಗಿ ವೇದಿಕೆಯಿಂದ ಹೊರ ನಡೆದಿದ್ದಾರೆ. ಸ್ಪರ್ಧಿಗಳಾದ ಅಜಿತ್ ಮತ್ತು ಹರ್ಷಿತಾ ಅವರ ಪರ್ಫಾಮೆನ್ಸ್ ಮುಗಿದ ನಂತರ ಶೋ ನಡುವೆ ಎದ್ದು ಹೋಗಲು ಕಾರಣವೇನು? ಎಂಬುದನ್ನು ಕಾದು ನೋಡಬೇಕಿದೆ. ಇದಕ್ಕೆಲ್ಲಾ ಉತ್ತರ ಇದೇ ಬುಧವಾರ (ಫೆಬ್ರವರಿ 10) ರಾತ್ರಿ 7.30ಕ್ಕೆ ಸಿಗಲಿದೆ ತಪ್ಪದೇ ಸುವರ್ಣ ವಾಹಿನಿ ವೀಕ್ಷಿಸಿ.

English summary
Tamil Actress Kushboo as celebrity judge in Suvarna Channels 'Dance Dance' reality show. The show will be air on 10th february at 7.30 PM.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada